ಓದಿನ ಸುಖ "ಅಮೆರಿಕನ್ನಡದ ಕಥೆಗಳು"
ಪುಸ್ತಕದ ಹೆಸರು : ಅಮೆರಿಕನ್ನಡದ ಕಥೆಗಳು
ಸಂಪಾದಕರು : ನಾಗಲಕ್ಷ್ಮಿ ಹರಿಹರೇಶ್ವರ
ಈ ಪುಸ್ತಕವು ಕನ್ನಡ ನೆಲದಿಂದ ಅಮೇರಿಕಾಕ್ಕೆ ವಲಸೆ ಹೋದ ಹಲವರು ತಮ್ಮ ತಾಯ್ನುಡಿಯಲ್ಲಿ ಬರೆದ ಕಥೆಗಳ ಸಂಗ್ರಹ. ತಮ್ಮ ಅನುಭವಕ್ಕೆ ದಕ್ಕಿದ ವಿಷಯಗಳ ಮೇಲೆ ಕಥೆ, ಪ್ರಬಂಧಗಳ ಮೂಲಕ ಅಕ್ಷರ ರೂಪಕ್ಕಿಳಿಸಿದ್ದಾರೆ. ವಲಸೆ ಎಂಬುದು ಮಾನವ ನಾಗರೀಕತೆಯಲ್ಲಿ ಬಹು ಮುಖ್ಯ ಪಾತ್ರವನ್ನು ವಹಿಸುತ್ತದೆ. ವಲಸೆ ಹೋಗುವಾಗ ತಮ್ಮ ಪ್ರೀತಿಯ ತಾಯ್ನೆಲವನ್ನು ಬಿಟ್ಟು ಬರುವಾಗಿನ ದುಃಖ, ಸಂಬಂಧಿಕರನ್ನು ಬಿಟ್ಟು ಬರುವ ಬೇಸರ, ಮಾನಸಿಕ ತಾಕಲಾಟ, ಒಳ್ಳೆಯ ಜೀವನವನ್ನು ಕಟ್ಟಿಕೊಳ್ಳುವ ಅನಿವಾರ್ಯತೆ, ಹೊಸ ನೆಲದ ಸಂಪ್ರದಾಯಗಳನ್ನು ಪರಿಪಾಲಿಸುವ ಜೊತೆ ಜೊತೆಗೆ ಅಲ್ಲಿನ ಜೀವನ ಶೈಲಿಯನ್ನು ಅಪ್ಪಿಕೊಳ್ಳುವ ಅನಿವಾರ್ಯತೆ, ಅಮೇರಿಕಾದ ವೀಸಾ ಪಡೆದುಕೊಳ್ಳುವ ಪಡಿಪಾಟಲು ಹೀಗೆ ಹಲವು ಭಾವಗಳು ವಿವಿಧ ಕಥೆಗಳಲ್ಲಿ ವ್ಯಕ್ತವಾಗಿವೆ. ಇದರಲ್ಲಿ ಕಥೆಗಳನ್ನು ಬರೆದವರು ಯಾರೂ ವೃತ್ತಿಯಿಂದ ಕಥೆಗಾರರಲ್ಲ. ಆದರೂ ಸಹ ಎಲ್ಲಾ ಕಥೆಗಳು ಉತ್ತಮವಾಗಿದ್ದು, ಓದಿಸಿಕೊಂಡು ಹೋಗುತ್ತವೆ. ಕೆಲವು ಕಥೆಗಳು ನಗಿಸಿದರೆ, ಮತ್ತೆ ಕೆಲವು ವಿಷಾದವನ್ನು ಮೂಡಿಸುತ್ತವೆ.
Comments
Post a Comment