Posts

ಓದಿನ ಸುಖ "ಬಲಾಢ್ಯ ಹನುಮ"

ಪುಸ್ತಕದ ಹೆಸರು : ಬಲಾಢ್ಯ ಹನುಮ ಪ್ರಕಾಶನದ ಹೆಸರು : ಅಯೋಧ್ಯಾ ಪ್ರಕಾಶನ          ಅಯೋಧ್ಯಾ ಪ್ರಕಾಶನದಿಂದ ರಾಮಾಯಣದ ಪುಸ್ತಕವನ್ನು ಓದಿ ಇಷ್ಟಪಟ್ಟ ನಾವು ಆನಂತರ ಬಲಾಢ್ಯ ಹನುಮ ಪುಸ್ತಕವನ್ನು ತರಿಸಿಕೊಂಡೆವು. ಮಗಳು ರಾಮಾಯಣ ಪುಸ್ತಕವನ್ನು ಓದಿ ಅದರಲ್ಲಿರುವ ಕಥೆಯನ್ನು ಹೇಳುವಂತೆ ಅವಳ ಅಜ್ಜ ಅಜ್ಜಿಯಲ್ಲಿ ಪೀಡಿಸುತ್ತಿದ್ದಳು. ಆ ಪುಸ್ತಕ ಆಂಗ್ಲ ಭಾಷೆಯಲ್ಲಿ ಇದ್ದುದರಿಂದ ಅವರಿಗೆ ಅದನ್ನು ಓದಲು ಕಷ್ಟವಾಗುತ್ತಿದ್ದರಿಂದ ಈ ಪುಸ್ತಕದ ಕನ್ನಡ ಅವತರಣಿಕೆಯನ್ನು ತರಿಸಿದೆ. ಈ ಪುಸ್ತಕವು ಸಹ ರಾಮಾಯಣ ಪುಸ್ತಕದಂತೆ ಅತ್ಯಂತ ಆಕರ್ಷಕವಾಗಿದೆ. ಹನುಮಂತನ ಬಾಲ್ಯದ ತುಂಟಾಟಗಳು ಹೊಟ್ಟೆ ಹುಣ್ಣಾಗುವಂತೆ ನಗಿಸುತ್ತವೆ. ಹನುಮಂತನ ಸಾಹಸ ಮಕ್ಕಳಲ್ಲಿ ಸ್ಫೂರ್ತಿಯನ್ನು ತುಂಬುತ್ತದೆ. ಚಿತ್ರಗಳೂ ಸಹ ಅತ್ಯಂತ ಆಕರ್ಷಕವಾಗಿವೆ. ಆದರೆ ಒಂದೇ ಒಂದು ಸಣ್ಣ ಕೊರತೆಯೆಂದರೆ ಹನುಮಂತನ ಕಥೆಯನ್ನು ವಿವಿಧ ಮೂಲಗಳಿಂದ ಪಡೆದುಕೊಂಡ ಕಾರಣವೋ ಏನೋ ಕಥೆಯ ಸರಣಿಯಲ್ಲಿ ನಿರಂತರತೆ ಇಲ್ಲ. ಇದೊಂದು ಸಣ್ಣ ಕೊರತೆ ಬಿಟ್ಟರೆ ಈ ಪುಸ್ತಕವೂ ಸಹ ಬಹಳ ಇಷ್ಟವಾಯಿತು.

ಓದಿನ ಸುಖ "ಮ್ಯಾಜಿಕ್ ಪಾಟ್ (ಸಾಪ್ತಾಹಿಕ ಪತ್ರಿಕೆ)"

