Posts

ಓದಿನ ಸುಖ "ಪುರಸ್ಕಾರ"

Image
ಪುಸ್ತಕದ ಹೆಸರು: ಪುರಸ್ಕಾರ ಲೇಖಕರು: ಚಿತ್ರಲೇಖ                    ಪುರಸ್ಕಾರವು ಎರಡು ಕಿರು ಕಾದಂಬರಿಗಳಾದ 'ಪುರಸ್ಕಾರ' ಹಾಗೂ 'ಪ್ರತೀಕಾರ' ಗಳ ಗುಚ್ಛ. ಎರಡು ಕಥೆಗಳಲ್ಲಿ ವಿಭಿನ್ನ ಕಾಲಮಾನಕ್ಕೆ ಸೇರಿದ ಇಬ್ಬರು ಹೆಣ್ಣು ಮಕ್ಕಳ ಜೀವನದ ಕಥೆಯನ್ನು ನಿರೂಪಿಸಿದ್ದಾರೆ ಲೇಖಕಿ.           ಹೆಣ್ಣು ಅಕ್ಷರಸ್ಥಳಾಗಿರಲಿ ಅಥವಾ ಅನಕ್ಷರಸ್ಥಳಾಗಿರಲಿ ಆಂತರ್ಯದಲ್ಲಿ ಅವಳು ಸ್ವಾಭಿಮಾನಿಯಾಗಿರುತ್ತಾಳೆ. ಅಂತಹ ಒಬ್ಬ ಅನಕ್ಷರಸ್ಥ ಸ್ವಾಭಿಮಾನೀ ಹೆಣ್ಣೊಬ್ಬಳ ಕಥೆಯೇ 'ಪುರಸ್ಕಾರ'.          ಈ ಕಥೆಯ ಪ್ರಮುಖ ಪಾತ್ರ ಸುಂದರಮ್ಮ. ಹುಟ್ಟಿದಾಗ ಸರಸ್ವತಿ ಎಂಬ ಹೆಸರನ್ನು ಹೊತ್ತ ಸುಂದರಮ್ಮ ಹತ್ತನೇ ವಯಸ್ಸಿಗೇ ಮದುವೆಯಾಗಿ ಗಂಡನ ಮನೆಯನ್ನು ಸೇರಿದಳು. ಮದುವೆಯಾಗಿದ್ದು ಹಳ್ಳಿಯಲ್ಲಿದ್ದ ವಿಜ್ಞಾನಿಯನ್ನು. ಸದಾ ಆಕಾಶ,ನಕ್ಷತ್ರ ಎಂದು ಅಧ್ಯಯನದಲ್ಲೇ ಮುಳುಗಿದ್ದ ಆದಿಕೇಶವನನ್ನು. ಅತ್ಯಂತ ವಿಕ್ಷಿಪ್ತವಾದ ಪಾತ್ರ ಆದಿಕೇಶವನದ್ದು. ಆತನದ್ದು ವಿಚಿತ್ರ ಸ್ವಭಾವ. ಹೆಂಡತಿಯ ಮೇಲೆ ಸ್ವಲ್ಪವೂ ಪ್ರೀತಿಯಿಲ್ಲ. ಪ್ರೀತಿಯಿಲ್ಲದಿದ್ದರೂ ಚಿಂತೆಯಿಲ್ಲ. ಆದರೆ ಆತನಿಗೆ ತನ್ನ ಹೆಂಡತಿಯ ಮೇಲೆ ಕರುಣೆಯಿಲ್ಲ, ಜೊತೆಗೆ ಕುರೂಪಿಯಾಗಿದ್ದ, ಕಲಾವತಿಯಾಗಿದ್ದ ತನ್ನ ಹೆಂಡತಿಯು ರಚಿಸುತ್ತಿದ್ದ ರಂಗೋಲಿಯನ್ನಾಗಲೀ, ಹೂ ಮಾಲೆಯನ್...

