ಓದಿನ ಸುಖ - "ಯಾವ ನಾಳೆಯೂ ನಮ್ಮದಲ್ಲ"
ಪುಸ್ತಕದ ಹೆಸರು : ಯಾವ ನಾಳೆಯೂ ನಮ್ಮದಲ್ಲ ಲೇಖಕರು : ಉಷಾ.ಪಿ.ರೈ ಕನ್ನಡದಲ್ಲಿ ಹಲವು ಕಥೆ-ಕಾದಂಬರಿಗಳನ್ನು ಬರೆದ, ಕರ್ನಾಟಕ ಲೇಖಕಿಯರ ಸಂಘದ ಅಧ್ಯಕ್ಷರಾಗಿದ್ದ ಉಷಾ.ಪಿ.ರೈ ಅವರು ಬರೆದ ತಮ್ಮ ಆತ್ಮಕಥೆಯೇ 'ಯಾವ ನಾಳೆಯೂ ನಮ್ಮದಲ್ಲ'. ಪುಸ್ತಕದ ಆರಂಭದಲ್ಲಿ ತಮ್ಮ ಬಾಲ್ಯದ ಜೀವನವನ್ನು ನೆನಪಿಸಿಕೊಂಡಿದ್ದಾರೆ ಲೇಖಕಿ. ತಮ್ಮ ಬಾಲ್ಯವನ್ನು ಸಮೃದ್ಧವಾಗಿಸಿದ್ದ ಉಡುಪಿಯ ಪರಿಸರದ ಅನುಭವದ ಜೊತೆಗೆ ಇಂದಿನ ಉಡುಪಿಯ ಪರಿಸರದ ಬಗ್ಗೆ ಅಭಿಪ್ರಾಯವನ್ನು ದಾಖಲಿಸಿದ್ದಾರೆ. ಮುಂದೆ ತಮ್ಮ ತಂದೆ ತಾಯಿಯ ಬಗ್ಗೆ ಅಭಿಮಾನದ ಮಾತನ್ನು ಹೇಳಿದ್ದಾರೆ ಲೇಖಕಿ. ತಂದೆ ಹೊನ್ನಯ್ಯ ಶೆಟ್ಟರು ನವಯುಗ ಪತ್ರಿಕೆಯ ಪ್ರವರ್ತಕರು ಜೊತೆಗೆ ಸಾಹಿತ್ಯ ಕೃಷಿಯನ್ನು ನಡೆಸಿದವರು. ಪತ್ರಿಕೆಯನ್ನು ಹೊರತರಲು ತಂದೆ ಪಡುತ್ತಿದ್ದ ಕಷ್ಟ, ತಂದೆಯ ಎಲ್ಲಾ ಕೆಲಸಗಳನ್ನು ತಾಯಿ ಬೆಂಬಲಿಸುತ್ತಿದ್ದ ರೀತಿ, ಅಂದಿನ ಬಂಟರ ಜೀವನ ಪದ್ಧತಿ ಎಲ್ಲವನ್ನೂ ಮುಕ್ತವಾಗಿ ಹಂಚಿಕೊಡಿದ್ದಾರೆ ಲೇಖಕಿ. ಮುಂದೆ ವೈವಾಹಿಕ ಜೀವನ, ಬ್ಯಾಂಕ್ ಉದ್ಯೋಗ, ಅದರ ಜೊತೆ ಜೊತೆಗೆ ಹವ್ಯಾಸವಾದ ಬರವಣಿಗೆ, ಕರ್ನಾಟಕ ಲೇಖಕಿಯರ ಸಂಘದ ಅಧ್ಯಕ್ಷರಾಗಿದ್ದಾಗಿನ ಅನುಭವಗಳು, ಅಕ್ಕ ವಿಶ್ವ ಕನ್ನಡ ಸಮ್ಮೇಳನದ ಅನುಭವಗಳು, ಸಾಹಿತಿಗಳ ಜೊತೆ ಒಡನಾಟ ಎಲ್ಲವನ್ನೂ ದಾಖಲ...