ಓದಿನ ಸುಖ "ಬಲಾಢ್ಯ ಹನುಮ"

ಪುಸ್ತಕದ ಹೆಸರು : ಬಲಾಢ್ಯ ಹನುಮ

ಪ್ರಕಾಶನದ ಹೆಸರು : ಅಯೋಧ್ಯಾ ಪ್ರಕಾಶನ


         ಅಯೋಧ್ಯಾ ಪ್ರಕಾಶನದಿಂದ ರಾಮಾಯಣದ ಪುಸ್ತಕವನ್ನು ಓದಿ ಇಷ್ಟಪಟ್ಟ ನಾವು ಆನಂತರ ಬಲಾಢ್ಯ ಹನುಮ ಪುಸ್ತಕವನ್ನು ತರಿಸಿಕೊಂಡೆವು. ಮಗಳು ರಾಮಾಯಣ ಪುಸ್ತಕವನ್ನು ಓದಿ ಅದರಲ್ಲಿರುವ ಕಥೆಯನ್ನು ಹೇಳುವಂತೆ ಅವಳ ಅಜ್ಜ ಅಜ್ಜಿಯಲ್ಲಿ ಪೀಡಿಸುತ್ತಿದ್ದಳು. ಆ ಪುಸ್ತಕ ಆಂಗ್ಲ ಭಾಷೆಯಲ್ಲಿ ಇದ್ದುದರಿಂದ ಅವರಿಗೆ ಅದನ್ನು ಓದಲು ಕಷ್ಟವಾಗುತ್ತಿದ್ದರಿಂದ ಈ ಪುಸ್ತಕದ ಕನ್ನಡ ಅವತರಣಿಕೆಯನ್ನು ತರಿಸಿದೆ. ಈ ಪುಸ್ತಕವು ಸಹ ರಾಮಾಯಣ ಪುಸ್ತಕದಂತೆ ಅತ್ಯಂತ ಆಕರ್ಷಕವಾಗಿದೆ. ಹನುಮಂತನ ಬಾಲ್ಯದ ತುಂಟಾಟಗಳು ಹೊಟ್ಟೆ ಹುಣ್ಣಾಗುವಂತೆ ನಗಿಸುತ್ತವೆ. ಹನುಮಂತನ ಸಾಹಸ ಮಕ್ಕಳಲ್ಲಿ ಸ್ಫೂರ್ತಿಯನ್ನು ತುಂಬುತ್ತದೆ. ಚಿತ್ರಗಳೂ ಸಹ ಅತ್ಯಂತ ಆಕರ್ಷಕವಾಗಿವೆ. ಆದರೆ ಒಂದೇ ಒಂದು ಸಣ್ಣ ಕೊರತೆಯೆಂದರೆ ಹನುಮಂತನ ಕಥೆಯನ್ನು ವಿವಿಧ ಮೂಲಗಳಿಂದ ಪಡೆದುಕೊಂಡ ಕಾರಣವೋ ಏನೋ ಕಥೆಯ ಸರಣಿಯಲ್ಲಿ ನಿರಂತರತೆ ಇಲ್ಲ. ಇದೊಂದು ಸಣ್ಣ ಕೊರತೆ ಬಿಟ್ಟರೆ ಈ ಪುಸ್ತಕವೂ ಸಹ ಬಹಳ ಇಷ್ಟವಾಯಿತು.

Comments

Popular posts from this blog

ಓದಿನ ಸುಖ - "ಅಮೇರಿಕದಲ್ಲಿ ನಾನು"

2024 ರಲ್ಲಿ ನಾನು ಓದಿದ ಪುಸ್ತಕಗಳು