ಹೀಂಗೊಂದು ದೋಸೆ ಪುರಾಣ

Image
        "ಅಮ್ಮಾ... ನಾಳೆ ಕಾಪಿಗೆಂತ?" ಹೀಂಗಿಪ್ಪ ಒಂದು ಪ್ರಶ್ನೆಯ ಆನುದೆ ಎನ್ನ ತಮ್ಮಂದೇ ದಿನಾ ಕೇಳಿಯೊಂಡು ಇತ್ತಿದ್ದೆಯ. ಅದು ಹೊತ್ತೋಪಗಳೊ ಅಲ್ಲಾ ಕಸ್ತಲಪ್ಪಗಳೊ ಕೇಳಿಯೊಂಡು ಇದ್ದದು ಹೇಳಿ ನಿಂಗ ಗ್ರೇಷಿರೆ ತಪ್ಪು. ಉದಿಯಪ್ಪಾಗಣ ಕಾಪಿ ಕುಡಿವಾಗಳೆ ಎಂಗೊಗೆ ಮರುದಿನದ ಕಾಪಿಯ ಚಿಂತೆ. "ಹೋ ಎಂತರ ನಿಂಗಳದ್ದು ರಗಳೆ? ಇನ್ನು ಎನ್ನದೇ ಇಂದ್ರಾಣ ಕಾಪಿ ಕುಡುದು ಆಯಿದಿಲ್ಲೆ. ನಿಂಗಳದ್ದು ಆಗಳೆ ನಾಳಂಗೆ ಕಾಪಿಗೆಂತ ಹೇಳಿ ಸುರುವಾತ ಜಗಳ" ಹೇಳಿ ಅಮ್ಮನ ಸ್ವರ ಕೇಳಿದ್ದೇ ತಡ ಎಂಗ ಗಪ್ ಚುಪ್. ಅದು ರಜ್ಜ ಹೊತ್ತಷ್ಟೆ ಹೇಳಿ ಅಮ್ಮಂಗು ಗೊಂತಿದ್ದು ಹಾಂಗಾಗಿ ನಾಳಂಗೆ ಕಾಪಿಗೆಂತ ಮಾಡುದು ಹೇಳಿ ಅಮ್ಮನ ತಲೆಬೆಶಿ. ಇದು ಸಾಮಾನ್ಯವಾಗಿ ಎಲ್ಲರ ಮನೆ ಮನೆ ಕಥೆ.             ಸಾಮಾನ್ಯವಾಗಿ ಹವೀಕರ ಮನೇಲಿ ಕಾಪಿಗೆಂತಾ ಹೇಳಿ ಕೇಳೆಕ್ಕು ಹೇಳಿಯೇ ಇಲ್ಲೆ. ಹೆಚ್ಚಿನವರ ಮನೇಲಿದೆ ದೋಸೆಯೇ. ಹಾಂಗೆಯೇ ಎಂಗಳ ಮನೆಲಿದೆ ಯಾವಾಗಳೂ ದೋಸೆಯೇ. ದೋಸೆಗೆ ಕಡವಲೆ ಮುನ್ನಾಣ ದಿನವೇ ಅಕ್ಕಿಯ ಬೊದುಲ್ಲೆ ಹಾಕೆಕ್ಕು. ಹಾಂಗಾಗಿ ಹೊತ್ತೋಪಗದ ಒಳ ನಾಳಂಗೆ ಕಾಪಿಗೆಂತ ಹೇಳಿ ಮೊದಲೇ ನಿರ್ಧರಿಸಿ ಆಯೆಕ್ಕು. ಅಕ್ಕಿ ಮಾತ್ರ ಬೊದುಲ್ಲೆ ಹಾಕಿ ಆ ಹಿಟ್ಟಿನ ನೀರು ಮಾಡಿ ಎರದರೆ ರುಚಿರುಚಿಯಾದ ತೆಳ್ಳವು ಸಿದ್ಧ. ಅದರೊಟ್ಟಿಂಗೆ ಬೆಲ್ಲ ಕಾಯಿಸುಳಿಯೋ, ಬಾಳೆ ಹಣ್ಣು ರಸಾಯನವೋ ಇದ್ದರೆ ಸ್ವರ್ಗ ಸುಖ. ಕಾವಲಿಗೆಯ...

