Posts

ಓದಿನ ಸುಖ - "ಯಾವ ನಾಳೆಯೂ ನಮ್ಮದಲ್ಲ"

Image
ಪುಸ್ತಕದ ಹೆಸರು : ಯಾವ ನಾಳೆಯೂ ನಮ್ಮದಲ್ಲ ಲೇಖಕರು : ಉಷಾ.ಪಿ.ರೈ             ಕನ್ನಡದಲ್ಲಿ ಹಲವು ಕಥೆ-ಕಾದಂಬರಿಗಳನ್ನು ಬರೆದ, ಕರ್ನಾಟಕ ಲೇಖಕಿಯರ ಸಂಘದ ಅಧ್ಯಕ್ಷರಾಗಿದ್ದ ಉಷಾ.ಪಿ.ರೈ ಅವರು ಬರೆದ ತಮ್ಮ ಆತ್ಮಕಥೆಯೇ 'ಯಾವ ನಾಳೆಯೂ ನಮ್ಮದಲ್ಲ'.           ಪುಸ್ತಕದ ಆರಂಭದಲ್ಲಿ ತಮ್ಮ ಬಾಲ್ಯದ ಜೀವನವನ್ನು ನೆನಪಿಸಿಕೊಂಡಿದ್ದಾರೆ ಲೇಖಕಿ. ತಮ್ಮ ಬಾಲ್ಯವನ್ನು ಸಮೃದ್ಧವಾಗಿಸಿದ್ದ ಉಡುಪಿಯ ಪರಿಸರದ ಅನುಭವದ ಜೊತೆಗೆ ಇಂದಿನ ಉಡುಪಿಯ ಪರಿಸರದ ಬಗ್ಗೆ ಅಭಿಪ್ರಾಯವನ್ನು ದಾಖಲಿಸಿದ್ದಾರೆ. ಮುಂದೆ ತಮ್ಮ ತಂದೆ ತಾಯಿಯ ಬಗ್ಗೆ ಅಭಿಮಾನದ ಮಾತನ್ನು ಹೇಳಿದ್ದಾರೆ ಲೇಖಕಿ. ತಂದೆ ಹೊನ್ನಯ್ಯ ಶೆಟ್ಟರು ನವಯುಗ ಪತ್ರಿಕೆಯ ಪ್ರವರ್ತಕರು ಜೊತೆಗೆ ಸಾಹಿತ್ಯ ಕೃಷಿಯನ್ನು ನಡೆಸಿದವರು. ಪತ್ರಿಕೆಯನ್ನು ಹೊರತರಲು ತಂದೆ ಪಡುತ್ತಿದ್ದ ಕಷ್ಟ, ತಂದೆಯ ಎಲ್ಲಾ ಕೆಲಸಗಳನ್ನು ತಾಯಿ ಬೆಂಬಲಿಸುತ್ತಿದ್ದ ರೀತಿ, ಅಂದಿನ ಬಂಟರ ಜೀವನ ಪದ್ಧತಿ ಎಲ್ಲವನ್ನೂ ಮುಕ್ತವಾಗಿ ಹಂಚಿಕೊಡಿದ್ದಾರೆ ಲೇಖಕಿ.             ಮುಂದೆ ವೈವಾಹಿಕ ಜೀವನ, ಬ್ಯಾಂಕ್ ಉದ್ಯೋಗ, ಅದರ ಜೊತೆ ಜೊತೆಗೆ ಹವ್ಯಾಸವಾದ ಬರವಣಿಗೆ, ಕರ್ನಾಟಕ ಲೇಖಕಿಯರ ಸಂಘದ ಅಧ್ಯಕ್ಷರಾಗಿದ್ದಾಗಿನ ಅನುಭವಗಳು, ಅಕ್ಕ ವಿಶ್ವ ಕನ್ನಡ ಸಮ್ಮೇಳನದ ಅನುಭವಗಳು, ಸಾಹಿತಿಗಳ ಜೊತೆ ಒಡನಾಟ ಎಲ್ಲವನ್ನೂ ದಾಖಲ...