Image
ಪುಸ್ತಕದ ಹೆಸರು: ಮ್ಯಾಜಿಕ್ ಪಾಟ್ (ಸಾಪ್ತಾಹಿಕ ಪತ್ರಿಕೆ)       ಮಗಳಿಗೆ ಸುಮಾರು ಎರಡು - ಎರಡೂವರೆ ವರ್ಷವಾದಾಗ ಮನೆಯ ಹತ್ತಿರದ ಗ್ರಂಥಾಲಯಕ್ಕೆ ನಾನು ಹೋಗುವಾಗ ಅವಳನ್ನೂ ಕರೆದುಕೊಂಡು ಹೋಗುತ್ತಿದ್ದೆ. ಅಲ್ಲಿ ಮುಂಭಾಗದಲ್ಲಿ ವಿವಿಧ ಪತ್ರಿಕೆಗಳನ್ನು ಜೋಡಿಸಿರುತ್ತಿದ್ದರು. ಅವುಗಳ ಮಧ್ಯೆ ಮ್ಯಾಜಿಕ್ ಪಾಟ್ ಪುಸ್ತಕವೂ ಇತ್ತು. ಅದನ್ನು ನೋಡಿದ್ದೇ ತಡ ಮಗಳು ಕೈಗೆತ್ತಿಕೊಂಡಿದ್ದಳು. ಅಷ್ಟು ಆಕರ್ಷಣೀಯವಾಗಿತ್ತು ಆ ಪತ್ರಿಕೆ. ಆದರೆ ಪತ್ರಿಕೆಗಳನ್ನು ಮನೆಗೆ ತೆಗೆದುಕೊಂಡು ಹೋಗಲು ಅವಕಾಶವಿಲ್ಲದುದರಿಂದ ಮನೆಗೆ ಬಂದು ಈ ಪತ್ರಿಕೆಯ ಬಗ್ಗೆ ಅಂತರ್ಜಾಲದಲ್ಲಿ ಜಾಲಾಡಿ ಚಂದಾದಾರರರಾದೆವು. ಅಮೇಲಿನಿಂದ ಪ್ರತಿ ಬುಧವಾರ ಮ್ಯಾಜಿಕ್ ಪಾಟ್ ಗೋಸ್ಕರ ಕಾಯುವುದೇ ನಮ್ಮ ಕೆಲಸವಾಯಿತು. ಒಮ್ಮೆ ಕೈಗೆ ಬಂದೊಡನೆಯೇ ಅದರಲ್ಲಿರುವ ಚಟುವಟಿಕೆ ಗಳನ್ನೆಲ್ಲ ಮಾಡಿ ಮುಗಿಸಿದರೆ ಸಮಾಧಾನ. ಚಿತ್ರಕಥೆಗಳು, ದಾರಿ ತೋರಿಸುವುದು, ಚುಕ್ಕಿ ಜೋಡಿಸುವುದು, ಸಾಹಸಕಥೆ, ನೀತಿಕಥೆ, ಬಣ್ಣ ತುಂಬುವುದು, ಅಕ್ಷರಗಳನ್ನು ಬರೆಯುವುದು, ಸಂಖ್ಯೆಗಳ ಗಣನೆ, ಚಿಕ್ಕ ಪುಟ್ಟ ಕವನಗಳು ಹೀಗೆ ಪುಟ ಪುಟವೂ ಮಕ್ಕಳನ್ನು ಆಕರ್ಷಿಸುವಂತೆ ರೂಪಿಸಿದ್ದಾರೆ. ಅಷ್ಟೇ ಅಲ್ಲದೆ ಮಕ್ಕಳು ಸ್ವತಃ ಮಾಡಲು ಸುಲಭವಾಗಿರುವಂತಹ ಪೇಪರ್ ಕ್ರಾಫ್ಟ್ ಕೂಡ ಇದೆ. ಇದನ್ನು ನೋಡಿ ಮಗಳು ಬಹಳ ಪೇಪರ್ ಕ್ರಾಫ್ಟ್ ಅನ್ನು ತಯಾರಿಸಿದ್ದಾಳೆ. ಅದಲ್ಲದೇ ಸ್ವಲ್ಪ ದೊಡ್ಡ ವಯಸ್ಸಿನ ಮಕ್ಕಳೇ ತಯಾರ...

