Posts

Showing posts from April, 2026

ಓದಿನ ಸುಖ "ಉಚಲ್ಯಾ"

Image
ಪುಸ್ತಕದ ಹೆಸರು: ಉಚಲ್ಯಾ  ಲೇಖಕರು: ಲಕ್ಷ್ಮಣ ಗಾಯಕವಾಡ  ಅನುವಾದಕರು: ಚಂದ್ರಕಾಂತ ಪೋಕಳೆ              ಇಡೀ ಪುಸ್ತಕವನ್ನು ಓದಿ ಒಮ್ಮೆ ಸ್ತಬ್ಧಳಾದೆ. ಹೀಗಿರುವ ಒಂದು ಜನಾಂಗವಿದೆ ಎಂಬ ಅರಿವೇ ನನಗಿರಲಿಲ್ಲ. ಬ್ರಿಟಿಷರಿಂದ 'criminal tribes' ಎಂದು ಕರೆಸಿಕೊಂಡ ಅಲೆಮಾರಿ ಜನಾಂಗ 'ಉಚಲ್ಯಾ'. ಅವರ ಬಡತನ, ಕಳ್ಳತನವನ್ನ ಮಾಡಿಯೇ ಜೀವನ ಸಾಗಿಸಬೇಕಾದ ಅನಿವಾರ್ಯತೆ, ಜೀವನ ಪೂರ್ತಿ 'ಅಪರಾಧಿಗಳು' ಎಂಬ ಹಣೆ ಪಟ್ಟಿಯಲ್ಲಿ ಓಡಾಡಬೇಕಾದ ಸಂಕಷ್ಟ ಹೀಗೆ ಹೊರ ಜಗತ್ತಿಗೆ ತೀರಾ ಅಪರಿಚಿತವಾಗಿರುವ ಹಲವಾರು ವಿಷಯಗಳನ್ನು ಲೇಖಕರು ತಮ್ಮ ಈ ಆತ್ಮಕಥೆಯಲ್ಲಿ ಮನಮುಟ್ಟುವಂತೆ ಬರೆದಿದ್ದಾರೆ.               ಉಚಲ್ಯಾವು ಅತ್ಯಂತ ಹಿಂದುಳಿದ ವರ್ಗವಾಗಿದ್ದು ಹುಟ್ಟಿದಾರಭ್ಯ ತಮ್ಮ ಕುಲಕಸುಬಾದ ಕಳ್ಳತನವೇ ಅವರ ವೃತ್ತಿ. ಹೆಂಗಸರು,ಗಂಡಸರು, ಮಕ್ಕಳು ಎಂಬ ಬೇಧವಿಲ್ಲದೆ ಎಲ್ಲರೂ ಕಳ್ಳತನದಲ್ಲಿ ನಿಸ್ಸೀಮರು. ಹಾಗಾಗಿ ಶಿಕ್ಷಣವೆನ್ನುವುದು ಇವರಿಗೆ ಮರೀಚಿಕೆ. ಯಾರಾದರೂ ಕಳ್ಳತನವನ್ನು ಬಿಟ್ಟು ಲೇಖಕರಂತೆ ಶಾಲೆಗೆ ಹೋದರೋ ಅವರನ್ನು ಸಮಾಜವೂ ಹೀಯಾಳಿಸುತ್ತಿತ್ತು. ಹಾಗಾಗಿ ಕಳ್ಳತನವು ಇವರಿಗೆ ಅನಿವಾರ್ಯವಾಗಿತ್ತು. ಹೀಗೆ ಕಳ್ಳತನ ಮಾಡಿ ಪೊಲೀಸರ ಕೈಯಲ್ಲಿ ಸಿಕ್ಕಿ ಬಿದ್ದು ವಿವಿಧ ರೀತಿಯ ಶಿಕ್ಷೆಗಳನ್ನು ಅನುಭವಿಸಿ ತಾವು ಕದ್ದ ಮಾಲನ್ನು ವಾಪಾಸು ಪೊಲೀಸರಿ...

