2024 ರಲ್ಲಿ ನಾನು ಓದಿದ ಪುಸ್ತಕಗಳು
ಪುಸ್ತಕವನ್ನು ಓದುವುದು ನೆಚ್ಚಿನ ಹವ್ಯಾಸ. ಆದರೆ ಓದಿದ ಪುಸ್ತಕದ ಬಗ್ಗೆ ನನ್ನ ಅಭಿಪ್ರಾಯವನ್ನು ಬರೆಯಲು ಸ್ವಲ್ಪ ಸೋಮಾರಿತನ. ಒಂದು ಪುಸ್ತಕವನ್ನು ಓದಿ ಅದರ ಬಗ್ಗೆ ಅನಿಸಿಕೆಯನ್ನು ಬರೆದ ಆನಂತರವೇ ಇನ್ನೊಂದು ಪುಸ್ತಕವನ್ನು ಓದಬೇಕೆಂಬ ನಿಯಮವನ್ನು ನಾನೇ ಮಾಡಿ, ಅದನ್ನು ನಾನೇ ಮುರಿದು ಇನ್ನೊಂದು ಪುಸ್ತಕವನ್ನು ಓದುತ್ತೇನೆ. ಹೀಗಾಗಿ ಪುಸ್ತಕದ ಓದಿನ ಓಟ ಮುಂದುವರಿಯುತ್ತದೆ. ಅನಿಸಿಕೆ ಬರೆಯುವುದು ಹಿಂದೆಯೇ ಉಳಿಯುತ್ತದೆ. ಕುಟುಂಬ ಸದಸ್ಯರ ಅನಾರೋಗ್ಯ, ಆಸ್ಪತ್ರೆ ವಾಸ, ಪ್ರವಾಸ, ತಿರುಗಾಟ ಇವುಗಳ ಜೊತೆಗೆ ಈ ವರ್ಷ ನಾನು ಓದಿದ ಪುಸ್ತಕಗಳು ಇಂತಿವೆ.
1) ಜೊತೆ ಜೊತೆಯಲಿ - ಗೀತಾ ಬಿ. ಯು
2) ರೂಪದರ್ಶಿ - ಕೆ.ವಿ.ಅಯ್ಯರ್
3) ಬಳ್ಳಿ ಕಾಳ ಬೆಳ್ಳಿ - ಕೆ ಎನ್ ಗಣೇಶಯ್ಯ
4) ಮನ್ವಂತರ - ವಸುಮತಿ ಉಡುಪ
5) ಸಮಕಾಲೀನ ಕನ್ನಡದ ಸಣ್ಣ ಕಥೆಗಳು - ಸಂಪಾದಕರು: ರಾಮಚಂದ್ರ ಶರ್ಮ
6) ಅವಧೇಶ್ವರಿ - ಶಂಕರ ಮೊಕಾಶಿ ಪುಣೇಕರ್
7) ಇಲ್ಲಿಯವರೆಗಿನ ನೇಮಿಚಂದ್ರರ ಕಥೆಗಳು - ನೇಮಿಚಂದ್ರ
8) ಅಂಚು - ಎಸ್ ಎಲ್ ಭೈರಪ್ಪ
9) ಸಾವೇ ಬರುವುದಿದ್ದರೆ ನಾಳೆ ಬಾ! - ನೇಮಿಚಂದ್ರ
10) ಅಮೇರಿಕಾದಲ್ಲಿ ನಾನು - ಬಿ.ಜಿ.ಎಲ್ ಸ್ವಾಮಿ
11) ಅಮೇರಿಕನ್ನಡದ ಕಥೆಗಳು - ಸಂಪಾದಕರು: ನಾಗಲಕ್ಷ್ಮಿ ಹರಿಹರೇಶ್ವರ
12) ತುಮುಲ - ಸುಧಾಮೂರ್ತಿ
13) ಅಗೆದಷ್ಟೂ ನಕ್ಷತ್ರ - ಸುಮಂಗಲಾ
14) ಕಾಕಿಗಿಡ - ವಸುಮತಿ ಉಡುಪ
15) ಉಭಕುಶಲೋಪರಿ ಸಾಂಪ್ರತ - ಎ. ಆರ್. ಮಣಿಕಾಂತ್
16) ಕುರುಡು ನ್ಯಾಯ - ವಸುಮತಿ ಉಡುಪ
17) ಸಾವು - ಸುಪ್ರೀತ್.ಕೆ.ಎನ್
18) ಹನುಕಿಯಾ - ವಿಠ್ಠಲ್ ಶೆಣೈ
19) ಆವರ್ತ - ಆಶಾ ರಘು
20) ಬೆಳ್ಳಿ ಮೋಡ - ತ್ರಿವೇಣಿ
21) ದುಡಿವ ಹಾದಿಯಲ್ಲಿ ಜೊತೆಯಾಗಿ - ನೇಮಿಚಂದ್ರ
22) ಯುಗಾದಿ - ವಸುಧೇಂದ್ರ
23)The day I stopped drinking milk - ಸುಧಾ ಮೂರ್ತಿ
24) ಸೆಕೆಂಡ್ ಇನ್ನಿಂಗ್ಸ್ - ಗೀತಾ ಬಿ.ಯು
25) ಮಾವೋನ ಕೊನೆಯ ನರ್ತಕ - ಅನುವಾದ: ಜಯಶ್ರೀ ಭಟ್
26) ರೇಷ್ಮೆ ಬಟ್ಟೆ - ವಸುಧೇಂದ್ರ
27) ಕರಿಸಿರಿಯಾನ - ಕೆ.ಎನ್.ಗಣೇಶಯ್ಯ
28) ಭಾವನಾಗಮ್ಯ - ವಿದ್ಯಾ ದತ್ತಾತ್ರಿ
29) ಸುಚೇಷ್ಟೆ - ಡಾ. ಸುಚೇತಾ ಪೈ
30) ಬದುಕು ಮಾಯೆಯ ಮಾಟ - ವಸುಮತಿ ಉಡುಪ
31) ಕಥಾ ಚೈತ್ರ - ವಸುಮತಿ ಉಡುಪ
32) ಪ್ರಶ್ನೆ - ಯು.ಆರ್.ಅನಂತಮೂರ್ತಿ
Comments
Post a Comment