ಓದಿನ ಸುಖ "Illustrated Ramayana"

ಪುಸ್ತಕದ ಹೆಸರು : Illustrated Ramayana  ಪ್ರಕಾಶನ : ಅಯೋಧ್ಯಾ ಪ್ರಕಾಶನ           ಮಗಳು ಟಿವಿಯಲ್ಲಿ 'ಲಿಟಲ್ ಕೃಷ್ಣ ' ಕಾರ್ಟೂನ್ ನೋಡಿ ಇಷ್ಟಪಟ್ಟಿದ್ದರಿಂದ ಇನ್ನು ರಾಮಾಯಣ ಕಥೆಯನ್ನು ಹೇಳಲು ಆರಂಭಿಸೋಣ ಎಂದು ಆಲೋಚಿಸುತ್ತಿದ್ದಾಗ ಈ ಮೊದಲೇ ಅವಳಿಗೋಸ್ಕರ ಒಂದು ರಾಮಾಯಣ ಪುಸ್ತಕವನ್ನು ತಂದಿದ್ದೆ. ಅದರ ಕಥೆಗಳನ್ನು ಓದಿ ಹೇಳುತ್ತಿದ್ದಾಗ ಅದು ಅವಳಿಗೆ ಅಷ್ಟೊಂದು ಆಕರ್ಷಣೀಯ ಎಂದು ಅನಿಸುತ್ತಿರಲಿಲ್ಲ. ಹಾಗಾಗಿ ಅರ್ಧದಲ್ಲೇ ಕಥೆ ಹೇಳುವುದನ್ನು ಕೈ ಬಿಟ್ಟಿದ್ದೆ. ಆಗ ನನಗೆ ಅಯೋಧ್ಯಾ ಪ್ರಕಾಶನದವರು ಹೊರತಂದ Illustrated Ramayana ಪುಸ್ತಕದ ಬಗ್ಗೆ ತಿಳಿದು ಪುಸ್ತಕವನ್ನು ತರಿಸಿಕೊಂಡು, ಅವರು ಈ ಪುಸ್ತಕದ ಬಗ್ಗೆ ನಡೆಸಿದ ರಸಪ್ರಶ್ನೆ ಸ್ಪರ್ಧೆಗೂ ಸಹ ನೊಂದಾಯಿಸಿದೆ.             ಒಮ್ಮೆ ಪುಸ್ತಕ ಕೈಗೆ ಬಂದಿದ್ದೇ ತಡ ಕೆಳಗಿಡಲು ಮನಸ್ಸೇ ಬರುತ್ತಿರಲಿಲ್ಲ ಅವಳಿಗೆ. ಕಥೆಯದ್ದೇ ಒಂದು ತೂಕವಾದರೆ ಪುಟ ತುಂಬಾ ಆವರಿಸಿದ ಚಿತ್ರಗಳದ್ದು ಇನ್ನೊಂದು ತೂಕ. ಕಥೆ ಮೂಲ ವಾಲ್ಮೀಕಿ ರಾಮಾಯಣಕ್ಕೆ ಹೆಚ್ಚು ನಿಷ್ಠವಾಗಿದೆ. ಚಿಕ್ಕ ಸುಂದರ ವಾಕ್ಯಗಳು ಮಕ್ಕಳಿಗೆ ಕಥೆಯನ್ನು ಅರ್ಥ ಮಾಡಿಸಲು ಸಹಾಯಕಾರಿಯಾಗಿದೆ. "ಕಾಡಲ್ಲಿ ರಾಕ್ಷಸರು ಇದ್ದಾರೆ ಎಂದು ತಿಳಿದಿದ್ದೂ ಸಹ ರಾಮ ಯಾಕೆ ಕಾಡಿಗೆ ಹೋಗಲು ಒಪ್ಪಿಕೊಂಡ?" "ಕೈಕೇಯಿ ಯಾಕೆ ರಾಮನನ್ನು ಕಾಡಿಗೆ ಕಳುಹಿಸಿದಳು?" ಮುಂತಾದ ಪ್ರಶ್ನೆ...

