Posts

ಓದಿನ ಸುಖ "ಹ್ಹೋ ..... ಏನು?"

Image
ಪುಸ್ತಕದ ಹೆಸರು : ಹ್ಹೋ .... ಏನು ?  ಲೇಖಕರು: ಅನಿತಾ ನರೇಶ್ ಮಂಚಿ                 ಮನೆ ಹತ್ತಿರದ ಲೈಬ್ರೆರಿಯಲ್ಲಿ ಕಾರ್ಡ್ ಮಾಡಿಸಿಕೊಂಡ ಮೇಲೆ ಪುಸ್ತಕಗಳನ್ನು ಕೊಳ್ಳಲು ಹೋದಾಗ ಈ ಪುಸ್ತಕ ಕಣ್ಣಿಗೆ ಬಿತ್ತು. ಹೆಸರೇ ಆಕರ್ಷಕ ಅನ್ನಿಸಿತು. ಅಲ್ಲದೇ ಲೇಖಕಿಯ ಹಲವು ಲೇಖನಗಳನ್ನು ಪತ್ರಿಕೆಗಳಲ್ಲಿ ಓದಿದ್ದರಿಂದ ಬರೆಯುವ ಶೈಲಿ ಕೂಡ ಪರಿಚಿತವಾಗಿದ್ದರಿಂದ ಧೈರ್ಯವಾಗಿ ಪುಸ್ತಕವನ್ನು ಕೊಂಡೆ.                          ಈ ಪುಸ್ತಕವನ್ನು ನಗೆ ಬರಹಗಳ ಗುಚ್ಛ ಎಂದೇ ಹೇಳಬಹುದು. ಸಣ್ಣ ಸಣ್ಣ ಬರಹಗಳಲ್ಲಿ ಹೇಳಬೇಕಾದ್ದನ್ನು ಸ್ಪಷ್ಟವಾಗಿ ಹೇಳುತ್ತಾ, ಅನಾವಶ್ಯಕವಾಗಿ ಯಾವುದನ್ನೂ ಎಳೆಯದೆ ಸುಲಭವಾಗಿ, ಸರಳವಾಗಿ ಬರೆಯುವ ಶೈಲಿ ತುಂಬಾ ಇಷ್ಟವಾಯಿತು. ದಿನನಿತ್ಯದ ಆಗುಹೋಗುಗಳನ್ನೇ ಹಾಸ್ಯದ ಲೇಪನದಲ್ಲಿ ಬರೆದಿದ್ದಾರೆ ಲೇಖಕಿ. ಒಂದು ವಾಕ್ಯ ಹಾಸ್ಯದಿಂದ ಕೂಡಿದ್ದರೆ ಅದರ ಮುಂದಿನ ವಾಕ್ಯ ಜೀವನದ ಸತ್ಯವನ್ನು ಹೇಳಿ ನಕ್ಕವರ ಮನದಲ್ಲೊಮ್ಮೆ ಆಲೋಚನಾ ತರಂಗ ಏಳುವಂತೆ ಮಾಡುತ್ತಾರೆ. ಉದಾಹರಣೆಗೆ ನಿದ್ರೆಯ ಬಗ್ಗೆ ಹಾಸ್ಯವಾಗಿ ಬರೆಯುತ್ತಾ ತಟ್ಟನೆ "ಚಿಂತೆಗಳೆಲ್ಲಾ ಮುಕ್ತವಾಗುವುದು ನಿದ್ದೆಯಲ್ಲೇ ಕೊನೆಗೊಮ್ಮೆ ಚಿರ ನಿದ್ರೆಯಲ್ಲೇ" ಎಂದು ಜೀವನದ ಸತ್ಯ ದರ್ಶನ ಮಾಡಿ ಬಿಡುತ್ತಾರೆ.   ...