ಓದಿನ ಸುಖ - ಮನಿ ಮನಿ ಎಕಾನಮಿ

Image
         ಪುಸ್ತಕದ ಹೆಸರು: ಮನಿ ಮನಿ ಎಕಾನಮಿ ಲೇಖಕರು : ರಂಗಸ್ವಾಮಿ ಮೂಕನಹಳ್ಳಿ                ಹಣವೊಂದಿದ್ದರೆ ಏನನ್ನು ಬೇಕಾದರೂ ಮಾಡಲು ಸಾಧ್ಯ ಎಂಬುದು ನಮ್ಮೆಲ್ಲರ ಮನಸ್ಥಿತಿ. ಅದಕ್ಕೇ ತಾನೆ "ಹಣ ಎಂದರೆ ಹೆಣವೂ ಬಾಯಿ ಬಿಡುತ್ತದೆ" ಎಂದು ಹಿರಿಯರು ಹೇಳಿದ್ದು. ಆದರೆ ಹಣವೊಂದು ಮಾತ್ರವಿದ್ದರೆ ಸಾಲದು. ಹಣವನ್ನು ಹೇಗೆ ಉಳಿತಾಯ ಹಾಗೂ ಹೂಡಿಕೆ ಮಾಡಬೇಕು? ವಿತ್ತ ಜಗತ್ತಿನ ಆಗು ಹೋಗುಗಳು, ಬೇರೆ ಬೇರೆ ದೇಶಗಳ ಆರ್ಥಿಕ ಪರಿಸ್ಥಿತಿ ಎಲ್ಲದರ ಬಗ್ಗೆಯೂ ವಿಸ್ತಾರವಾಗಿ, ಆದರೆ ಅತ್ಯಂತ ಸರಳವಾಗಿ ಎಲ್ಲರಿಗೂ, ವಾಣಿಜ್ಯ ವಿಭಾಗದ ಬಗ್ಗೆ ಏನೂ ಗೊತ್ತಿಲ್ಲದವರೂ ಸಹ ಸುಲಭವಾಗಿ ಅರ್ಥೈಸುವಂತೆ ಒಟ್ಟು ೨೫ ಲೇಖನಗಳಲ್ಲಿ ಬರೆದಿದ್ದಾರೆ ಲೇಖಕರು.            'ಹಿರಿಯ ನಾಗರಿಕರಿಗೆ ಸುರಕ್ಷಿತ ಹೂಡಿಕೆಗಳು' ಎಂಬ ಬರಹದಲ್ಲಿ ವಯಸ್ಸಾದವರಿಗೆ, ಕೆಲಸದಿಂದ ನಿವೃತ್ತರಾದವರಿಗೆ ಹೆಚ್ಚು ಅಪಾಯವಿಲ್ಲದಿರುವ ಹಣ ಉಳಿತಾಯದ ಯೋಜನೆಗಳ ಬಗ್ಗೆ ವಿವರಿಸಿದ್ದಾರೆ. 'ಪೂರ್ಣ ಡಿಜಿಟಲೀಕರಣವೆಂದರೆ ಮತ್ತೇನಿಲ್ಲ ಹೆಚ್ಚಿನ ನಿಯಂತ್ರಣ' ಎಂಬ ಬರಹದಲ್ಲಿ ಡಿಜಿಟಲ್ ಪಾವತಿಯ ಮೂಲಕ ನಮ್ಮ ಇಷ್ಟಾನಿಷ್ಟಗಳ ಪ್ರೊಫೈಲ್ ಸಿದ್ಧವಾಗಿ ವರ್ಷದ ನಂತರ ನಾವು ಖರೀದಿಸುವ ಕಾರ್, ಸ್ಕೂಟರ್ ಮುಂತಾದುವುಗಳನ್ನು ನಾವು ಕೊಳ್ಳುವಂತೆ ಹೇಗೆ ಪ್ರೇರೇಪಿಸಲಾಗುತ್ತದೆ ಎ...