ನಿನ್ನಂತಹ ಅಮ್ಮ ನಾನಾಗಲಾರೆ

Image
                      ಭಾಗ 1                                 ಮನೆಗೆಲಸ, ಹಟ್ಟಿ, ತೋಟದ ಕೆಲಸ ಇವೆಲ್ಲವುಗಳ ಮಧ್ಯೆ ಆಯಾ ಕಾಲಕ್ಕೆ ಸಿಗುವ, ನಮ್ಮ ತೋಟದಲ್ಲಿ ಬಿಡುವ ಹಣ್ಣು, ಕಾಯಿ, ತರಕಾರಿಗಳಿಂದ ವಿಶೇಷ ರುಚಿಗಳನ್ನು ಮಾಡಲೇಬೇಕು ಎಂಬುದು ಅಮ್ಮನ ಅಲಿಖಿತ ನಿಯಮ. ಮಾವಿನಕಾಯಿ ಸಿಗುವ ಸಮಯದಲ್ಲಿ ಉಪ್ಪಿನಕಾಯಿ ಹಾಕುವ ಸಂಭ್ರಮ. ಹದವಾದ ಕಾಯಿಗಳನ್ನು ಕೊಯಿದು, ಆರಿಸಿ ತಂದು, ಚೆನ್ನಾಗಿರುವುದನ್ನು ಆರಿಸಿ, ಒರೆಸಿ, ನೀರು ತಾಕದಂತೆ ಉಪ್ಪಿನಕಾಯಿ ಹಾಕುವುದನ್ನು ನೋಡಿದರೆ ಅಮ್ಮನೇ ಉಪ್ಪಿನಕಾಯಿ ಹಾಕುವ ಇಡೀ ಯಜ್ಞ ಕಾರ್ಯದ ಪ್ರಧಾನ ಅಧ್ವರ್ಯು! ಸ್ವಲ್ಪ ನೀರು ತಾಕಿದರೂ ಉಪ್ಪಿನಕಾಯಿ ಹಾಳಾಗುವ ಸಂಭವವಿರುವುದರಿಂದ ಆ ಜಾಗ ನಮಗೆಲ್ಲಾ ನೋ ಎಂಟ್ರಿ ಪ್ರದೇಶವಾಗಿ ಬಿಡುತ್ತಿತ್ತು! ಇನ್ನು ಬೇಸಿಗೆ ಬಂತೆಂದರೆ, ನಮಗೆ ರಜಾ ಸಮಯವಾದ್ದರಿಂದ ನಮ್ಮನ್ನೂ ಸೇರಿಸಿಕೊಂಡು ಹಲಸಿನ ಹಪ್ಪಳದ ತಯಾರಿ ಶುರು. ಹಲಸಿನಕಾಯಿಯನ್ನು ಕೊಯಿದು ಅದರ ತೊಳೆ ಬಿಡಿಸಿ, ಬೇಯಿಸಿ, ಹಿಟ್ಟು ಮಾಡಿ ಹಪ್ಪಳ ಬಿಸಿಲಿನಲ್ಲಿ ಒಣಗಿಸಿ ಬೆಚ್ಚಗೆ ಇರಿಸಿದರೆ ಆ ಮಳೆಗಾಲದಲ್ಲಿ ಧೋ ಎಂದು ಸುರಿಯುವ ಮಳೆಯನ್ನು ನೋಡುತ್ತಾ ಹುರಿದ ಹಪ್ಪಳ ತಿನ್ನುವ ಸುಖ ಬೋನಸ್! ಇನ್ನು ಪುನರ್ಪುಳಿ ಹಣ್ಣಾಗುವ ಸಮಯ...

