ದೇವತೆಗಳ ದ್ವೀಪದಲ್ಲಿ ಭಾಗ -2
ದೇವತೆಗಳ ದ್ವೀಪದಲ್ಲಿ ಭಾಗ 1 ಮೊದಲ ದಿನ ನಾವು ಉಳಿದುಕೊಂಡ ಹೋಟೆಲ್ ಗೆ ಹತ್ತಿರವಿದ್ದ ಸ್ಥಳಗಳನ್ನು ನೋಡುವುದಾಗಿತ್ತು. ಬೆಳಗಿನ ಉಪಹಾರವನ್ನು ಮುಗಿಸಿ ಉಬುಡು ಅರಮನೆಯನ್ನು ನೋಡಿದೆವು. ಅಲ್ಲಿ ಜಾತ್ರೆಯೋ, ಹಬ್ಬವೋ ಇದ್ದುದರಿಂದ ಎಲ್ಲಾ ಕಡೆ ಸಾರ್ವಜನಿಕರಿಗೆ ಪ್ರವೇಶವಿರಲಿಲ್ಲ. ಕೆಲವು ಕಡೆ ತೆಂಗಿನ ಗರಿಗಳನ್ನು ನೇಯ್ದು, ಹೂಗಳಿಂದ ಅಲಂಕಾರವನ್ನು ಮಾಡಲಾಗಿತ್ತು. ಅಲ್ಲಿಂದ ಅಂದಾಜು 300m ಅಂತರದಲ್ಲಿದ್ದ ಸರಸ್ವತಿ ದೇವಸ್ಥಾನಕ್ಕೆ ಹೋದೆವು. ದೇವಾಲಯದ ಮಧ್ಯ ಭಾಗದಲ್ಲಿ ತಾವರೆ ಕೊಳವಿದ್ದು , ಸುತ್ತಲೂ ದೇವಾಲಯದ ಪ್ರಾಕಾರವಿದ್ದು ವಿವಿಧ ಪ್ರತಿಮೆಗಳಿಂದ ಆವೃತವಾಗಿದೆ. ನಾವು ಹೋದ ಬಾಲಿಯ ಎಲ್ಲಾ ದೇವಾಲಯಗಳಲ್ಲೂ ಒಳಗಿನ ಆವರಣಕ್ಕೆ ಬಾಲಿಯ ಸ್ಥಳೀಯರನ್ನು ಬಿಟ್ಟು ಉಳಿದವರಿಗೆ ಪ್ರವೇಶವಿರಲಿಲ್ಲ. ಈ ದೇವಸ್ಥಾನಕ್ಕೆ ಬಂದವರೆಲ್ಲರೂ ಅವರು ಕೊಟ್ಟ ಒಂದು ಬಟ್ಟೆಯನ್ನು ಧರಿಸಿಕೊಳ್ಳಬೇಕಿತ್ತು. ಇಷ್ಟು ನೋಡುವ ವೇಳೆಗೆ ಮಧ್ಯಾಹ್ನವಾಗಿತ್ತು. ಅಲ್ಲೇ ಹತ್ತಿರವಿದ್ದ ಆರ್ಟ್ ಗ್ಯಾಲರಿ ಹಾಗೂ ಕೆಲವು ಅಂಗಡಿಗಳಲ್ಲಿ ಶಾಪಿಂಗ್ ನಡೆಸಿ ಊಟಕ್ಕಾಗಿ ಭಾರತೀಯ ಹೊಟೇಲ್ ಅನ್ನು ಹುಡುಕತೊಡಗಿದೆವು. ಬಾಲಿಯಲ್ಲಿ ಭಾರತೀಯ ಹೊಟೇಲ್ ಗಳಿಗೆ ಹಾಗೂ ಭಾರತೀಯ ಶೈಲಿಯ ಊಟಕ್ಕೆ ಏನೂ ಕೊರತೆ ಇರಲಿಲ್ಲ. ಹತ್ತಿರದಲ್ಲೇ ಪಂಜಾಬಿ ಹೊಟೇಲ್ ಸಿಕ್ಕಿ ಅಲ್ಲೇ ಮಧ್ಯಾಹ್ನದ ಊಟ...