Posts

Showing posts from November, 2023

ಓದಿನ ಸುಖ - ಬದುಕು ಬದಲಿಸಬಹುದು

Image
  ಪುಸ್ತಕದ ಹೆಸರು : ಬದುಕು ಬದಲಿಸಬಹುದು ಲೇಖಕರು : ನೇಮಿಚಂದ್ರ            ಮಾನವನ ಬದುಕು ಹಲವು ಭಾವಗಳ ಮಿಶ್ರಣ. ಸೋಲು-ಗೆಲುವು, ಸುಖ-ದುಃಖ, ಸಮ್ಮಾನ-ಅವಮಾನ ಇವುಗಳು ಎಲ್ಲಾ ಮನುಷ್ಯರ ಜೀವನದಲ್ಲಿ ಸಾಮಾನ್ಯ . ಆದರೆ ದುಃಖದ ಸನ್ನಿವೇಶಗಳು ಬಂದಾಗ ಮನುಷ್ಯ ಹೇಗೆ ವರ್ತಿಸುತ್ತಾನೆ? ಇತರರ ಸಂಕಷ್ಟಕ್ಕೆ ಹೇಗೆ ಪ್ರತಿಕ್ರಿಯಿಸುತ್ತಾನೆ? ಅಪಮಾನಗಳನ್ನು ಎದುರಿಸಿ ಹೇಗೆ ಆತ್ಮವಿಶ್ವಾಸದಿಂದ ಮುಂದುವರಿಯುತ್ತಾನೆ? ಎಂಬುದನ್ನು ಈ ಪುಸ್ತಕದಲ್ಲಿ ಲೇಖಕಿಯು ಹಲವು ಉದಾಹರಣೆಗಳ ಮೂಲಕ ಹೇಳಿದ್ದಾರೆ. ಸೋಲಿನಿಂದ ಕಂಗೆಟ್ಟಾಗ, ಅಪಮಾನದಿಂದ ಕುಸಿದಾಗ ಈ ಪುಸ್ತಕವನ್ನು ಓದಿದಾಗ ಮನಸ್ಸಿಗೆ ಆತ್ಮವಿಶ್ವಾಸ ಮೂಡುವುದು ಸುಳ್ಳಲ್ಲ.             'ಸೋಲಿಲ್ಲದ ಮನೆಯ ಸಾಸಿವೆ' ಎಂಬ ಬರಹದಲ್ಲಿ ಬರೀ ಗೆಲ್ಲುವುದೊಂದನ್ನೇ ನಮ್ಮ ಮಕ್ಕಳಿಗೆ ಹೇಳಿಕೊಟ್ಟು, ಹೇಗೆ ಚಿಕ್ಕ ಸೋಲು ಸಹ ಅವರನ್ನು ಧೃತಿಗೆಡಿಸಿ ಆತ್ಮಹತ್ಯೆಯಂತಹ ದುಡುಕಿನ ನಿರ್ಧಾರಗಳನ್ನು ಕೈಗೊಂಡು ಬಿಡುತ್ತಿದ್ದಾರೆ ಎಂದು ಹೇಳುತ್ತಾ, ಮಕ್ಕಳು ಮಾತ್ರವಲ್ಲದೆ ಯುವಜನರು ಸಹ ಸೋಲು ಅವಮಾನಗಳನ್ನು ಎದುರಿಸಲು ಸಾಧ್ಯವಾಗದೆ ಬದುಕಿನಿಂದ ವಿಮುಖರಾಗುತ್ತಿರುವ ಬಗ್ಗೆ ಎಚ್ಚರಿಸುತ್ತಾ, " ಕಲಿಸುವುದು ಹೇಗೆ ಸೋಲನ್ನು , ನೋವನ್ನು, ನಿರಾಶೆಯನ್ನು, ಕೆಲವೊಮ್ಮೆ ತಮ್ಮ ತಪ್ಪೇ ಇಲ್ಲದೆ ಮುಗಿಬೀಳುವ ಅಪಮಾನವನ್ನು ಎದುರಿಸುವುದನ...