ನಿನ್ನಂತಹ ಅಮ್ಮ ನಾನಾಗಲಾರೆ

Image
                              ಸಾಮಾನ್ಯವಾಗಿ ಹುಡುಗಿಯರಿಗೆ ಅಪ್ಪ ಅಂದರೆ ಇಷ್ಟ. ಅಮ್ಮ ಅಂದರೆ  ಯಾವತ್ತೂ "ಅದು ಮಾಡಬೇಡ", "ಇದು ಮಾಡು", "ಹೀಗೆ ಇರಬೇಡ",  "ಹಾಗೆ ಇರು" ಎಂದು ಹೇಳುವ ರೂಲರ್. ಅಮ್ಮ ಅರ್ಥವಾಗಬೇಕೆಂದರೆ ನಾವೇ ಸ್ವತಃ ಅಮ್ಮನಾಗಬೇಕು.  ಇದಕ್ಕೆ ನಾನು ಕೂಡ ಹೊರತಾಗಿರಲಿಲ್ಲ. ಅಮ್ಮನ ಬಳಿ  ಜಗಳವಾಡುವಾಗಲೆಲ್ಲ ನಾನು ಹೇಳುತ್ತಿದ್ದ ಮಾತೆಂದರೆ "ನಿನ್ನಂತಹ ಅಮ್ಮ ನಾನಾಗಲಾರೆ".              ಅವಿಭಕ್ತ ಕುಟುಂಬದ ಸಣ್ಣ ಸೊಸೆಯಾಗಿ ಬಂದ ಅಮ್ಮ , ಹೆಂಡತಿಯಾಗಿ, ಸೊಸೆಯಾಗಿ ಹಲವು ಜವಾಬ್ದಾರಿಗಳನ್ನು ನಿರ್ವಹಿಸಬೇಕಿತ್ತು. ಅದರ ಜೊತೆ ಜೊತೆಗೆ ನನ್ನ ಹಾಗೂ ನನ್ನ ತಮ್ಮನ ಪಾಲನೆ. ನಾನು ಶಾಲೆಗೆ ಹೋಗುತ್ತಿದ್ದಾಗ ಶಾಲೆಯಲ್ಲಿ ಯಾವುದೇ ಸ್ಪರ್ಧೆಗಳಿರಲಿ ಅಮ್ಮ ನಮ್ಮನ್ನು ಭಾಗವಹಿಸಲು ಪ್ರೋತ್ಸಾಹಿಸುತ್ತಿದ್ದಳು. ಅದು ಹಾಡು ಹೇಳುವುದೇ ಆಗಿರಲಿ, ಛದ್ಮವೇಷ ಸ್ಪರ್ಧೆಯೇ ಆಗಿರಲಿ, ಚಿತ್ರ ಬಿಡಿಸುವ ಸ್ಪರ್ಧೆಯಾಗಿರಲಿ, ಕಥೆ ಹೇಳುವುದಾಗಿರಲಿ. ಸ್ಪರ್ಧೆ ಯಾವುದೇ ಇದ್ದರೂ ನಮ್ಮ ಭಾಗವಹಿಸುವಿಕೆ ಇರಲೇಬೇಕಿತ್ತು. ಹಟ್ಟಿ ಹಾಗೂ ತೋಟದ ಕೆಲಸದ ಜೊತೆ ಜೊತೆಗೇ, ಮನೆಯಲ್ಲೇ ಇರುತ್ತಿದ್ದ ವಸ್ತುಗಳನ್ನು ಉಪಯೋಗಿಸಿ ಛದ್ಮವೇಷ ಸ್ಪರ್ಧೆಗೆ ಅಮ್ಮ ನಮ್ಮನ್ನು ತಯಾರು ಮಾಡುತ...

