ಓದಿನ ಸುಖ - "ಅಮೇರಿಕದಲ್ಲಿ ನಾನು"


ಪುಸ್ತಕದ ಹೆಸರು : ಅಮೇರಿಕಾದಲ್ಲಿ ನಾನು 

ಲೇಖಕರು : ಬಿ ಜಿ ಎಲ್ ಸ್ವಾಮಿ 


             ಕಾಲೇಜಿನಲ್ಲಿದ್ದಾಗ ಬಿ ಜಿ ಎಲ್ ಸ್ವಾಮಿಯವರ ತಮಿಳು ತಲೆಗಳ ನಡುವೆ, ಹಸಿರು ಹೊನ್ನು ಮುಂತಾದ ಕೃತಿಗಳನ್ನು ಓದಿದ್ದರಿಂದ ಅವರ ಹಾಸ್ಯ ಭರಿತ ಶೈಲಿ ಪರಿಚಿತವೇ ಆಗಿತ್ತು. ಆದರೆ ಈ ಪುಸ್ತಕದ ಬಗ್ಗೆ ಎಲ್ಲಿಯೂ ವಿಮರ್ಶೆ, ಅನಿಸಿಕೆಯನ್ನು ಓದಿಲ್ಲದಿದ್ದರಿಂದ ಕುತೂಹಲದಿಂದ ಕೈಗೆತ್ತಿಕೊಂಡೆ. ಈ ಪುಸ್ತಕವನ್ನು ಪ್ರವಾಸ ಕಥನ ಎನ್ನುವುದಕ್ಕಿಂತ ಅಮೇರಿಕಾದಲ್ಲಿ ಅನುಭವಿಸಿದ ಲೇಖಕರ ಅನುಭವ ಕಥನ ಎಂದರೆ ಹೆಚ್ಚು ಸೂಕ್ತವಾಗುತ್ತದೆ. ಲೇಖಕರ ಹಾಗೂ ಸಹ ಪ್ರಯಾಣಿಕರ ಪರದಾಟದ ಹಾಸ್ಯ ಪ್ರಸಂಗಗಳು ನಮ್ಮನ್ನು ನಗಿಸುತ್ತವೆ.

             ಮೊದಲ ಬರಹ 'ಹಡಗಿನಲ್ಲಿ'. 2ನೇ ಮಹಾಯುದ್ಧ ದಿಂದ ಹಿಂತಿರುಗುತ್ತಿದ್ದ ಸೈನಿಕರೊಂದಿಗೆ ಹಡಗಿನಲ್ಲಿ ಪಯಣಿಸುತ್ತಿದ್ದಾಗ ಒಂದೇ ಆವರಣದಲ್ಲಿ ಸುಮಾರು 300 ಜನರ ಉಪಯೋಗಕ್ಕಿರುವ, ಎದುರು ಸಾಲಿನಲ್ಲಿ ಕೂತವರನ್ನು, ಬಂದು ಹೋಗುವವರನ್ನು ಕಾಣುವಂತೆ ನಿರ್ಮಿಸಿದ ಶೌಚಾಲಯಗಳಲ್ಲಿ ಭಾರತೀಯರ ಪರದಾಟ, ಅದನ್ನು ಕಂಡು ಹಡಗಿನ ಕ್ಯಾಪ್ಟನ್ ಸೂಚಿಸಿದ ಪರಿಹಾರ ಎಲ್ಲವೂ ಓದುಗರನ್ನು ನಗೆಗಡಲಲ್ಲಿ ತೇಲಿಸುತ್ತದೆ.

            'ನನ್ನ ಟೋಪಿ' ಎಂಬ ಶೀರ್ಷಿಕೆಯ ಬರಹ ತಲೆಯ ಮೇಲಿನ ತೊಡುಗೆಯಾದ ಟೋಪಿಯನ್ನು ಹಾಕಿದಾಗ ಭಾರತ ಹಾಗೂ ಅಮೇರಿಕಾದಲ್ಲಿ ಪಾಲಿಸುವ ಸಂಪ್ರದಾಯಗಳು, ಅದರಿಂದಾಗಿ ಲೇಖಕರು ಅನುಭವಿಸುವ ಮೋಜಿನ ಪ್ರಸಂಗವನ್ನು ವಿವರಿಸುತ್ತದೆ. ಜೊತೆಗೆ ಲೇಖಕರ ಭಾರತೀಯ ಟೋಪಿಯನ್ನು ಎದುರು ಮನೆಯ ಹೆಂಗಸರೊಬ್ಬರು ಧರಿಸಿಕೊಂಡು ಪಾರ್ಟಿಗೆ ಹೋದಾಗ ಏನಾಯಿತೆಂದು ಪುಸ್ತಕ ಓದಿಯೇ ತಿಳಿಯಬೇಕು.

            ಭಾರತೀಯ ನಾರಿಯರ ಸಾಂಪ್ರದಾಯಿಕ ಉಡುಗೆಯಾದ ಸೀರೆಗೆ ಮನಸೋಲದವರೇ ಇಲ್ಲ. ಸೋಷಿಯಲ್ ಮೀಡಿಯಾಗಳು ಇಲ್ಲದಿದ್ದಂತಹ ಆ ಕಾಲದಲ್ಲಿ ವಿದೇಶಿ ಮಹಿಳೆಯರ ಕೈಗೆ ಭಾರತದ ಸೀರೆ ಸಿಕ್ಕಿದಾಗ ಸೀರೆಯು ಅನುಭವಿಸಿದ ಅವಸ್ಥೆಯೇ 'ಸೀರೆಯ ಕತೆ' ಎಂಬ ಬರಹದಲ್ಲಿದೆ. ಹೀಗೆ ಇನ್ನೂ ಅನೇಕ ಅನುಭವಗಳ ಜೊತೆ ಜೊತೆಗೆ ಆಯಾ ಘಟನೆಗಳಿಗೆ ಸಂಬಂಧಿಸಿದ ರೇಖಾ ಚಿತ್ರಗಳು ಸಹ ನಮ್ಮ. ನ್ನು ನಗಿಸುತ್ತವೆ.

Comments

Popular posts from this blog

2024 ರಲ್ಲಿ ನಾನು ಓದಿದ ಪುಸ್ತಕಗಳು

ಓದಿನ ಸುಖ "ಬಲಾಢ್ಯ ಹನುಮ"