2024 ರಲ್ಲಿ ನಾನು ಓದಿದ ಪುಸ್ತಕಗಳು

        ಪುಸ್ತಕವನ್ನು ಓದುವುದು ನೆಚ್ಚಿನ ಹವ್ಯಾಸ. ಆದರೆ ಓದಿದ ಪುಸ್ತಕದ ಬಗ್ಗೆ ನನ್ನ ಅಭಿಪ್ರಾಯವನ್ನು ಬರೆಯಲು ಸ್ವಲ್ಪ ಸೋಮಾರಿತನ. ಒಂದು ಪುಸ್ತಕವನ್ನು ಓದಿ ಅದರ ಬಗ್ಗೆ ಅನಿಸಿಕೆಯನ್ನು ಬರೆದ ಆನಂತರವೇ ಇನ್ನೊಂದು ಪುಸ್ತಕವನ್ನು ಓದಬೇಕೆಂಬ ನಿಯಮವನ್ನು ನಾನೇ ಮಾಡಿ, ಅದನ್ನು ನಾನೇ ಮುರಿದು ಇನ್ನೊಂದು ಪುಸ್ತಕವನ್ನು ಓದುತ್ತೇನೆ. ಹೀಗಾಗಿ ಪುಸ್ತಕದ ಓದಿನ ಓಟ ಮುಂದುವರಿಯುತ್ತದೆ. ಅನಿಸಿಕೆ ಬರೆಯುವುದು ಹಿಂದೆಯೇ ಉಳಿಯುತ್ತದೆ. ಕುಟುಂಬ ಸದಸ್ಯರ ಅನಾರೋಗ್ಯ, ಆಸ್ಪತ್ರೆ ವಾಸ, ಪ್ರವಾಸ, ತಿರುಗಾಟ ಇವುಗಳ ಜೊತೆಗೆ ಈ ವರ್ಷ ನಾನು ಓದಿದ ಪುಸ್ತಕಗಳು ಇಂತಿವೆ. 1) ಜೊತೆ ಜೊತೆಯಲಿ - ಗೀತಾ ಬಿ. ಯು  2) ರೂಪದರ್ಶಿ - ಕೆ.ವಿ.ಅಯ್ಯರ್  3) ಬಳ್ಳಿ ಕಾಳ ಬೆಳ್ಳಿ - ಕೆ ಎನ್ ಗಣೇಶಯ್ಯ  4) ಮನ್ವಂತರ - ವಸುಮತಿ ಉಡುಪ  5) ಸಮಕಾಲೀನ ಕನ್ನಡದ ಸಣ್ಣ ಕಥೆಗಳು - ಸಂಪಾದಕರು: ರಾಮಚಂದ್ರ ಶರ್ಮ  6) ಅವಧೇಶ್ವರಿ - ಶಂಕರ ಮೊಕಾಶಿ ಪುಣೇಕರ್  7) ಇಲ್ಲಿಯವರೆಗಿನ ನೇಮಿಚಂದ್ರರ ಕಥೆಗಳು - ನೇಮಿಚಂದ್ರ 8) ಅಂಚು - ಎಸ್ ಎಲ್ ಭೈರಪ್ಪ  9) ಸಾವೇ ಬರುವುದಿದ್ದರೆ ನಾಳೆ ಬಾ! - ನೇಮಿಚಂದ್ರ 10) ಅಮೇರಿಕಾದಲ್ಲಿ ನಾನು - ಬಿ.ಜಿ.ಎಲ್ ಸ್ವಾಮಿ 11) ಅಮೇರಿಕನ್ನಡದ ಕಥೆಗಳು - ಸಂಪಾದಕರು: ನಾಗಲಕ್ಷ್ಮಿ ಹರಿಹರೇಶ್ವರ 12) ತುಮುಲ - ಸುಧಾಮೂರ್ತಿ  13) ಅಗೆದಷ್ಟೂ ನಕ್ಷತ್ರ - ಸುಮಂಗಲಾ...

ಓದಿನ ಸುಖ - "ಅಮೇರಿಕದಲ್ಲಿ ನಾನು"