ಓದಿನ ಸುಖ "ಪುನರ್ವಸು"

Image
ಪುಸ್ತಕದ ಹೆಸರು: ಪುನರ್ವಸು ಲೇಖಕರ ಹೆಸರು: ಡಾ. ಗಜಾನನ ಶರ್ಮ                ಪುಸ್ತಕವನ್ನು ಕೊಂಡು ಅರ್ಧ ವರ್ಷವೇ ಕಳೆದಿತ್ತು. ಪುಸ್ತಕದ ಗಾತ್ರ ನೋಡಿ ಓದಲು ಹಿಂಜರಿಯುತ್ತಿದ್ದೆ. ಆದರೆ ಯಾವಾಗ ಪುಸ್ತಕವನ್ನು ಓದಲು ಕೈಗೆತ್ತಿಕೊಂಡೆನೋ ಪುಸ್ತಕದ ವಿಷಯದ ಅಗಾಧತೆಯ ಅರಿವಾಯಿತು. ವಿಶಾಲವಾದ ಕಾನ್ವಾಸ್ ನಲ್ಲಿ ಹರಡಿದ ವಿವಿಧ ಬಣ್ಣಗಳಿಂದ ಆವೃತವಾದ ಪೈಂಟಿಂಗ್ ನಂತೆಯೇ ಭಾಸವಾಯಿತು.               ಇದು ಮುಳುಗಡೆಯ ಕಥೆಯೋ? ತಲೆಮಾರುಗಳ ನಡುವಿನ ಮಾನಸಿಕ ಅಂತರದ ಕಥೆಯೋ? ಒಂದು ಭೂ ಭಾಗದ ಸಾಮಾಜಿಕ, ಸಾಂಸ್ಕೃತಿಕ ಹಾಗೂ ಪ್ರಾಕೃತಿಕ ಸ್ಥಿತ್ಯಂತರದ ಕಥೆಯೋ? ಹೌದು ಇದೆಲ್ಲವನ್ನೂ ಒಳಗೊಂಡ ಒಂದು ಕಾದಂಬರಿ. ಒಂದು ಕಾದಂಬರಿಯಲ್ಲೇ ಎಷ್ಟು ವ್ಯಕ್ತಿಗಳ ವ್ಯಕ್ತಿತ್ವದ ಚಿತ್ರಣ, ಮಾನಸಿಕ ತುಮುಲ, ತಾವು ಜೀವಿಸಿದ ಊರನ್ನು ಬಿಟ್ಟು ಹೋಗುವ ಸಂಕಟ ಎಲ್ಲವನ್ನೂ ಎಷ್ಟು ಅದ್ಭುತವಾಗಿ ಲೇಖಕರು ಹೆಣೆದಿದ್ದಾರೆ ಎಂದರೆ ಲೇಖಕರ ಕಥನ ಕೌಶಲ್ಯಕ್ಕೆ ತಲೆಬಾಗಲೇಬೇಕಾಗುತ್ತದೆ.                ೧೯೩೦ ಆಸುಪಾಸಿನಲ್ಲಿ ಸರ್.ಎಂ.ವಿ ಯವರ ಕನಸಾದ ಶರಾವತಿ ನದಿಗೆ ಅಣೆಕಟ್ಟಿನ ನಿರ್ಮಾಣ ಸ್ಥಳೀಯ ಜನರ ಸಹಕಾರದೊಂದಿಗೆ ಆರಂಭವಾಗುತ್ತದೆ. ಅದು ನಿರ್ಮಾಣಗೊಂಡ ನಾಲ್ಕೇ ವರ್ಷಗಳಲ್ಲಿ ಅದಕ್ಕಿಂತ ದೊಡ್ಡದಾದ ಲಿಂಗನಮಕ್ಕಿ...

ರೈಲಲ್ಲ ಇದು ಮಂಚ!!

