ದೇವತೆಗಳ ದ್ವೀಪದಲ್ಲಿ ಭಾಗ -1
ವಿದೇಶ ಪ್ರವಾಸವೆನ್ನುವುದು ನಮ್ಮ ತಲೆಮಾರಿನ ಹೆಚ್ಚಿನವರ ಕನಸು. ನಮ್ಮ ನಾಳೆಗಳಿಗಾಗಿ ತಮ್ಮ ನಿನ್ನೆಗಳನ್ನು ತ್ಯಾಗ ಮಾಡಿದ ನಮ್ಮ ಪಾಲಕರಿಗೆ, ನಾವು ಕಾಣುತ್ತಿರುವ, ಬದಲಾಗುತ್ತಿರುವ ಜಗತ್ತನ್ನು ತೋರಿಸುವುದು ಸಹ ನಮ್ಮ ಕನಸಾಗಿತ್ತು. ಹೀಗಾಗಿ ನಾವು ನಮ್ಮ ಮೊದಲ ವಿದೇಶ ಪ್ರವಾಸವನ್ನು ಯೋಜಿಸಿದ್ದೆವು. ನೈಸರ್ಗಿಕವಾಗಿ ರಮಣೀಯವಾದ, ಸಾಂಸ್ಕೃತಿಕವಾಗಿ ಶ್ರೀಮಂತವಾಗಿರುವ ಹಾಗೂ ನಮ್ಮ ಬಜೆಟ್ ನ ಪರಿಮಿತಿಯಲ್ಲಿ ಬರುವ ದೇಶವನ್ನು ಪ್ರವಾಸಕ್ಕಾಗಿ ಆಯ್ದುಕೊಳ್ಳಲು ನಿರ್ಧರಿಸಿದಾಗ ನಮಗೆ ಇಂಡೋನೇಷಿಯಾದ ದ್ವೀಪ 'ಬಾಲಿ' ಒಳ್ಳೆಯ ಆಯ್ಕೆ ಎಂದು ಅನಿಸಿತು. ಹೀಗಾಗಿ ನಮ್ಮ ಮೊದಲ ವಿದೇಶ ಪ್ರವಾಸಕ್ಕಾಗಿ ಬಾಲಿಯನ್ನು ಆಯ್ದುಕೊಂಡೆವು. ಬಾಲಿಗೆ ಹೋಗಬೇಕೆಂದು ನಿರ್ಧರಿಸಿದ ಮೇಲೆ ಮೊಬೈಲ್ ತುಂಬಾ ಬಾಲಿಯ ವಿಷಯಗಳು!! ಯಾವುದೇ ಪ್ಯಾಕೇಜ್ ನ ಸಹಾಯವಿಲ್ಲದೇ ಕೇವಲ ಯೂಟ್ಯೂಬ್, ಚಾಟ್ ಜಿಪಿಟಿ ಹಾಗೂ wanderlog ಆಪ್ ಸಹಾಯದಿಂದ, ನಾವು ನೋಡಬೇಕಾದ ಸ್ಥಳಗಳ ಪಟ್ಟಿ ಹಾಗೂ ಉಳಿದುಕೊಳ್ಳುವ ಹೊಟೆಲ್ ಗಳ ಪಟ್ಟಿಯನ್ನು ತಯಾರಿಸಿದೆವು. ಇನ್ನುಳಿದಂತೆ ಪ್ರಯಾಣಿಸಬೇಕಾದ ವಿಮಾನಗಳ ಪಟ್ಟಿ, ಬ್ಯಾಗ್ ಪ್ಯಾಕಿಂಗ್ ಹೀಗೆ ಒಂದೊಂದೇ ಸಿದ್ಧತೆಗಳು ನಡೆದಂತೆ ಹೋಗುವ ಕಾತರವೂ ಸಹ ಹೆಚ್ಚಾಯಿತು. ಅಂತೂ ಹೊರಡುವ ದಿನ ಬಂದೇ ಬಿಟ್ಟಿತು! ಏಪ್ರಿಲ್ 13 ರ ...