ಓದಿನ ಸುಖ "ಇಲ್ಲಿಯವರೆಗಿನ ನೇಮಿಚಂದ್ರರ ಕಥೆಗಳು"
ಪುಸ್ತಕದ ಹೆಸರು: ಇಲ್ಲಿಯವರೆಗಿನ ನೇಮಿಚಂದ್ರರ ಕಥೆಗಳು ಲೇಖಕರು: ನೇಮಿಚಂದ್ರ ನೇಮಿಚಂದ್ರರ 'ಬದುಕು ಬದಲಿಸಬಹುದು' ಪುಸ್ತಕವನ್ನು ಓದಿದವರಿಗೆ ಲೇಖಕಿಯ ಶೈಲಿ ಸುಪರಿಚಿತವೇ. ಬದುಕಿನಲ್ಲಿ ಎಷ್ಟೇ ಕಷ್ಟವಿರಲಿ ಆತ್ಮವಿಶ್ವಾಸ, ಸಕಾರಾತ್ಮಕ ಗುಣವನ್ನು ಬಿತ್ತುವುದು ನೇಮಿಚಂದ್ರರ ಬರಹದ ಉದ್ದೇಶ. 'ಬದುಕು ಬದಲಿಸಬಹುದು' ಪುಸ್ತಕದಲ್ಲಿ ಹಲವು ಘಟನೆಗಳನ್ನು ಉಲ್ಲೇಖಿಸುತ್ತಾ ಆ ಘಟನೆ ಯಾವ ಕಥೆಗೆ ಪ್ರೇರಣೆಯಾಯಿತೆಂದು ಕೂಡ ತಿಳಿಸಿದ್ದಾರೆ. ಹಾಗಾಗಿ ಇಲ್ಲಿದ್ದ ಹೆಚ್ಚಿನ ಕಥೆಗಳ 'ಸತ್ಯ ಕಥೆಗಳು' ಗೊತ್ತಿದ್ದರಿಂದ ನಿರೀಕ್ಷಿತ ಅಂತ್ಯವೆಂದೇ ಹೇಳಬಹುದು. ಆಕಸ್ಮಿಕವಾಗಿ ಅಪಘಾತದಲ್ಲಿ ನೆನಪು ಕಳೆದುಕೊಂಡ ಪತ್ನಿಯನ್ನು ಜೀವಂತವಾಗಿ ಉಳಿಸಿಕೊಳ್ಳಲು ಪತಿಯ ಹೋರಾಟ, ಜೊತೆ ಜೊತೆಗೆ ಈ ಪರಿಸ್ಥಿತಿಯನ್ನು ಅರಿಯದೆ ತನ್ನ ತಂದೆ ತಾಯಿಯ ಗೊಣಗಾಟವನ್ನು ಧಿಕ್ಕರಿಸಿ ಬದುಕುವ ಹೋರಾಟದ ಕಥೆಯನ್ನು 'ಮರಳಿ ಬದುಕಿಗೆ ಈ ಪಯಣ'ದಲ್ಲಿ ಓದಬಹುದು. ಕಾನ್ಸರ್ ಬಂದು ಮಾನಸಿಕವಾಗಿ ಕುಗ್ಗಿ, ಸಾವೊಂದೆ ಸತ್ಯ ಎಂಬಂತೆ ತಿಳಿದ ಸೂಕ್ಷ್ಮ ಮನಸ್ಥಿತಿಯ ಶಶಿ ತನ್ನ ಜೀವನದಲ್ಲಿ ಕಳೆದುಕೊಂಡ ಚೈತನ್ಯವನ್ನು ಮರಳಿ ಪಡೆಯುವ ಕಥೆ 'ಬದುಕು ನಿನ್ನಲ್ಲೆಂಥಾ ಮುನಿಸು'. ತನ್ನ ಗಂಡ ಇನ್ನೊಬ್ಬ ಹೆಂಗ...