ಓದಿನ ಸುಖ "ನಿರ್ಮಾಲ್ಯ"

Image
  ಪುಸ್ತಕದ ಹೆಸರು : ನಿರ್ಮಾಲ್ಯ       ಲೇಖಕರು : ಚಂದ್ರಶೇಖರ ಭಂಡಾರಿ               ಈ ಪುಸ್ತಕ ನನಗೆ ಲಭಿಸಿದ್ದು ಅತ್ಯಂತ ಆಕಸ್ಮಿಕವಾಗಿ. ಐದು ವರ್ಷಗಳ ಹಿಂದೆ ನನ್ನ ಮದುವೆ ನಿಶ್ಚಯವಾದಾಗ, ಆಮಂತ್ರಣ ಪತ್ರಿಕೆಯನ್ನು ಕೊಡಲು ನಾನು ಕಲಿತ ಗುರುಕುಲಕ್ಕೆ ಹೋದಾಗ, ಅದೇ ದಿನ 'ನಿರ್ಮಾಲ್ಯ' ದ ಬಿಡುಗಡೆ ಸಮಾರಂಭ ಮಂಗಳೂರಿನ ಸಂಘನಿಕೇತನದಲ್ಲಿತ್ತು. ಹೇಗೂ ನಾನು ಕೂಡ ಮಂಗಳೂರಿಗೆ ಹಿಂತಿರುಗುವವಳಿದ್ದ ಕಾರಣ ಪುಸ್ತಕ ಬಿಡುಗಡೆ ಸಮಾರಂಭಕ್ಕೆ ಹೋಗಿದ್ದೆ. ಆಗ ನನಗೆ ಈ ಪುಸ್ತಕವನ್ನು ಪ್ರೀತಿಯಿಂದ ಶ್ರೀಮತಿ ಮಾತೃಶ್ರೀ ಉಡುಗೊರೆ ರೂಪದಲ್ಲಿ ನೀಡಿದ್ದರು. ಮೊದಲ ಬಾರಿಗೆ ಉಡುಗೊರೆ ರೂಪದಲ್ಲಿ ಸಿಕ್ಕಿದ ಪುಸ್ತಕ ಇದಾಗಿತ್ತು.                           ಗುರುಕುಲಕ್ಕೆ ಕೃಷ್ಣಪ್ಪ ತಾತ ಬರುತ್ತಾರೆ ಎಂದು ಗೊತ್ತಾದಾಗ ನಮ್ಮ ಮನದಲ್ಲಿ ಖುಷಿಯ ಸಂಚಾರ. ಮನೆಯಲ್ಲಿರುವ ಹಿರಿಯಜ್ಜನಂತೆ ನಮಗೆಲ್ಲಾ ಕಥೆಯನ್ನು ಹೇಳಿ ಮನೆಯ ನೆನಪೂ ಬಾರದಂತೆ ನಡೆದುಕೊಳ್ಳುತ್ತಿದ್ದರು. ಪ್ರತೀ ಬಾರಿ ಗುರುಕುಲಕ್ಕೆ ಬರುವ ಮೊದಲು ನಮಗೆ ಒಂದೊಂದು ಚಟುವಟಿಕೆಗಳನ್ನು ನೀಡುತ್ತಿದ್ದರು. ಒಮ್ಮೆ ಮೂಲಾರಾಮಾಯಣದ 100 ಶ್ಲೋಕಗಳ ಕಂಠಪಾಠ, ಇನ್ನೊಮ್ಮೆ ಎಲ್ಲಾ ಭಾಷೆಗಳ ಒಂದೊಂದು ಪದ್ಯ - ...

