ಬಾಲ್ಕನಿಯಲೊಂದು ಸಸಿ
ಮೊಗ್ಗುಗಳು ಯಾವಾಗ ಅರಳುತ್ತವೆ ಎಂದು ಕಾಯುತ್ತಿದ್ದಾಳೆ ಹೂ ಅರಳಿದ ಖುಷಿ ಹೂಗಳಿರುವ ಕ್ಲಿಪ್ ನ ಜೊತೆ ಸೇವಂತಿಗೆ ಹೂ ಜೊತೆಗೆ ಹಣೆಯಲ್ಲಿ ಹೂವಿನ ಬೊಟ್ಟು ಅಪಾರ್ಟ್ಮೆಂಟಿನ ಹೂ ಗಿಡಗಳ ಜೊತೆ ಮಾತು-ಕಥೆ ಮೊದಲಿಂದಲೂ ಮಗಳಿಗೆ ಗಿಡಗಳೆಂದರೆ ಬಹಳ ಪ್ರೀತಿ. ಅವತಾರ್ ಮೂವಿಯನ್ನು ನೋಡಿದ ಮೇಲಂತೂ ಅವರು ಗಿಡಗಳನ್ನು ಸ್ಪರ್ಶಿಸುವಂತೆ ಇವಳೂ ಕೂಡ ಗಿಡಗಳ ಎಲೆಗಳನ್ನು, ಹೂಗಳನ್ನು ಸ್ಪರ್ಶಿಸಿ ಖುಷಿ ಪಡುತ್ತಿದ್ದಳು. ನಾವಿರುವ ವಸತಿ ಸಮುಚ್ಚಯದಲ್ಲಿ ಹೆಚ್ಚಿನ ಎಲ್ಲಾ ಮನೆಗಳ ಬಾಲ್ಕನಿಯಲ್ಲಿರುವ ಗಿಡಗಳನ್ನು ನೋಡಿ "ನಾವು ಯಾವಾಗ ಹೀಗೆ ಗಿಡಗಳನ್ನು ನೆಡುವುದು?" ಎಂದು ಪ್ರಶ್ನಿಸತೊಡಗಿದಳು. "ನಾವು ವಾರಾಂತ್ಯದಲ್ಲಿ ಅಜ್ಜ ಅಜ್ಜಿಯನ್ನು ನೋಡಲು ಮನೆಗೆ ಹೋದಾಗ ಅವುಗಳಿಗೆ ನೀರು ಹಾಕುವುದು ಯಾರು? ಹಾಗಾಗಿ ಇಲ್ಲಿ ಗಿಡಗಳನ್ನು ನೆಡುವುದು ಬೇಡ" ಎಂದು ನಾನು ನಿರಾಕರಿಸಿದೆ. ನಾನು ಹಾಗೆ ಹೇಳಿದ್ದು ಅದೆಷ್ಟು ಅರ್ಥವಾಯಿತೋ ಗೊತ್ತಿಲ್ಲ. ಆಮೇಲೆ ಅವಳು ಪುನಃ ಗಿಡ ನೆಡುವುದರ ಬಗ್ಗೆ ಕೇಳಲಿಲ್ಲ. ಆದರೆ ಊರಿಗೆ ಹೋದಾಗಲೆಲ್ಲಾ ಅಜ್ಜಿಯ ಜೊತೆ ಹೂ ಗಿಡಗಳನ್ನು ನೆಡುವುದು, ಅವುಗಳಿಗೆ ನೀರನ್ನು ಹಾಕುವುದು ಅವಳ ಇಷ್ಟದ ಕೆಲಸವಾಗಿತ್ತು. ಅಲ್ಲದೇ ಹೂಗಳನ್ನು ಕೊಯಿದು ನಾವಿಬ್ಬರೂ ಒಟ್ಟಿಗೆ ಕೂತು ತಯಾರಿಸಿದ ಪೇಪರ್ ಕಪ...