ಓದಿನ ಸುಖ - ಹಿಂದಿನ ನಿಲ್ದಾಣ

Image
              ಪುಸ್ತಕದ ಹೆಸರು : ಹಿಂದಿನ ನಿಲ್ದಾಣ ಲೇಖಕರು : ಶುಭಶ್ರೀ ಭಟ್ಟ             ಮನುಷ್ಯ ಯಾವಾಗಲೂ ಮುಂದಿನ ನಿಲ್ದಾಣದ ಬಗ್ಗೆಯೇ ಯೋಚಿಸುತ್ತಿರುತ್ತಾನೆ. ಅಂದರೆ ಸದಾ ಭವಿಷ್ಯದ ಬಗ್ಗೆ ಯೋಚನೆ ಹಾಗೂ ಯೋಜನೆ ರೂಪಿಸಿಕೊಳ್ಳುತ್ತಿರುತ್ತಾನೆ. ಅದೇ ಅವನನ್ನು ವರ್ತಮಾನದಲ್ಲಿ ಜೀವಂತವಾಗಿರಿಸುವುದು ಎನ್ನುವುದು ನನ್ನ ನಂಬಿಕೆ. ಆದರೆ ಈ ಪುಸ್ತಕದಲ್ಲಿ ಲೇಖಕಿ ತಮ್ಮ ಬಾಲ್ಯದ ಭಾವ ಜಗತ್ತನ್ನು ಪುಟ್ಟ ಪುಟ್ಟ ಲೇಖನಗಳ ಮೂಲಕ ಅಕ್ಷರ ರೂಪಕ್ಕಿಳಿಸಿದ್ದಾರೆ. ಇಲ್ಲಿರುವ ಎಲ್ಲಾ ಬರಹಗಳು ಲೇಖಕಿಯ ಅನುಭವಗಳು. ಮುನ್ನುಡಿಯಲ್ಲಿ ಹಿರಿಯರಾದ ಸುಬ್ರಾಯ ಚೊಕ್ಕಾಡಿಯವರು ಹೇಳಿದಂತೆ "ಅನುಭವವು ಸವಿಯಲ್ಲ, ಅದರ ನೆನಪೇ ಸವಿಯು" ಎನ್ನುವಂತೆ ಅಂದು ಅನುಭವಿಸಿದ ದುಃಖವು ಇಂದು ನಗೆಯನ್ನು ಉಕ್ಕಿಸಿದರೆ, ಅಂದಿನ ಖುಷಿಯ ಘಟನೆಗಳು ಇಂದು ಕಣ್ಣನ್ನು ತೇವಗೊಳಿಸುತ್ತವೆ. ಅಂತಹ ಹಲವಾರು ಉದಾಹರಣೆಗಳು ಈ ಪುಸ್ತಕದಲ್ಲಿ ಸಿಗುತ್ತವೆ.              'ಪರೀಕ್ಷಾಗಾಲದಲ್ಲಿ ಜನಿಸುವ ಕಥೆಗಳು ' ಎಂಬ ಬರಹದಲ್ಲಿ ಎಲ್ಲಾ ಕಾಲದ ಮಕ್ಕಳ ತಲೆನೋವಾಗಿರುವ, ಪರೀಕ್ಷೆಯ ಓದುವ ಸಮಯದಲ್ಲಿ ಮಾಡುವ ಕಿತಾಪತಿಗಳನ್ನು ಹೇಳುತ್ತಾ, ಪ್ರಕೃತಿಯ ಮಡಿಲಲ್ಲಿ ಓದುತ್ತಾ, ಪ್ರಕೃತಿಯ ಅತ್ಯಂತ ಸೂಕ್ಷ್ಮ ವಿಷಯಗಳನ್ನೂ ಗಮನಿಸುತ್ತಾ ಅದನ್ನೆಲ್ಲಾ ಅಕ್...

ಓದಿನ ಸುಖ - "ಪುರುಷೋತ್ತಮ"