ಮೊದಲ ದಿನ ಮೌನ

Image
        ಮೊದಲ ಬಾರಿ ಎಳೆ ಮಗಳನ್ನು ಎತ್ತಿದಾಗ ಮನದಲ್ಲಿ ಮೂಡಿದ ಪ್ರಶ್ನೆ ಇವಳು ಹೇಗೆ ದೊಡ್ಡವಳಾಗುತ್ತಾಳಪ್ಪ? ಇವಳನ್ನು ಬೆಳೆಸುವುದು ನನ್ನಿಂದ ಸಾಧ್ಯವೇ? ಎಂದು. ಸಮಯ ಉರುಳಿತು. ಸದಾ ನನಗೇ ಅಂಟಿಕೊಂಡಿರುತ್ತಿದ್ದ ಮಗಳು ಯಾವಾಗ ಶಾಲೆಗೆ ಹೋಗುತ್ತಾಳೊ ಎಂದು ಅನಿಸಲು ಶುರುವಾಯಿತು. ಮಗಳಿಗೆ ಮೂರು ವರ್ಷವಾದಾಗ ಅವಳನ್ನು ಶಾಲೆಗೆ ಸೇರಿಸಲು ಹತ್ತಿರದ ಶಾಲೆಗಳನ್ನು ವಿಚಾರಿಸಿದೆವು. ಒಂದು ಶಾಲೆಯವರಂತು ಮಗಳಿಗೆ ಮೂರು ವರ್ಷವಾಗಿಯೂ ಇನ್ನೂ ಯಾವದೇ ಶಾಲೆಗೆ ಸೇರಿಸದಿದ್ದ ನಮ್ಮನ್ನು ಶಿಲಾಯುಗದ ಪಾಲಕರಂತೆ ಕಂಡರು. ಯಾಕಿಷ್ಟು ತಡ ಮಾಡಿದಿರಿ? ಅಜ್ಜ ಅಜ್ಜಿಯರ ಪ್ರೀತಿಯನ್ನು ಸವಿದ ಮಕ್ಕಳು ಶಾಲೆಗೆ ಹೊಂದಿಕೊಳ್ಳುವುದು ಕಷ್ಟ ಎಂದು ಹೇಳಿದಾಗ ನಾವು ಸಹ ಧೈರ್ಯಗುಂದಿದ್ದು ಸುಳ್ಳಲ್ಲ. ಒಂದು ಶಾಲೆಯ ವಾತಾವರಣ ಹಿಡಿಸದಿದ್ದರೆ, ಇನ್ನೊಂದು ಶಾಲೆಯನ್ನು ದುಬಾರಿ ಶುಲ್ಕದ ಕಾರಣಕ್ಕೆ ಬಿಟ್ಟೆವು. ಮತ್ತೊಂದು ಶಾಲೆಯಲ್ಲಿ ವಿದ್ಯಾರ್ಥಿ - ಶಿಕ್ಷಕರ ಸಂಖ್ಯಾ ಅನುಪಾತ ನಮಗೆ ಹೊಂದುವಂತೆ ಇಲ್ಲದ ಕಾರಣ ಬಿಟ್ಟೆವು. ಹೀಗೆ ಎಲ್ಲವನ್ನೂ ಗಮದಲ್ಲಿಟ್ಟುಕೊಂಡು ಮನೆಗೆ ಹತ್ತಿರವಿದ್ದ ಶಾಲೆಗೆ ಅಡ್ಮಿಷನ್ ಮಾಡಿಸಿದೆವು.           ಅಡ್ಮಿಷನ್ ಮಾಡಿದ ಮೇಲೆ ಮಗಳಿಗೆ ಶಾಲೆಗೆ ಹೋಗುವುದರ ಬಗ್ಗೆ ಹೇಳತೊಡಗಿದೆ. ಆದರೆ ಅದಕ್ಕಿಂತ ಮೊದಲೇ ಅವಳು ಕಾರ್ಟೂನ್ ನೋಡಿ ಶಾಲೆಯ ಬಗ್ಗೆ ಒಳ್ಳೆಯ ಕನಸುಗಳನ್ನೇ ಕಂಡಿದ್ದಳು....

