Posts

Showing posts from August, 2024

ಸೋತು ಗೆದ್ದವರು

ಪುಸ್ತಕದ ಹೆಸರು : ಸಾವೇ ಬರುವುದಿದ್ದರೆ ನಾಳೆ ಬಾ!(ಬದುಕು ಬದಲಿಸಬಹುದು -2) ಲೇಖಕರು : ನೇಮಿಚಂದ್ರ              ಪುಸ್ತಕದ ಶೀರ್ಷಿಕೆಯೇ ಅಂಕಣವಾಗಿರುವ ಬರಹದಲ್ಲಿ ತೀವ್ರತರವಾದ ಕ್ಯಾನ್ಸರ್ ನಿಂದ ಬಳಲಿ, ಸಾವಿನ ಕದ ತಟ್ಟಿ ಬಂದು ಮತ್ತೆ ಎದ್ದು ನಿಂತವರ ಕಥೆಯಿದೆ. ನಮ್ಮ ಕನ್ನಡದವರಾದ ಅನುಪಮಾ ನಿರಂಜನ ಅವರು ಸಾವನ್ನು ತಡೆದು ನಿಲ್ಲಿಸಿ, ಶಸ್ತ್ರಚಿಕಿತ್ಸೆ, ರೇಡಿಯೇಶನ್ ಹಾಗೂ ಕಿಮೋಥೆರಪಿಗಳ ನಡುವೆಯೂ ಜೀವನೋತ್ಸಾಹ ಕುಗ್ಗದೇ  ಹದಿಮೂರು ವರ್ಷಗಳ ಕಾಲ ಬದುಕಿದ್ದನ್ನು ಉಲ್ಲೇಖಿಸುತ್ತಾ ಮಾಯಾ ತಿವಾರಿಯ ಕಾನ್ಸರ್ ಹೋರಾಟದ ಸೋಲು ಗೆಲುವನ್ನು ದಾಖಲಿಸಿದ್ದಾರೆ.                   ಮೂಲತಃ ಭಾರತೀಯರಾದ ಮಾಯಾ ತಿವಾರಿಯವರ ಪೂರ್ವಜರನ್ನು ಬ್ರಿಟಿಷರು, ಭಾರತದಿಂದ ದಕ್ಷಿಣ ಅಮೆರಿಕದ ಪುಟ್ಟ ದೇಶವಾದ 'ಗುಯಾನಾ' ಕ್ಕೆ ಗಂಟು ಮೂಟೆಗಳಂತೆ ಸಮುದ್ರದ ಮೂಲಕ ಸಾಗಿಸಿದ್ದರು. ಆ ದಾರಿಯಲ್ಲಿ ಎಷ್ಟೋ ಮಹಿಳೆಯರ ಮಾನಭಂಗವನ್ನು ಮಾಡಿದ್ದರು. ಎಷ್ಟೋ ಗಂಡಸರನ್ನು ಹೊಡೆದು ಬಡಿದಿದ್ದರು. ಇನ್ನು ಕೆಲವರನ್ನು ಸಮುದ್ರಕ್ಕೆ ಎಸೆದಿದ್ದರು. ಈ ಭೀಕರ ಇತಿಹಾಸದ ನೋವಿನ ನೆನಪನ್ನು ಮುಂದಿನ ಪೀಳಿಗೆಯವರಾದ ಮಾಯಾ ತಿವಾರಿ ಪಿತ್ರಾರ್ಜಿತವಾಗಿ ಪಡೆದಿದ್ದರು. ಅದರಿಂದ ಪಾರಾಗಲು ಯೋಗ, ಪ್ರಾಣಾಯಾಮ, ಧ್ಯಾನವನ್ನು ಅಭ್ಯಾಸ ಮಾಡುತ್ತಿದ್ದರು. ಮುಂದೆ ಗುಯಾನಾ ಬ್ರಿಟಿಷ...