Image
ಪುಸ್ತಕದ ಹೆಸರು: ಪುರುಷೋತ್ತಮ ಲೇಖಕರು : ಯಶವಂತ ಚಿತ್ತಾಲ         ನಾನು ಕಾಲೇಜಿನಲ್ಲಿ ಓದುತ್ತಿದ್ದಾಗ ನನ್ನ ಲೆಕ್ಚರರ್ ಒಬ್ಬರು ಯಶವಂತ ಚಿತ್ತಾಲರ ಬಗ್ಗೆ ಹೇಳಿದ್ದರು. ಅವರ ಯಾವುದೇ ಪುಸ್ತಕಗಳನ್ನು ಓದಿರದ ನಾನು ಮೊದಲು ಶಿಕಾರಿ ಕೈಗೆತ್ತಿಗೊಂಡಿದ್ದೆ. ಆದರೆ ಆಗ ಅದು ಎಷ್ಟು ಅರ್ಥವಾಗಿತ್ತೋ ನನಗೇ ಗೊತ್ತಿಲ್ಲ. ಕೆಲವು ಲೇಖಕರ ಪುಸ್ತಕಗಳನ್ನು ಅಷ್ಟು ಸುಲಭದಲ್ಲಿ ಓದಿ ದಕ್ಕಿಸಿಕೊಳ್ಳಲು ಸಾಧ್ಯವಿರುವುದಿಲ್ಲ. ನಮ್ಮ ಜೀವನದ ದೃಷ್ಟಿ, ಅನುಭವಗಳು, ಯೋಚನಾ ಶೈಲಿ ಎಲ್ಲವೂ ಕೂಡ ಕಾರಣವಾಗಿರುತ್ತವೆ. ಅಂತಹ ಲೇಖಕರ ಸಾಲಿಗೆ ಯಶವಂತ ಚಿತ್ತಾಲರು ಸೇರುತ್ತಾರೆ.             ಮೊನ್ನೆ ಮನೆ ಹತ್ತಿರದ ಗ್ರಂಥಾಲಯದಲ್ಲಿ "ಪುರುಷೋತ್ತಮ" ಕಂಡಾಗ ಸ್ವಲ್ಪ ಅಳುಕಿನಿಂದಲೇ ಕೈಗೆತ್ತಿಕೊಂಡೆ. ಅದಕ್ಕೆ ಕಾರಣ ಚಿತ್ತಾಲರ ಶೈಲಿ ಹಾಗೂ ಕಾದಂಬರಿಯ ಹರವು. ಮನುಷ್ಯನ ಮಾನಸಿಕ ಹೊಯ್ದಾಟವನ್ನು ದಟ್ಟವಾಗಿ ಚಿತ್ರಿಸಿ, ಬಗೆದಷ್ಟೂ ಆಳವಾದ, ಸಂಕೀರ್ಣವಾದ ಮನುಷ್ಯನ ಮಾನಸಿಕ ಸ್ಥಿತಿಯನ್ನು ಕಾದಂಬರಿಯುದ್ದಕ್ಕೂ ಆವರಿಸಿ ವಿಷಾದವೊಂದೇ ಸ್ಥಾಯೀ ಭಾವವೇನೋ ಎಂಬಂತೆ ಚಿತ್ರಿಸಿದ ಕಾದಂಬರಿ "ಪುರುಷೋತ್ತಮ".             ಕೆಮಿಕಲ್ ಎಂಜಿನಿಯರಿಂಗ್ ಮುಗಿಸಿ ಮುಂಬೈಯ ಕಂಪೆನಿಯೊಂದರಲ್ಲಿ ಉದ್ಯೋಗಿಯಾಗಿರುವ ಪುರುಷೋತ್ತಮ, ತನ್ನ ಮುತ್ತಜ್ಜ ಕಟ್ಟಿಸಿರುವ ಮನೆಯ ಮೇಲೆ...

