Posts

Showing posts from March, 2025

ಓದಿನ ಸುಖ "ಬಲಾಢ್ಯ ಹನುಮ"

ಪುಸ್ತಕದ ಹೆಸರು : ಬಲಾಢ್ಯ ಹನುಮ ಪ್ರಕಾಶನದ ಹೆಸರು : ಅಯೋಧ್ಯಾ ಪ್ರಕಾಶನ          ಅಯೋಧ್ಯಾ ಪ್ರಕಾಶನದಿಂದ ರಾಮಾಯಣದ ಪುಸ್ತಕವನ್ನು ಓದಿ ಇಷ್ಟಪಟ್ಟ ನಾವು ಆನಂತರ ಬಲಾಢ್ಯ ಹನುಮ ಪುಸ್ತಕವನ್ನು ತರಿಸಿಕೊಂಡೆವು. ಮಗಳು ರಾಮಾಯಣ ಪುಸ್ತಕವನ್ನು ಓದಿ ಅದರಲ್ಲಿರುವ ಕಥೆಯನ್ನು ಹೇಳುವಂತೆ ಅವಳ ಅಜ್ಜ ಅಜ್ಜಿಯಲ್ಲಿ ಪೀಡಿಸುತ್ತಿದ್ದಳು. ಆ ಪುಸ್ತಕ ಆಂಗ್ಲ ಭಾಷೆಯಲ್ಲಿ ಇದ್ದುದರಿಂದ ಅವರಿಗೆ ಅದನ್ನು ಓದಲು ಕಷ್ಟವಾಗುತ್ತಿದ್ದರಿಂದ ಈ ಪುಸ್ತಕದ ಕನ್ನಡ ಅವತರಣಿಕೆಯನ್ನು ತರಿಸಿದೆ. ಈ ಪುಸ್ತಕವು ಸಹ ರಾಮಾಯಣ ಪುಸ್ತಕದಂತೆ ಅತ್ಯಂತ ಆಕರ್ಷಕವಾಗಿದೆ. ಹನುಮಂತನ ಬಾಲ್ಯದ ತುಂಟಾಟಗಳು ಹೊಟ್ಟೆ ಹುಣ್ಣಾಗುವಂತೆ ನಗಿಸುತ್ತವೆ. ಹನುಮಂತನ ಸಾಹಸ ಮಕ್ಕಳಲ್ಲಿ ಸ್ಫೂರ್ತಿಯನ್ನು ತುಂಬುತ್ತದೆ. ಚಿತ್ರಗಳೂ ಸಹ ಅತ್ಯಂತ ಆಕರ್ಷಕವಾಗಿವೆ. ಆದರೆ ಒಂದೇ ಒಂದು ಸಣ್ಣ ಕೊರತೆಯೆಂದರೆ ಹನುಮಂತನ ಕಥೆಯನ್ನು ವಿವಿಧ ಮೂಲಗಳಿಂದ ಪಡೆದುಕೊಂಡ ಕಾರಣವೋ ಏನೋ ಕಥೆಯ ಸರಣಿಯಲ್ಲಿ ನಿರಂತರತೆ ಇಲ್ಲ. ಇದೊಂದು ಸಣ್ಣ ಕೊರತೆ ಬಿಟ್ಟರೆ ಈ ಪುಸ್ತಕವೂ ಸಹ ಬಹಳ ಇಷ್ಟವಾಯಿತು.

