Posts

Showing posts from May, 2026

ಓದಿನ ಸುಖ "ಗೂಡಿನಿಂದ ಬಾನಿಗೆ"

Image
ಪುಸ್ತಕದ ಹೆಸರು: ಗೂಡಿನಿಂದ ಬಾನಿಗೆ  ಲೇಖಕರು: ಹೇಮಾ ಹಟ್ಟಂಗಡಿ                  ಆಶಿಶ್ ಸೇನ್  ಅನುವಾದಕರು: ಸಂಯುಕ್ತಾ ಪುಲಿಗಲ್              ಸಾಮಾನ್ಯವಾಗಿ ಉದ್ಯಮವೆಂದರೆ ಪುರುಷ ಪ್ರಾಬಲ್ಯವಿರುವ ಕ್ಷೇತ್ರ ಎಂಬುದು ನಮ್ಮೆಲ್ಲರ ಅನಿಸಿಕೆ. ವಿದ್ಯಾಭ್ಯಾಸ ಗಳಿಸಿದ ಮಹಿಳೆ ಇಂದು ಎಲ್ಲಾ ರಂಗದಲ್ಲೂ ತನ್ನ ಸಾಮರ್ಥ್ಯವನ್ನು ತೋರಿಸಿದ್ದರೂ ಉದ್ಯಮಪತಿಗಳಾಗುವುದು, ಒಂದು ಕಂಪೆನಿಯ CEO ಆಗುವುದು ಅಷ್ಟು ಸುಲಭದ ವಿಷಯವಲ್ಲ. ಅದರಲ್ಲೂ 90ರ ದಶಕದಲ್ಲಿ, ಪುರುಷ ಪ್ರಾಬಲ್ಯವಿರುವ ವಿದ್ಯುತ್ ಉದ್ದಿಮೆಯಲ್ಲಿ ಯಶ ಗಳಿಸುವುದಂತೂ ಸಾಹಸವೇ ಸರಿ. ಅಂತಹ ಒಬ್ಬ ಉದ್ಯಮಿ, ಸಾಧಕಿ ಮಹಿಳೆಯು ಬೆಳೆದು ಬಂದ ಪಥದ ಕಥನವೇ 'ಗೂಡಿನಿಂದ ಬಾನಿಗೆ' ಪುಸ್ತಕ. ಇದು Lift off ಎಂಬ ತಾಂತ್ರಿಕ ಉದ್ಯಮಶೀಲತೆಯ ಕುರಿತಾದ ಪುಸ್ತಕದ ಅನುವಾದ.             1988ರಲ್ಲಿ ಹೇಮಾ ಹಟ್ಟಂಗಡಿಯವರ ಮಾವನವರಾದ(ಗಂಡನ ತಂದೆ) ವಸಂತ್ ರಾವ್ ಅವರು 'ಎನರ್ಕಾನ್ ಸಿಸ್ಟಮ್ಸ್ ' ಅನ್ನು ಸ್ಥಾಪಿಸಿದರು. ವಿದ್ಯುಚ್ಛಕ್ತಿ ನಿರ್ವಹಣಾ ಮಾಪನ ಮತ್ತು ತಂತ್ರಾಂಶವು ಈ ಸಂಸ್ಥೆಯ ಉತ್ಪನ್ನವಾಗಿತ್ತು. ಅವರು ಒಬ್ಬ ಪ್ರತಿಭಾವಂತ ತಂತ್ರಜ್ಞಾನಿ, ಸಂಶೋಧಕರಾಗಿದ್ದರು. ಒಬ್ಬ ದೂರದೃಷ್ಟಿಯುಳ್ಳ ತಾಂತ್ರಿಕ ಆಡಳಿತಗಾರರಾಗಿದ್ದರು. ವಸಂತ್ ...

ಬಾಲಿ ಪ್ರವಾಸ ಕಥನ

Image
            ಪ್ರವಾಸಿ ಪ್ರಪಂಚ ಪತ್ರಿಕೆಯಲ್ಲಿ ಪ್ರಕಟವಾದ ನನ್ನ ಲೇಖನ         ಬಾಲಿಯಲ್ಲಿ ನಡೆದಾಡುತ್ತಿದ್ದರೆ ಹಿಂದೂ ರಾಷ್ಟ್ರದ ಊರೊಂದರಲ್ಲಿ ಓಡಾಡುತ್ತಿರುವ ಅನುಭವವಾಗುತ್ತದೆ. ಇದು ಮನೆಯೋ ದೇವಸ್ಥಾನವೋ ಎಂಬ ಭೇದವೇ ಇಲ್ಲದಂತೆ ಕಟ್ಟಡಗಳು ಕಾಣುತ್ತವೆ. ಅಲ್ಲಲ್ಲಿ ಇರುವ ಪುರಾತನ ದ್ವಾರಗಳು ನಾವು ಯಾವುದೋ ನಾಟಕದ ಸೆಟ್ ನಲ್ಲಿರುವಂತೆ ಭಾಸವಾಗುತ್ತದೆ. ನಮ್ಮ ಡ್ರೈವರ್ ಹೇಳಿದಂತೆ, ಅಲ್ಲಿಯವರು ಮುಖ್ಯವಾಗಿ ಪೂಜಿಸುವುದು ಗಣೇಶ, ಸರಸ್ವತಿ ಹಾಗೂ ಪಾರ್ವತಿಯರನ್ನು. ಗಲ್ಲಿಗಲ್ಲಿಗಳಲ್ಲೂ ಗಣೇಶನ ಮೂರ್ತಿಗಳನ್ನು ಕಾಣಬಹುದು. ಸಾಂಸ್ಕೃತಿಕವಾಗಿ ರಾಮಾಯಣವನ್ನು ನೃತ್ಯದಲ್ಲಿ, ವಿಗ್ರಹಗಳಲ್ಲಿ ಅಳವಡಿಸಿಕೊಂಡಿದ್ದಾರೆ ಆದರೆ ರಾಮ ಕೃಷ್ಣರಿಗೆ ಪೂಜೆ ಇಲ್ಲವಂತೆ. ರಸ್ತೆ ಮಧ್ಯದ ಸರ್ಕಲ್ ಗಳಲ್ಲಿ ಮಹಾಭಾರತದ, ರಾಮಾಯಣದ ಪಾತ್ರಗಳ ವಿಗ್ರಹಗಳು, ದೇವರದ್ದೇ ವಿಗ್ರಹಗಳು ಅಂತ ಏನಿಲ್ಲ, ರಾಕ್ಷಸರ ಹಾಗೂ ಋಷಿಗಳ ಪ್ರತಿಮೆಗಳೂ ಸಹ ಇದ್ದವು.             ಅಲ್ಲಿಯ ಸಂಸ್ಕೃತಿಗೂ ನಮ್ಮ ಸಂಸ್ಕೃತಿಗೂ ತುಂಬಾ ಸಾಮ್ಯತೆಗಳಿವೆ. ಸನಾತನ ಧರ್ಮವು ಮೂಲತಃ ಪ್ರಕೃತಿಯನ್ನು ಆರಾಧಿಸುವ ಧರ್ಮ. ಹಾಗಾಗಿ ನಮ್ಮ ಹೆಚ್ಚಿನ ದೇವಾಲಯಗಳು ಪ್ರಕೃತಿಯ ಮಧ್ಯದಲ್ಲಿ ಅಂದರೆ ಒಂದೋ ಬೆಟ್ಟದ ಮೇಲೆ ಇಲ್ಲವೇ ನದಿ ತೀರದಲ್ಲಿವ...