ಸೋತು ಗೆದ್ದವರು

ಪುಸ್ತಕದ ಹೆಸರು : ಸಾವೇ ಬರುವುದಿದ್ದರೆ ನಾಳೆ ಬಾ!(ಬದುಕು ಬದಲಿಸಬಹುದು -2) ಲೇಖಕರು : ನೇಮಿಚಂದ್ರ               "ವಿಧಿ ಬರೆದ ಬರಹವನು ಅಳಿಸಿ" ಎಂಬ ಬರಹದಲ್ಲಿ ಬದುಕು ತನ್ನತ್ತ ಎಸೆದ ಸವಾಲನ್ನು ಸಾಹಸದಿಂದ ಎದುರಿಸಿದ, ಹಿಮಾಲಯ ಹಾಗೂ ರಾಜಸ್ಥಾನದ ಮರುಭೂಮಿಯಲ್ಲಿ ಸಾವಿರಾರು ಮೈಲಿಗಳ ಕಾರ್ ರ್ಯಾಲಿಯಲ್ಲಿ ಭಾಗವಹಿಸಿದ ಮೊದಲ ಪ್ಯಾರಪ್ಲೇಜಿಕ್ ಸಾಹಸಿ ಮಹಿಳೆ ದೀಪಾ ಮಲ್ಲಿಕ್ ಬಗ್ಗೆ ಬರೆದಿದ್ದಾರೆ ಲೇಖಕಿ.              ಹರಿಯಾಣ ಮೂಲದ ದೀಪಾ ಅವರು ತಮ್ಮ ಮೂವತ್ತನೇ ವಯಸ್ಸಿನವರೆಗೂ ಸಾಧಾರಣ ಗೃಹಿಣಿಯಾಗಿದ್ದವರು. ಪತಿ ಕರ್ನಲ್ ವಿಕ್ರಮ್ ಸಿಂಗ್ ಮಲ್ಲಿಕ್ ಭೂಸೇನೆಯಲ್ಲಿ ಅಧಿಕಾರಿ. 1999 ನೇ ಇಸವಿಯಲ್ಲಿ ದೀಪ ಅವರ ಬೆನ್ನಿನ ಹುರಿಯಲ್ಲಿ ಗಡ್ಡೆಯೊಂದು ಬೆಳೆದು ಅವರ ಬದುಕಿನ ತಿರುವನ್ನೇ ಬದಲಿಸಿತು.ಇತ್ತ ಪತಿ ಕಾರ್ಗಿಲ್ ಯುದ್ಧದಲ್ಲಿ ಹೋರಾಡುತ್ತಿದ್ದರೆ, ದೀಪ ಅವರು ತಮ್ಮ ಅನಾರೋಗ್ಯದೊಂದಿಗೆ ಹೋರಾಡುತ್ತಿದ್ದರು. ಈ ಗಡ್ಡೆಯನ್ನು ತೆಗೆಯುವುದರಿಂದ ಮಿದುಳು ಮತ್ತು ಸೊಂಟದ ಕೆಳಗಿನ ದೇಹದ ನಡುವೆ ಕೊಂಡಿ ಕಡಿದು ಹೋಗುವುದರಿಂದ ಮಲ ಮೂತ್ರಗಳ ಸಹಜ ವಿಸರ್ಜನೆ ಸಾಧ್ಯವಿಲ್ಲದೆ, ಗಾಲಿ ಕುರ್ಚಿಗೆ ಅಂಟಬೇಕಾದ ಅನಿವಾರ್ಯತೆ ದೀಪಾ ಅವರಿಗೆ ಎದುರಾಗುತ್ತದೆ. ಆದರೆ ಈ ಅನಿರೀಕ್ಷಿತ ಪರಿಸ್ಥಿತಿಯಿಂದ ಆಘಾತಗೊಂಡರೂ ಚೇತರಿಸಿಕೊಳ್ಳುವ ದೀಪ ಈ ಪ್ರತಿಕೂಲ ಪರಿಸ್ಥಿತಿಯನ್ನು ತಮ...