ಓದಿನ ಸುಖ "ಮ್ಯಾಜಿಕ್ ಪಾಟ್ (ಸಾಪ್ತಾಹಿಕ ಪತ್ರಿಕೆ)"

Image
ಪುಸ್ತಕದ ಹೆಸರು: ಮ್ಯಾಜಿಕ್ ಪಾಟ್ (ಸಾಪ್ತಾಹಿಕ ಪತ್ರಿಕೆ)       ಮಗಳಿಗೆ ಸುಮಾರು ಎರಡು - ಎರಡೂವರೆ ವರ್ಷವಾದಾಗ ಮನೆಯ ಹತ್ತಿರದ ಗ್ರಂಥಾಲಯಕ್ಕೆ ನಾನು ಹೋಗುವಾಗ ಅವಳನ್ನೂ ಕರೆದುಕೊಂಡು ಹೋಗುತ್ತಿದ್ದೆ. ಅಲ್ಲಿ ಮುಂಭಾಗದಲ್ಲಿ ವಿವಿಧ ಪತ್ರಿಕೆಗಳನ್ನು ಜೋಡಿಸಿರುತ್ತಿದ್ದರು. ಅವುಗಳ ಮಧ್ಯೆ ಮ್ಯಾಜಿಕ್ ಪಾಟ್ ಪುಸ್ತಕವೂ ಇತ್ತು. ಅದನ್ನು ನೋಡಿದ್ದೇ ತಡ ಮಗಳು ಕೈಗೆತ್ತಿಕೊಂಡಿದ್ದಳು. ಅಷ್ಟು ಆಕರ್ಷಣೀಯವಾಗಿತ್ತು ಆ ಪತ್ರಿಕೆ. ಆದರೆ ಪತ್ರಿಕೆಗಳನ್ನು ಮನೆಗೆ ತೆಗೆದುಕೊಂಡು ಹೋಗಲು ಅವಕಾಶವಿಲ್ಲದುದರಿಂದ ಮನೆಗೆ ಬಂದು ಈ ಪತ್ರಿಕೆಯ ಬಗ್ಗೆ ಅಂತರ್ಜಾಲದಲ್ಲಿ ಜಾಲಾಡಿ ಚಂದಾದಾರರರಾದೆವು. ಅಮೇಲಿನಿಂದ ಪ್ರತಿ ಬುಧವಾರ ಮ್ಯಾಜಿಕ್ ಪಾಟ್ ಗೋಸ್ಕರ ಕಾಯುವುದೇ ನಮ್ಮ ಕೆಲಸವಾಯಿತು. ಒಮ್ಮೆ ಕೈಗೆ ಬಂದೊಡನೆಯೇ ಅದರಲ್ಲಿರುವ ಚಟುವಟಿಕೆ ಗಳನ್ನೆಲ್ಲ ಮಾಡಿ ಮುಗಿಸಿದರೆ ಸಮಾಧಾನ. ಚಿತ್ರಕಥೆಗಳು, ದಾರಿ ತೋರಿಸುವುದು, ಚುಕ್ಕಿ ಜೋಡಿಸುವುದು, ಸಾಹಸಕಥೆ, ನೀತಿಕಥೆ, ಬಣ್ಣ ತುಂಬುವುದು, ಅಕ್ಷರಗಳನ್ನು ಬರೆಯುವುದು, ಸಂಖ್ಯೆಗಳ ಗಣನೆ, ಚಿಕ್ಕ ಪುಟ್ಟ ಕವನಗಳು ಹೀಗೆ ಪುಟ ಪುಟವೂ ಮಕ್ಕಳನ್ನು ಆಕರ್ಷಿಸುವಂತೆ ರೂಪಿಸಿದ್ದಾರೆ. ಅಷ್ಟೇ ಅಲ್ಲದೆ ಮಕ್ಕಳು ಸ್ವತಃ ಮಾಡಲು ಸುಲಭವಾಗಿರುವಂತಹ ಪೇಪರ್ ಕ್ರಾಫ್ಟ್ ಕೂಡ ಇದೆ. ಇದನ್ನು ನೋಡಿ ಮಗಳು ಬಹಳ ಪೇಪರ್ ಕ್ರಾಫ್ಟ್ ಅನ್ನು ತಯಾರಿಸಿದ್ದಾಳೆ. ಅದಲ್ಲದೇ ಸ್ವಲ್ಪ ದೊಡ್ಡ ವಯಸ್ಸಿನ ಮಕ್ಕಳೇ ತಯಾರ...

