ದೇವತೆಗಳ ದ್ವೀಪದಲ್ಲಿ ಭಾಗ -5
ದೇವತೆಗಳ ದ್ವೀಪದಲ್ಲಿ ಭಾಗ - 4 ಹಿಂದಿನ ರಾತ್ರಿ ಹೋಟೇಲ್ ಅನ್ನು ತಲುಪಿ ಇನ್ನೇನು ಮಲಗುವುದು ಎಂದು ಹೊರಟಾಗಲೇ ನೆನಪಾಗಿದ್ದು ನಾಳೆಯ ತಿರುಗಾಟದ ಸಿದ್ಧತೆ ಮಾಡಿಲ್ಲವೆಂದು. 'ನುಸ ಪೆನಿದ' ಎಂಬ ದ್ವೀಪಕ್ಕೆ ಫೆರ್ರಿಯಲ್ಲಿ ಹೋಗುವುದೆಂದು ನಿರ್ಧಾರವಾಗಿದ್ದರೂ ಫೆರ್ರಿಯನ್ನು ಮೊದಲೇ ಬುಕ್ ಮಾಡಿರಲಿಲ್ಲ. ಹಾಗಾಗಿ ನವೀನ್ ಅಂತರ್ಜಾಲದಲ್ಲಿ ಹುಡುಕಾಡಿ "ಫೆರ್ರಿಯನ್ನು ಮೊದಲೇ ಬುಕ್ ಮಾಡಬೇಕಿತ್ತು. ಬೇರೆ ಯಾವುದಾದರೂ ಆಯ್ಕೆ ಇದೆಯೇ ಎಂದು ಹೋಟೆಲ್ ನವರ ಬಳಿ ಕೇಳೋಣ" ಎಂದು ಸ್ವಾಗತಕಾರರಲ್ಲಿ ವಿಚಾರಿಸಿದಾಗ "ಬೆಳಿಗ್ಗೆ ಬೇಗನೆ ಹೊರಡಿ. ಟಿಕೆಟ್ ಸಿಗಬಹುದು" ಎಂದು ಹೇಳಿದರು. ಹಾಗಾಗಿ ಬೆಳಿಗ್ಗೆ ಬೇಗನೆ ಎದ್ದು ಸಿದ್ಧವಾದೆವು. ನಾವು ಉಳಿದುಕೊಂಡಿದ್ದ 'ಲ ಗ್ರಾಂದೇ' ಹೋಟೆಲ್ ನಿಂದ ಹೋಟೆಲ್ ಉತ್ಸವ್ ಗೆ ಹೋಗಲು 'Grab' ಆ್ಯಪ್ (ನಮ್ಮ ಓಲ, ಉಬರ್ ನಂತಹ ಆ್ಯಪ್) ನಲ್ಲಿ ಕಾರನ್ನು ಬುಕ್ ಮಾಡಿದೆವು. ಕಾರ್ ನಲ್ಲಿ ಡ್ರೈವರ್ ಬಳಿ ಮಾತನಾಡುತ್ತಾ ನಾವು ನುಸ ಪೆನಿದಕ್ಕೆ ಹೋಗುತ್ತಿರುವ ವಿಷಯವನ್ನು ತಿಳಿಸಿದೆವು. ಆಗ ಡ್ರೈವರ್ "ನುಸ ಪೆನಿದಕ್ಕೆ ಹೋಗುವುದಾಗಿದ್ದರೆ ನೀವು ಇನ್ನೂ ಬೇಗ ಹೊರಡಬೇಕಾಗಿತ್ತು. ಈಗಾಗಲೇ ತಡವಾಗಿದೆ. ನನಗೆ ಪರಿಚಯವಿರುವವರೊಬ್ಬರು ಫೆರ್ರಿ ನಿಲ್ದಾಣದಲ್ಲಿ ...