ಬಾಲ್ಕನಿಯಲೊಂದು ಸಸಿ

Image
        ಮೊಗ್ಗುಗಳು ಯಾವಾಗ ಅರಳುತ್ತವೆ ಎಂದು ಕಾಯುತ್ತಿದ್ದಾಳೆ ಹೂ ಅರಳಿದ ಖುಷಿ ಹೂಗಳಿರುವ ಕ್ಲಿಪ್ ನ ಜೊತೆ ಸೇವಂತಿಗೆ ಹೂ ಜೊತೆಗೆ ಹಣೆಯಲ್ಲಿ ಹೂವಿನ ಬೊಟ್ಟು ಅಪಾರ್ಟ್ಮೆಂಟಿನ ಹೂ ಗಿಡಗಳ ಜೊತೆ ಮಾತು-ಕಥೆ                ಮೊದಲಿಂದಲೂ ಮಗಳಿಗೆ ಗಿಡಗಳೆಂದರೆ ಬಹಳ ಪ್ರೀತಿ. ಅವತಾರ್ ಮೂವಿಯನ್ನು ನೋಡಿದ ಮೇಲಂತೂ ಅವರು ಗಿಡಗಳನ್ನು ಸ್ಪರ್ಶಿಸುವಂತೆ ಇವಳೂ ಕೂಡ ಗಿಡಗಳ ಎಲೆಗಳನ್ನು, ಹೂಗಳನ್ನು ಸ್ಪರ್ಶಿಸಿ ಖುಷಿ ಪಡುತ್ತಿದ್ದಳು. ನಾವಿರುವ ವಸತಿ ಸಮುಚ್ಚಯದಲ್ಲಿ ಹೆಚ್ಚಿನ ಎಲ್ಲಾ ಮನೆಗಳ ಬಾಲ್ಕನಿಯಲ್ಲಿರುವ ಗಿಡಗಳನ್ನು ನೋಡಿ "ನಾವು ಯಾವಾಗ ಹೀಗೆ ಗಿಡಗಳನ್ನು ನೆಡುವುದು?" ಎಂದು ಪ್ರಶ್ನಿಸತೊಡಗಿದಳು. "ನಾವು ವಾರಾಂತ್ಯದಲ್ಲಿ ಅಜ್ಜ ಅಜ್ಜಿಯನ್ನು ನೋಡಲು ಮನೆಗೆ ಹೋದಾಗ ಅವುಗಳಿಗೆ ನೀರು ಹಾಕುವುದು ಯಾರು? ಹಾಗಾಗಿ ಇಲ್ಲಿ ಗಿಡಗಳನ್ನು ನೆಡುವುದು ಬೇಡ" ಎಂದು ನಾನು ನಿರಾಕರಿಸಿದೆ. ನಾನು ಹಾಗೆ ಹೇಳಿದ್ದು ಅದೆಷ್ಟು ಅರ್ಥವಾಯಿತೋ ಗೊತ್ತಿಲ್ಲ. ಆಮೇಲೆ ಅವಳು ಪುನಃ ಗಿಡ ನೆಡುವುದರ ಬಗ್ಗೆ ಕೇಳಲಿಲ್ಲ. ಆದರೆ ಊರಿಗೆ ಹೋದಾಗಲೆಲ್ಲಾ ಅಜ್ಜಿಯ ಜೊತೆ ಹೂ ಗಿಡಗಳನ್ನು ನೆಡುವುದು, ಅವುಗಳಿಗೆ ನೀರನ್ನು ಹಾಕುವುದು ಅವಳ ಇಷ್ಟದ ಕೆಲಸವಾಗಿತ್ತು. ಅಲ್ಲದೇ ಹೂಗಳನ್ನು ಕೊಯಿದು ನಾವಿಬ್ಬರೂ ಒಟ್ಟಿಗೆ ಕೂತು ತಯಾರಿಸಿದ ಪೇಪರ್ ಕಪ...