Image
 ಮಗಳಿಗೆ ಎರಡೂವರೆ ವರ್ಷವಾದಾಗ, ಮಗಳನ್ನು ಕರೆದಕೊಂಡು ದೂರ ಎಲ್ಲೂ ಪ್ರವಾಸ ಹೋಗದ ನಾವು ಕೇರಳದ ಅಲೆಪ್ಪಿ ಹಾಗೂ ಮುನ್ನಾರ್ ಗೆ ಹೋಗಬೇಕೆಂದು ನಿರ್ಧರಿಸಿದೆವು. ನಾವು ಹೇಳಿದ್ದೆಲ್ಲವನ್ನು ಮಗಳು ಅರ್ಥ ಮಾಡಿಕೊಳ್ಳುತ್ತಿದ್ದರಿಂದ ವಾರದ ಮುಂಚೆಯೇ ರೈಲಿನಲ್ಲಿ ಹೋಗುವುದು ಎಂದು ನಮ್ಮ ಪ್ರವಾಸದ ಬಗ್ಗೆ ಅವಳಿಗೆ ಅರ್ಥವಾಗುವಂತೆ ವಿವರಿಸಿದ್ದೆ. ಅವಳೂ ಕೂಡ ರೈಲಿನಲ್ಲಿ ಹೋಗಲು ಉತ್ಸಾಹದಿಂದಲೇ ಇದ್ದಳು.                ಹೋಗುವ ದಿನ ಬಂದೇ ಬಿಟ್ಟಿತು. ಬ್ಯಾಗ್ ಪ್ಯಾಕಿಂಗ್ ಆದಿಯಾಗಿ ಎಲ್ಲಾ ತಯಾರಿಯೂ ಮುಗಿದಿತ್ತು. ಸಮಯಕ್ಕೆ ಸರಿಯಾಗಿ ರೈಲ್ವೇ ಸ್ಟೇಷನ್ ತಲುಪಿದೆವು. ಆದರೆ ನಮ್ಮ ರೈಲು ಮಾತ್ರ ಒಂದೂವರೆ ಘಂಟೆ ತಡವಾಗಿ ಬರುವುದೆಂದು ತಿಳಿಯಿತು. ನಮ್ಮ ದೊಡ್ಡ ಬ್ಯಾಗ್ ಗಳ ಜೊತೆ, ಅಲ್ಲಿ ಇಲ್ಲಿ ಓಡುವ ಮಗಳನ್ನು ಸಂಭಾಳಿಸುವುದೇ ನಮಗೆ ಬಹು ದೊಡ್ಡ ಕೆಲಸವಾಯಿತು. ಬೇರೆ ಕಡೆಗೆ ಹೋಗುವ ಮತ್ತು ಬರುವ ರೈಲುಗಳನ್ನು ತೋರಿಸುತ್ತಾ ಸಮಯವನ್ನು ಕಳೆದೆವು. ಬೇರೆ ರೈಲು ತೋರಿಸಿ ನಾವೂ ಕೂಡ ಅದರಲ್ಲಿ ಹೋಗೋಣ ಎಂದು ಹೇಳಲು ಶುರುಮಾಡಿದಳು. ಅಂತೂ ನಮ್ಮ ರೈಲು ಎರಡು ಘಂಟೆ ತಡವಾಗಿ ಬಂತು. ನಮ್ಮ ಭೋಗಿಯನ್ನು ಹಾಗೂ ಸೀಟ್ ಹುಡುಕಿ ಬ್ಯಾಗ್ ಗಳನ್ನು ಇಟ್ಟೆವೋ ಇಲ್ಲವೋ ಮಗಳು 'ಇದು ರೈಲಲ್ಲಾ ಮಂಚ' ಎಂದು ಒಂದೇ ಸಮನೆ ಅಳಲು ಶುರುಮಾಡಿದಳು. ರಾತ್ರಿಯ ರೈಲು ಪ್ರಯಾಣವಾದ್ದರಿಂದ ರೈಲಿನಲ್ಲಿದ್ದವರೆಲ್ಲಾ ನಿ...