Image
ಪುಸ್ತಕದ ಹೆಸರು : ಅಮೇರಿಕಾದಲ್ಲಿ ನಾನು  ಲೇಖಕರು : ಬಿ ಜಿ ಎಲ್ ಸ್ವಾಮಿ               ಕಾಲೇಜಿನಲ್ಲಿದ್ದಾಗ ಬಿ ಜಿ ಎಲ್ ಸ್ವಾಮಿಯವರ ತಮಿಳು ತಲೆಗಳ ನಡುವೆ, ಹಸಿರು ಹೊನ್ನು ಮುಂತಾದ ಕೃತಿಗಳನ್ನು ಓದಿದ್ದರಿಂದ ಅವರ ಹಾಸ್ಯ ಭರಿತ ಶೈಲಿ ಪರಿಚಿತವೇ ಆಗಿತ್ತು. ಆದರೆ ಈ ಪುಸ್ತಕದ ಬಗ್ಗೆ ಎಲ್ಲಿಯೂ ವಿಮರ್ಶೆ, ಅನಿಸಿಕೆಯನ್ನು ಓದಿಲ್ಲದಿದ್ದರಿಂದ ಕುತೂಹಲದಿಂದ ಕೈಗೆತ್ತಿಕೊಂಡೆ. ಈ ಪುಸ್ತಕವನ್ನು ಪ್ರವಾಸ ಕಥನ ಎನ್ನುವುದಕ್ಕಿಂತ ಅಮೇರಿಕಾದಲ್ಲಿ ಅನುಭವಿಸಿದ ಲೇಖಕರ ಅನುಭವ ಕಥನ ಎಂದರೆ ಹೆಚ್ಚು ಸೂಕ್ತವಾಗುತ್ತದೆ. ಲೇಖಕರ ಹಾಗೂ ಸಹ ಪ್ರಯಾಣಿಕರ ಪರದಾಟದ ಹಾಸ್ಯ ಪ್ರಸಂಗಗಳು ನಮ್ಮನ್ನು ನಗಿಸುತ್ತವೆ.              ಮೊದಲ ಬರಹ 'ಹಡಗಿನಲ್ಲಿ'. 2ನೇ ಮಹಾಯುದ್ಧ ದಿಂದ ಹಿಂತಿರುಗುತ್ತಿದ್ದ ಸೈನಿಕರೊಂದಿಗೆ ಹಡಗಿನಲ್ಲಿ ಪಯಣಿಸುತ್ತಿದ್ದಾಗ ಒಂದೇ ಆವರಣದಲ್ಲಿ ಸುಮಾರು 300 ಜನರ ಉಪಯೋಗಕ್ಕಿರುವ, ಎದುರು ಸಾಲಿನಲ್ಲಿ ಕೂತವರನ್ನು, ಬಂದು ಹೋಗುವವರನ್ನು ಕಾಣುವಂತೆ ನಿರ್ಮಿಸಿದ ಶೌಚಾಲಯಗಳಲ್ಲಿ ಭಾರತೀಯರ ಪರದಾಟ, ಅದನ್ನು ಕಂಡು ಹಡಗಿನ ಕ್ಯಾಪ್ಟನ್ ಸೂಚಿಸಿದ ಪರಿಹಾರ ಎಲ್ಲವೂ ಓದುಗರನ್ನು ನಗೆಗಡಲಲ್ಲಿ ತೇಲಿಸುತ್ತದೆ.             'ನನ್ನ ಟೋಪಿ' ಎಂಬ ಶೀರ್ಷಿಕೆಯ ಬರಹ...

ಓದಿನ ಸುಖ 'ಸೆಕೆಂಡ್ ಇನ್ನಿಂಗ್ಸ್'