ಸ್ವಾತಂತ್ರ್ಯಾನಂತರ ಮಕ್ಕಳ ಸವಲತ್ತುಗಳಲ್ಲಿ ಉಂಟಾದ ಅಭಿವೃದ್ಧಿ

Image
    (ಆಕಾಶವಾಣಿ ಮಂಗಳೂರಿನಿಂದ ಪ್ರಸಾರವಾದ ಲೇಖನ)                " ಇಂದಿನ ಮಕ್ಕಳೇ ನಾಳಿನ ಪ್ರಜೆಗಳು" ಎಂಬ ಮಾತಿನಂತೆ ಮಕ್ಕಳು ದೈಹಿಕವಾಗಿ ಹಾಗೂ ಮಾನಸಿಕವಾಗಿ ಸುದೃಢರಾಗಿದ್ದರಷ್ಟೇ ಒಂದು ಉತ್ತಮ ಸಮಾಜವನ್ನು ನಿರ್ಮಿಸಲು ಸಾಧ್ಯ. ಅನಾರೋಗ್ಯ ಹಾಗೂ ಶಿಕ್ಷಣ ವಂಚಿತ ಮಕ್ಕಳಿಂದಾಗಿ ಒಂದಿಡೀ ತಲೆಮಾರು, ಅದರಿಂದಾಗಿ ಒಂದು ದೇಶವೇ ಅಭಿವೃದ್ಧಿಯಿಂದ ಹಿಂದುಳಿಯುವಂತಾಗುತ್ತದೆ. ಸ್ವಾತಂತ್ರ್ಯಾ ನಂತರ, ಮಕ್ಕಳ ಸರ್ವತೋಮುಖ ಬೆಳವಣಿಗೆ ಸರ್ಕಾರವು ಹಲವಾರು ಸವಲತ್ತುಗಳನ್ನು ಹಾಗೂ ಯೋಜನೆಗಳನ್ನು ರೂಪಿಸಿವೆ. ಕಾಲ ಕಾಲಕ್ಕೆ ಮಕ್ಕಳ ಸವಲತ್ತುಗಳಲ್ಲಿ ಬದಲಾವಣೆಗಳಾಗಿವೆ. ಅವುಗಳ ಬಗ್ಗೆ ಇಂದು ತಿಳಿದುಕೊಳ್ಳೋಣ.               ಸ್ವಾತಂತ್ರ್ಯಾ ಪೂರ್ವದಲ್ಲಿ ನವಜಾತ ಶಿಶುಗಳ ಮರಣ ಪ್ರಮಾಣ ಅಧಿಕವಾಗಿತ್ತು. ಭಾರತದಲ್ಲಿ ಈ ಹಿಂದೆ ಹುಟ್ಟಿದ ಒಂದು ವರ್ಷದೊಳಗೆ ಮಕ್ಕಳು ಬೇರೆ ಬೇರೆ ಕಾರಣಗಳಿಂದ ಸಾವನ್ನಪ್ಪುತ್ತಿದ್ದರು. ತಾಯಿಯ ಅಪೌಷ್ಠಿಕತೆ, ಚಿಕ್ಕ ವಯಸ್ಸಿನಲ್ಲೇ ಮದುವೆ, ಸಮರ್ಪಕ ವೈದ್ಯಕೀಯ ಸೌಲಭ್ಯಗಳ ಕೊರತೆ, ಶಿಶುಗಳ ಕಡಿಮೆ ತೂಕ ಸೇರಿದಂತೆ ಹಲವು ಕಾರಣಗಳಿಂದ ನವಜಾತ ಶಿಶುಗಳು ಸಾವನ್ನಪ್ಪುತ್ತಿದ್ದವು. 2010ರಲ್ಲಿ ಭಾರತದಲ್ಲಿ 1000 ನವಜಾತ ಶಿಶುಗಳ ಪೈಕಿ 47 ನವಜಾತ ಶಿಶುಗಳು ಸಾವನ್ನಪ್ಪುತ್ತಿದ್ದವು. ಆದರೆ 2020ರ ವೇಳೆಗೆ ...