ಓದಿನ ಸುಖ "Illustrated Ramayana"

ಪುಸ್ತಕದ ಹೆಸರು : Illustrated Ramayana  ಪ್ರಕಾಶನ : ಅಯೋಧ್ಯಾ ಪ್ರಕಾಶನ           ಮಗಳು ಟಿವಿಯಲ್ಲಿ 'ಲಿಟಲ್ ಕೃಷ್ಣ ' ಕಾರ್ಟೂನ್ ನೋಡಿ ಇಷ್ಟಪಟ್ಟಿದ್ದರಿಂದ ಇನ್ನು ರಾಮಾಯಣ ಕಥೆಯನ್ನು ಹೇಳಲು ಆರಂಭಿಸೋಣ ಎಂದು ಆಲೋಚಿಸುತ್ತಿದ್ದಾಗ ಈ ಮೊದಲೇ ಅವಳಿಗೋಸ್ಕರ ಒಂದು ರಾಮಾಯಣ ಪುಸ್ತಕವನ್ನು ತಂದಿದ್ದೆ. ಅದರ ಕಥೆಗಳನ್ನು ಓದಿ ಹೇಳುತ್ತಿದ್ದಾಗ ಅದು ಅವಳಿಗೆ ಅಷ್ಟೊಂದು ಆಕರ್ಷಣೀಯ ಎಂದು ಅನಿಸುತ್ತಿರಲಿಲ್ಲ. ಹಾಗಾಗಿ ಅರ್ಧದಲ್ಲೇ ಕಥೆ ಹೇಳುವುದನ್ನು ಕೈ ಬಿಟ್ಟಿದ್ದೆ. ಆಗ ನನಗೆ ಅಯೋಧ್ಯಾ ಪ್ರಕಾಶನದವರು ಹೊರತಂದ Illustrated Ramayana ಪುಸ್ತಕದ ಬಗ್ಗೆ ತಿಳಿದು ಪುಸ್ತಕವನ್ನು ತರಿಸಿಕೊಂಡು, ಅವರು ಈ ಪುಸ್ತಕದ ಬಗ್ಗೆ ನಡೆಸಿದ ರಸಪ್ರಶ್ನೆ ಸ್ಪರ್ಧೆಗೂ ಸಹ ನೊಂದಾಯಿಸಿದೆ.             ಒಮ್ಮೆ ಪುಸ್ತಕ ಕೈಗೆ ಬಂದಿದ್ದೇ ತಡ ಕೆಳಗಿಡಲು ಮನಸ್ಸೇ ಬರುತ್ತಿರಲಿಲ್ಲ ಅವಳಿಗೆ. ಕಥೆಯದ್ದೇ ಒಂದು ತೂಕವಾದರೆ ಪುಟ ತುಂಬಾ ಆವರಿಸಿದ ಚಿತ್ರಗಳದ್ದು ಇನ್ನೊಂದು ತೂಕ. ಕಥೆ ಮೂಲ ವಾಲ್ಮೀಕಿ ರಾಮಾಯಣಕ್ಕೆ ಹೆಚ್ಚು ನಿಷ್ಠವಾಗಿದೆ. ಚಿಕ್ಕ ಸುಂದರ ವಾಕ್ಯಗಳು ಮಕ್ಕಳಿಗೆ ಕಥೆಯನ್ನು ಅರ್ಥ ಮಾಡಿಸಲು ಸಹಾಯಕಾರಿಯಾಗಿದೆ. "ಕಾಡಲ್ಲಿ ರಾಕ್ಷಸರು ಇದ್ದಾರೆ ಎಂದು ತಿಳಿದಿದ್ದೂ ಸಹ ರಾಮ ಯಾಕೆ ಕಾಡಿಗೆ ಹೋಗಲು ಒಪ್ಪಿಕೊಂಡ?" "ಕೈಕೇಯಿ ಯಾಕೆ ರಾಮನನ್ನು ಕಾಡಿಗೆ ಕಳುಹಿಸಿದಳು?" ಮುಂತಾದ ಪ್ರಶ್ನೆ...