Image
ಪುಸ್ತಕದ ಹೆಸರು: ಸೆಕೆಂಡ್ ಇನ್ನಿಂಗ್ಸ್  ಲೇಖಕರು : ಗೀತಾ ಬಿ.ಯು.             'ಸೆಕೆಂಡ್ ಇನ್ನಿಂಗ್ಸ್' ಸುಮಾರು ಹದಿನೇಳು ಸಣ್ಣ ಕಥೆಗಳ ಸಂಗ್ರಹ. ಲೇಖಕಿಯೇ ಹೇಳಿದಂತೆ ವೃದ್ಧಾಪ್ಯ, ಸಂಬಂಧಗಳು, ಸ್ವಾರ್ಥ, ಆಸ್ತಿ, ಹಕ್ಕು ಬಾಧ್ಯತೆಗಳು ಇಲ್ಲಿರುವ ಕಥೆಗಳ ಕೇಂದ್ರ. ಕಥೆಯೊಂದನ್ನು ಬರೆಯಲು ಪ್ರೇರಣೆಯಾದ ಘಟನೆ, ಕಾಡಿದ ಅಂಶ, ತನ್ನ ಸಂಬಂಧದೊಳಗೂ ಲೆಕ್ಕಾಚಾರ ಹಾಕುವ ಮನುಷ್ಯನ  ಸ್ವಭಾವ, ತಲೆಮಾರುಗಳ ನಡುವಿನ ಅಂತರ, ಕಥೆ ಪ್ರಕಟವಾದ ಪತ್ರಿಕೆ, ಕಥೆಗೆ ಓದುಗರ ಪ್ರತಿಸ್ಪಂದನೆ ಹೀಗೆ ಲೇಖಕಿಗೆ ಕಾಡಿದ ಅಂಶ ಇವೆಲ್ಲವನ್ನೂ ಪ್ರತಿ ಕಥೆಯ ಮೊದಲು ಬರೆದಿದ್ದಾರೆ. ಹಾಗಾಗಿ ಕಥೆಯೊಂದನ್ನು ಓದುವ ಮೊದಲು ಕಥೆಯ ಹೂರಣ, ಕಥೆಯ ಆಶಯ ಓದುಗರಿಗೆ ಮನದಟ್ಟಾಗುವುದು ಈ ಪುಸ್ತಕದ ಧನಾತ್ಮಕ ಅಂಶ. ಸರಳ, ಸುಂದರ ಭಾಷೆ, ಓದಿಸಿಕೊಂಡು ಹೋಗುವ ಭಾಷಾ ಶೈಲಿಯಿಂದಾಗಿ ಪುಸ್ತಕ ಬಹಳ ಇಷ್ಟವಾಗುತ್ತದೆ.             ಆತ್ಮೀಯರಿಗೆ ಕೊಡುವ ಉಡುಗೊರೆಯಲ್ಲೂ ಲೆಕ್ಕಾಚಾರ ಹಾಕುವ ಮನುಷ್ಯನನ್ನು ಪ್ರೀತಿ, ವಿಶ್ವಾಸ ಮುಂತಾದ ಗುಣಗಳು ಆಳದೆ ಸ್ವಾರ್ಥ, ತಿರಸ್ಕಾರಗಳು ಆಳುತ್ತವೆ ಎಂದು ಬೇಸರ ವ್ಯಕ್ತಪಡಿಸುತ್ತಾ ಲೇಖಕಿ 'ಆಸೆ' ಎಂಬ ಕಥೆಯಲ್ಲಿ ನಾಯಕಿಯ ಮೂಲಕ "ಆಸೆ ಅಂದ್ರೆ ನಾನೇ ಮಾಡಿಸ್ಕೋಬೇಕು, ತೊಟ್ಕೋಬೇಕು, ಉಟ್ಕೋಬೇಕು ಅನ್ನೋದಷ್ಟೇ ಅಲ್ಲ. ...

ನ್ಯಾನೋ ಕಥೆಗಳು

ನ್ಯಾನೋ ಕಥೆ ೧ ಸಂದು ಗೊಂದಲಿನಲ್ಲಿರುವ, ಗಾಳಿ ಬೆಳಕು ಸರಿಯಾಗಿ ಬೀಳದ ಸಣ್ಣ ಗೂಡಿನಂತಹ ಡೇ ಕೇರ್ ನಲ್ಲಿ ಅಳುತ್ತಿರುವ ತನ್ನ ಮಗುವನ್ನು ಬಿಟ್ಟು, ವಿಶಾಲವಾದ ಮನೆಯಲ್ಲಿ, ತನ್ನ ತಾಯಿಯನ್ನು ನೆನೆದು ಅಳುತ್ತಿದ್ದ ಮಗುವನ್ನು ಸಮಾಧಾನಗೊಳಿಸುತ್ತಿದ್ದಳು ಅವಳು. ನ್ಯಾನೋ ಕಥೆ ೨ ನಗರದ ಪ್ರಸಿದ್ಧ ಹಾಡುಗಾರ್ತಿ, ರಾತ್ರಿಯ ಸಂಗೀತ ಕಛೇರಿಯನ್ನು ಮುಗಿಸಿ ಬಂದಾಗ ಅವಳ ಮಗು ಕೆಲಸದವಳ ಕೀರಲು ಧ್ವನಿಯ ಜೋಗುಳವನ್ನು ಕೇಳುತ್ತಾ ನಿದ್ರೆಗೆ ಜಾರಿತ್ತು.