ಓದಿನ ಸುಖ "ಪುರಸ್ಕಾರ"

Image
ಪುಸ್ತಕದ ಹೆಸರು: ಪುರಸ್ಕಾರ ಲೇಖಕರು: ಚಿತ್ರಲೇಖ                    ಪುರಸ್ಕಾರವು ಎರಡು ಕಿರು ಕಾದಂಬರಿಗಳಾದ 'ಪುರಸ್ಕಾರ' ಹಾಗೂ 'ಪ್ರತೀಕಾರ' ಗಳ ಗುಚ್ಛ. ಎರಡು ಕಥೆಗಳಲ್ಲಿ ವಿಭಿನ್ನ ಕಾಲಮಾನಕ್ಕೆ ಸೇರಿದ ಇಬ್ಬರು ಹೆಣ್ಣು ಮಕ್ಕಳ ಜೀವನದ ಕಥೆಯನ್ನು ನಿರೂಪಿಸಿದ್ದಾರೆ ಲೇಖಕಿ.           ಹೆಣ್ಣು ಅಕ್ಷರಸ್ಥಳಾಗಿರಲಿ ಅಥವಾ ಅನಕ್ಷರಸ್ಥಳಾಗಿರಲಿ ಆಂತರ್ಯದಲ್ಲಿ ಅವಳು ಸ್ವಾಭಿಮಾನಿಯಾಗಿರುತ್ತಾಳೆ. ಅಂತಹ ಒಬ್ಬ ಅನಕ್ಷರಸ್ಥ ಸ್ವಾಭಿಮಾನೀ ಹೆಣ್ಣೊಬ್ಬಳ ಕಥೆಯೇ 'ಪುರಸ್ಕಾರ'.          ಈ ಕಥೆಯ ಪ್ರಮುಖ ಪಾತ್ರ ಸುಂದರಮ್ಮ. ಹುಟ್ಟಿದಾಗ ಸರಸ್ವತಿ ಎಂಬ ಹೆಸರನ್ನು ಹೊತ್ತ ಸುಂದರಮ್ಮ ಹತ್ತನೇ ವಯಸ್ಸಿಗೇ ಮದುವೆಯಾಗಿ ಗಂಡನ ಮನೆಯನ್ನು ಸೇರಿದಳು. ಮದುವೆಯಾಗಿದ್ದು ಹಳ್ಳಿಯಲ್ಲಿದ್ದ ವಿಜ್ಞಾನಿಯನ್ನು. ಸದಾ ಆಕಾಶ,ನಕ್ಷತ್ರ ಎಂದು ಅಧ್ಯಯನದಲ್ಲೇ ಮುಳುಗಿದ್ದ ಆದಿಕೇಶವನನ್ನು. ಅತ್ಯಂತ ವಿಕ್ಷಿಪ್ತವಾದ ಪಾತ್ರ ಆದಿಕೇಶವನದ್ದು. ಆತನದ್ದು ವಿಚಿತ್ರ ಸ್ವಭಾವ. ಹೆಂಡತಿಯ ಮೇಲೆ ಸ್ವಲ್ಪವೂ ಪ್ರೀತಿಯಿಲ್ಲ. ಪ್ರೀತಿಯಿಲ್ಲದಿದ್ದರೂ ಚಿಂತೆಯಿಲ್ಲ. ಆದರೆ ಆತನಿಗೆ ತನ್ನ ಹೆಂಡತಿಯ ಮೇಲೆ ಕರುಣೆಯಿಲ್ಲ, ಜೊತೆಗೆ ಕುರೂಪಿಯಾಗಿದ್ದ, ಕಲಾವತಿಯಾಗಿದ್ದ ತನ್ನ ಹೆಂಡತಿಯು ರಚಿಸುತ್ತಿದ್ದ ರಂಗೋಲಿಯನ್ನಾಗಲೀ, ಹೂ ಮಾಲೆಯನ್...

