ನ್ಯಾನೋ ಕಥೆಗಳು
ನ್ಯಾನೋ ಕಥೆ ೧
ಸಂದು ಗೊಂದಲಿನಲ್ಲಿರುವ, ಗಾಳಿ ಬೆಳಕು ಸರಿಯಾಗಿ ಬೀಳದ ಸಣ್ಣ ಗೂಡಿನಂತಹ ಡೇ ಕೇರ್ ನಲ್ಲಿ ಅಳುತ್ತಿರುವ ತನ್ನ ಮಗುವನ್ನು ಬಿಟ್ಟು, ವಿಶಾಲವಾದ ಮನೆಯಲ್ಲಿ, ತನ್ನ ತಾಯಿಯನ್ನು ನೆನೆದು ಅಳುತ್ತಿದ್ದ ಮಗುವನ್ನು ಸಮಾಧಾನಗೊಳಿಸುತ್ತಿದ್ದಳು ಅವಳು.
ನ್ಯಾನೋ ಕಥೆ ೨
ನಗರದ ಪ್ರಸಿದ್ಧ ಹಾಡುಗಾರ್ತಿ, ರಾತ್ರಿಯ ಸಂಗೀತ ಕಛೇರಿಯನ್ನು ಮುಗಿಸಿ ಬಂದಾಗ ಅವಳ ಮಗು ಕೆಲಸದವಳ ಕೀರಲು ಧ್ವನಿಯ ಜೋಗುಳವನ್ನು ಕೇಳುತ್ತಾ ನಿದ್ರೆಗೆ ಜಾರಿತ್ತು.
Comments
Post a Comment