ಓದಿನ ಸುಖ "ನಿರ್ಮಾಲ್ಯ"
ಪುಸ್ತಕದ ಹೆಸರು : ನಿರ್ಮಾಲ್ಯ ಲೇಖಕರು : ಚಂದ್ರಶೇಖರ ಭಂಡಾರಿ ಈ ಪುಸ್ತಕ ನನಗೆ ಲಭಿಸಿದ್ದು ಅತ್ಯಂತ ಆಕಸ್ಮಿಕವಾಗಿ. ಐದು ವರ್ಷಗಳ ಹಿಂದೆ ನನ್ನ ಮದುವೆ ನಿಶ್ಚಯವಾದಾಗ, ಆಮಂತ್ರಣ ಪತ್ರಿಕೆಯನ್ನು ಕೊಡಲು ನಾನು ಕಲಿತ ಗುರುಕುಲಕ್ಕೆ ಹೋದಾಗ, ಅದೇ ದಿನ 'ನಿರ್ಮಾಲ್ಯ' ದ ಬಿಡುಗಡೆ ಸಮಾರಂಭ ಮಂಗಳೂರಿನ ಸಂಘನಿಕೇತನದಲ್ಲಿತ್ತು. ಹೇಗೂ ನಾನು ಕೂಡ ಮಂಗಳೂರಿಗೆ ಹಿಂತಿರುಗುವವಳಿದ್ದ ಕಾರಣ ಪುಸ್ತಕ ಬಿಡುಗಡೆ ಸಮಾರಂಭಕ್ಕೆ ಹೋಗಿದ್ದೆ. ಆಗ ನನಗೆ ಈ ಪುಸ್ತಕವನ್ನು ಪ್ರೀತಿಯಿಂದ ಶ್ರೀಮತಿ ಮಾತೃಶ್ರೀ ಉಡುಗೊರೆ ರೂಪದಲ್ಲಿ ನೀಡಿದ್ದರು. ಮೊದಲ ಬಾರಿಗೆ ಉಡುಗೊರೆ ರೂಪದಲ್ಲಿ ಸಿಕ್ಕಿದ ಪುಸ್ತಕ ಇದಾಗಿತ್ತು. ಗುರುಕುಲಕ್ಕೆ ಕೃಷ್ಣಪ್ಪ ತಾತ ಬರುತ್ತಾರೆ ಎಂದು ಗೊತ್ತಾದಾಗ ನಮ್ಮ ಮನದಲ್ಲಿ ಖುಷಿಯ ಸಂಚಾರ. ಮನೆಯಲ್ಲಿರುವ ಹಿರಿಯಜ್ಜನಂತೆ ನಮಗೆಲ್ಲಾ ಕಥೆಯನ್ನು ಹೇಳಿ ಮನೆಯ ನೆನಪೂ ಬಾರದಂತೆ ನಡೆದುಕೊಳ್ಳುತ್ತಿದ್ದರು. ಪ್ರತೀ ಬಾರಿ ಗುರುಕುಲಕ್ಕೆ ಬರುವ ಮೊದಲು ನಮಗೆ ಒಂದೊಂದು ಚಟುವಟಿಕೆಗಳನ್ನು ನೀಡುತ್ತಿದ್ದರು. ಒಮ್ಮೆ ಮೂಲಾರಾಮಾಯಣದ 100 ಶ್ಲೋಕಗಳ ಕಂಠಪಾಠ, ಇನ್ನೊಮ್ಮೆ ಎಲ್ಲಾ ಭಾಷೆಗಳ ಒಂದೊಂದು ಪದ್ಯ - ...