ಓದಿನ ಸುಖ "ನೆನಪೇ ಸಂಗೀತ"

Image
ಪುಸ್ತಕದ ಹೆಸರು : ನೆನಪೇ ಸಂಗೀತ ಲೇಖಕರು : ವಿದ್ಯಾಭೂಷಣರು                  ೯೦ ರ ದಶಕದಲ್ಲಿ ಬಾಲ್ಯವನ್ನು ಕಳೆದ ನಮ್ಮಂತಹವರ ಬೆಳಗು ಶುರುವಾಗುತ್ತಿದ್ದುದೇ 'ಆಡಿಸಿದಳು ಯಶೋದೆ' , 'ಪಿಳ್ಳಂಗೋವಿಯ ಚೆಲುವ ಕೃಷ್ಣನ' ಮುಂತಾದ ವಿದ್ಯಾಭೂಷಣರ ಹಾಡುಗಳಿಂದ. ಈ ಹಾಡುಗಳನ್ನು ಬೇರೆ ಬೇರೆ ಹಾಡುಗಾರರು ಹಾಡಿದ್ದರೂ, ಇವತ್ತಿಗೂ ಸಹ ಈ ಹಾಡುಗಳನ್ನು ಗುನುಗುನಿಸುವಾಗ ವಿದ್ಯಾಭೂಷಣರ ಜೇನಿನ ಕಂಠವೇ ನಮ್ಮ ಮನದಲ್ಲಿ ಮೂಡುವುದು. ಅಷ್ಟು ಮಧುರವಾದ ಧ್ವನಿ ಅವರದ್ದು. ಅವರ ಧ್ವನಿಯಷ್ಟೇ ಮಧುರವಾದ, ಸುಲಲಿತ ಶೈಲಿಯಲ್ಲಿ , ಅವರು ತಮ್ಮ ಜೀವನದ ಬಗ್ಗೆ ಬರೆದ ಪುಸ್ತಕವೇ 'ನೆನಪೇ ಸಂಗೀತ'.                   ಸನ್ಯಾಸವೆನ್ನುವುದು ಭಾರತೀಯ ಸಂಸ್ಕೃತಿಯ ಪರಮೋಚ್ಚ ಸಂಗತಿ. ತ್ಯಾಗವೆಂಬ ಅತಿ ಶ್ರೇಷ್ಠ ಜೀವನ ಮೌಲ್ಯವೇ ಅದರ ಮೂಲ. ಆದರೆ ಅದು ವ್ಯಕ್ತಿಯ ವೈಯಕ್ತಿಕ ಆಯ್ಕೆಯಾಗಿಲ್ಲದೆ ಬೇರೆಯವರ ಹಿತಾಸಕ್ತಿಗೆ ಅಥವಾ ಒತ್ತಾಯಕ್ಕೆ ಕಟ್ಟುಬಿದ್ದು ಸ್ವೀಕರಿಸಿದರೆ ಸನ್ಯಾಸವೂ ಕೂಡ ಬಂಧನವೆ ಎಂದು ಈ ಪುಸ್ತಕವನ್ನು ಓದಿದಾಗ ಅನಿಸುತ್ತದೆ.                 ಪುಸ್ತಕದ ಆರಂಭದಲ್ಲಿ ವಿದ್ಯಾಭೂಷಣರು ತಮ್ಮ ಬಾಲ್ಯ ಜೀವನ, ಪೂರ್ವಾಶ್ರಮದ ಹಿರಿಯರ ಬಗ್ಗೆ, ವಿದ್ಯಾಭ್ಯಾಸದ ಬಗ್ಗೆ ಸವಿಸ್ತಾರವಾಗಿ ...