ಹೀಂಗೊಂದು ದೋಸೆ ಪುರಾಣ

Image
        "ಅಮ್ಮಾ... ನಾಳೆ ಕಾಪಿಗೆಂತ?" ಹೀಂಗಿಪ್ಪ ಒಂದು ಪ್ರಶ್ನೆಯ ಆನುದೆ ಎನ್ನ ತಮ್ಮಂದೇ ದಿನಾ ಕೇಳಿಯೊಂಡು ಇತ್ತಿದ್ದೆಯ. ಅದು ಹೊತ್ತೋಪಗಳೊ ಅಲ್ಲಾ ಕಸ್ತಲಪ್ಪಗಳೊ ಕೇಳಿಯೊಂಡು ಇದ್ದದು ಹೇಳಿ ನಿಂಗ ಗ್ರೇಷಿರೆ ತಪ್ಪು. ಉದಿಯಪ್ಪಾಗಣ ಕಾಪಿ ಕುಡಿವಾಗಳೆ ಎಂಗೊಗೆ ಮರುದಿನದ ಕಾಪಿಯ ಚಿಂತೆ. "ಹೋ ಎಂತರ ನಿಂಗಳದ್ದು ರಗಳೆ? ಇನ್ನು ಎನ್ನದೇ ಇಂದ್ರಾಣ ಕಾಪಿ ಕುಡುದು ಆಯಿದಿಲ್ಲೆ. ನಿಂಗಳದ್ದು ಆಗಳೆ ನಾಳಂಗೆ ಕಾಪಿಗೆಂತ ಹೇಳಿ ಸುರುವಾತ ಜಗಳ" ಹೇಳಿ ಅಮ್ಮನ ಸ್ವರ ಕೇಳಿದ್ದೇ ತಡ ಎಂಗ ಗಪ್ ಚುಪ್. ಅದು ರಜ್ಜ ಹೊತ್ತಷ್ಟೆ ಹೇಳಿ ಅಮ್ಮಂಗು ಗೊಂತಿದ್ದು ಹಾಂಗಾಗಿ ನಾಳಂಗೆ ಕಾಪಿಗೆಂತ ಮಾಡುದು ಹೇಳಿ ಅಮ್ಮನ ತಲೆಬೆಶಿ. ಇದು ಸಾಮಾನ್ಯವಾಗಿ ಎಲ್ಲರ ಮನೆ ಮನೆ ಕಥೆ.             ಸಾಮಾನ್ಯವಾಗಿ ಹವೀಕರ ಮನೇಲಿ ಕಾಪಿಗೆಂತಾ ಹೇಳಿ ಕೇಳೆಕ್ಕು ಹೇಳಿಯೇ ಇಲ್ಲೆ. ಹೆಚ್ಚಿನವರ ಮನೇಲಿದೆ ದೋಸೆಯೇ. ಹಾಂಗೆಯೇ ಎಂಗಳ ಮನೆಲಿದೆ ಯಾವಾಗಳೂ ದೋಸೆಯೇ. ದೋಸೆಗೆ ಕಡವಲೆ ಮುನ್ನಾಣ ದಿನವೇ ಅಕ್ಕಿಯ ಬೊದುಲ್ಲೆ ಹಾಕೆಕ್ಕು. ಹಾಂಗಾಗಿ ಹೊತ್ತೋಪಗದ ಒಳ ನಾಳಂಗೆ ಕಾಪಿಗೆಂತ ಹೇಳಿ ಮೊದಲೇ ನಿರ್ಧರಿಸಿ ಆಯೆಕ್ಕು. ಅಕ್ಕಿ ಮಾತ್ರ ಬೊದುಲ್ಲೆ ಹಾಕಿ ಆ ಹಿಟ್ಟಿನ ನೀರು ಮಾಡಿ ಎರದರೆ ರುಚಿರುಚಿಯಾದ ತೆಳ್ಳವು ಸಿದ್ಧ. ಅದರೊಟ್ಟಿಂಗೆ ಬೆಲ್ಲ ಕಾಯಿಸುಳಿಯೋ, ಬಾಳೆ ಹಣ್ಣು ರಸಾಯನವೋ ಇದ್ದರೆ ಸ್ವರ್ಗ ಸುಖ. ಕಾವಲಿಗೆಯ...