ಓದಿನ ಸುಖ "ಧೀರೆ"

Image
ಪುಸ್ತಕದ ಹೆಸರು: ಧೀರೆ (ಕೇತ್ಕರ್ ವಹಿನಿ) ಲೇಖಕರು : ಉಮಾ ಕುಲಕರ್ಣಿ(ಮರಾಠಿ ಮೂಲ) ಅನುವಾದಕರು : ವಿರೂಪಾಕ್ಷ ಕುಲಕರ್ಣಿ          ಕಳೆದ ವರ್ಷದ ಮಂಗಳೂರು ಲಿಟ್ ಫೆಸ್ಟ್ ನಲ್ಲಿದ್ದ ಸಾಹಿತ್ಯ ಭಂಡಾರದ ಸ್ಟಾಲ್ ನಲ್ಲಿ ಪುಸ್ತಕವನ್ನು ನೋಡುತ್ತಿದ್ದಾಗ "ಧೀರೆ" ಪುಸ್ತಕ ಕಣ್ಣಿಗೆ ಬಿತ್ತು. ಹೆಸರೇ ಆಕರ್ಷಕವಾಗಿತ್ತು. ಪುಸ್ತಕದ ಎರಡು ಪುಟ ಓದುತ್ತಿದ್ದಂತೆ ನನಗೆ ಇಷ್ಟವಾಗಿ ಕೊಳ್ಳಲು ಇತರ ಪುಸ್ತಕಗಳ ಜೊತೆ ಸೇರಿಸಿದೆ. ನಾನು ಪುಸ್ತಕವನ್ನು ಓದುತ್ತಿದ್ದನ್ನು ಕಂಡು ಅಲ್ಲಿದ್ದ ವ್ಯಕ್ತಿಯೊಬ್ಬರು "ಪುಸ್ತಕ ತುಂಬಾ ಚೆನ್ನಾಗಿದೆ. ಮಹಾರಾಷ್ಟ್ರದಲ್ಲಿ ಸ್ತ್ರೀ ಶಿಕ್ಷಣಕ್ಕಾಗಿ ದುಡಿದವರೊಬ್ಬರ ಕಥೆ" ಎಂದು ಹೇಳಿದಾಗ ಇನ್ನಷ್ಟು ಆಸಕ್ತಿ ಮೂಡಿಸಿತು.            ಸ್ವಾತಂತ್ರ್ಯಾ ಪೂರ್ವದಲ್ಲಿ ಸ್ತ್ರೀ ಶಿಕ್ಷಣಕ್ಕಾಗಿ ಶ್ರಮಿಸಿದ ಹಾಗು ತಮ್ಮೆಲ್ಲ ಹೆಣ್ಣುಮಕ್ಕಳನ್ನು ಓದಿಸಿದ ಮಹಾರಾಷ್ಟ್ರದ ಕುಟುಂಬಕ್ಕೆ ಸೊಸೆಯಾಗಿ ಹೋದ ಮಾಲತಿಬಾಯಿ ಕೇತ್ಕರ್ ಅವರ ಜೀವನ ಚರಿತ್ರೆಯೇ "ಧೀರೆ".              ಮುಂಬಯಿಯ ಮಲಾಡದಲ್ಲಿ ಹುಟ್ಟಿದ ಮಾಲತಿಬಾಯಿ ಬಹಳ ಚಿಕ್ಕ ವಯಸ್ಸಿನಲ್ಲಿಯೇ ತಂದೆಯನ್ನು ಕಳೆದುಕೊಂಡರು. ಏಳನೇ ಕ್ಲಾಸ್ ನವರೆಗೆ ಓದಿದ ಇವರು ಮುಂದೆ ಓದುವ ಇಚ್ಛೆಯಿದ್ದರೂ ಸಹ ಹೆಚ್ಚಿನ ಖರ್ಚು ಅಮ್ಮನ ಮೇಲೆ ಬೀಳು...