ಓದಿನ ಸುಖ - ಬದುಕು ಬದಲಿಸಬಹುದು

Image
  ಪುಸ್ತಕದ ಹೆಸರು : ಬದುಕು ಬದಲಿಸಬಹುದು ಲೇಖಕರು : ನೇಮಿಚಂದ್ರ            ಮಾನವನ ಬದುಕು ಹಲವು ಭಾವಗಳ ಮಿಶ್ರಣ. ಸೋಲು-ಗೆಲುವು, ಸುಖ-ದುಃಖ, ಸಮ್ಮಾನ-ಅವಮಾನ ಇವುಗಳು ಎಲ್ಲಾ ಮನುಷ್ಯರ ಜೀವನದಲ್ಲಿ ಸಾಮಾನ್ಯ . ಆದರೆ ದುಃಖದ ಸನ್ನಿವೇಶಗಳು ಬಂದಾಗ ಮನುಷ್ಯ ಹೇಗೆ ವರ್ತಿಸುತ್ತಾನೆ? ಇತರರ ಸಂಕಷ್ಟಕ್ಕೆ ಹೇಗೆ ಪ್ರತಿಕ್ರಿಯಿಸುತ್ತಾನೆ? ಅಪಮಾನಗಳನ್ನು ಎದುರಿಸಿ ಹೇಗೆ ಆತ್ಮವಿಶ್ವಾಸದಿಂದ ಮುಂದುವರಿಯುತ್ತಾನೆ? ಎಂಬುದನ್ನು ಈ ಪುಸ್ತಕದಲ್ಲಿ ಲೇಖಕಿಯು ಹಲವು ಉದಾಹರಣೆಗಳ ಮೂಲಕ ಹೇಳಿದ್ದಾರೆ. ಸೋಲಿನಿಂದ ಕಂಗೆಟ್ಟಾಗ, ಅಪಮಾನದಿಂದ ಕುಸಿದಾಗ ಈ ಪುಸ್ತಕವನ್ನು ಓದಿದಾಗ ಮನಸ್ಸಿಗೆ ಆತ್ಮವಿಶ್ವಾಸ ಮೂಡುವುದು ಸುಳ್ಳಲ್ಲ.             'ಸೋಲಿಲ್ಲದ ಮನೆಯ ಸಾಸಿವೆ' ಎಂಬ ಬರಹದಲ್ಲಿ ಬರೀ ಗೆಲ್ಲುವುದೊಂದನ್ನೇ ನಮ್ಮ ಮಕ್ಕಳಿಗೆ ಹೇಳಿಕೊಟ್ಟು, ಹೇಗೆ ಚಿಕ್ಕ ಸೋಲು ಸಹ ಅವರನ್ನು ಧೃತಿಗೆಡಿಸಿ ಆತ್ಮಹತ್ಯೆಯಂತಹ ದುಡುಕಿನ ನಿರ್ಧಾರಗಳನ್ನು ಕೈಗೊಂಡು ಬಿಡುತ್ತಿದ್ದಾರೆ ಎಂದು ಹೇಳುತ್ತಾ, ಮಕ್ಕಳು ಮಾತ್ರವಲ್ಲದೆ ಯುವಜನರು ಸಹ ಸೋಲು ಅವಮಾನಗಳನ್ನು ಎದುರಿಸಲು ಸಾಧ್ಯವಾಗದೆ ಬದುಕಿನಿಂದ ವಿಮುಖರಾಗುತ್ತಿರುವ ಬಗ್ಗೆ ಎಚ್ಚರಿಸುತ್ತಾ, " ಕಲಿಸುವುದು ಹೇಗೆ ಸೋಲನ್ನು , ನೋವನ್ನು, ನಿರಾಶೆಯನ್ನು, ಕೆಲವೊಮ್ಮೆ ತಮ್ಮ ತಪ್ಪೇ ಇಲ್ಲದೆ ಮುಗಿಬೀಳುವ ಅಪಮಾನವನ್ನು ಎದುರಿಸುವುದನ...

ಓದಿನ ಸುಖ "ಹ್ಹೋ ..... ಏನು?"

Image
ಪುಸ್ತಕದ ಹೆಸರು : ಹ್ಹೋ .... ಏನು ?  ಲೇಖಕರು: ಅನಿತಾ ನರೇಶ್ ಮಂಚಿ                 ಮನೆ ಹತ್ತಿರದ ಲೈಬ್ರೆರಿಯಲ್ಲಿ ಕಾರ್ಡ್ ಮಾಡಿಸಿಕೊಂಡ ಮೇಲೆ ಪುಸ್ತಕಗಳನ್ನು ಕೊಳ್ಳಲು ಹೋದಾಗ ಈ ಪುಸ್ತಕ ಕಣ್ಣಿಗೆ ಬಿತ್ತು. ಹೆಸರೇ ಆಕರ್ಷಕ ಅನ್ನಿಸಿತು. ಅಲ್ಲದೇ ಲೇಖಕಿಯ ಹಲವು ಲೇಖನಗಳನ್ನು ಪತ್ರಿಕೆಗಳಲ್ಲಿ ಓದಿದ್ದರಿಂದ ಬರೆಯುವ ಶೈಲಿ ಕೂಡ ಪರಿಚಿತವಾಗಿದ್ದರಿಂದ ಧೈರ್ಯವಾಗಿ ಪುಸ್ತಕವನ್ನು ಕೊಂಡೆ.                          ಈ ಪುಸ್ತಕವನ್ನು ನಗೆ ಬರಹಗಳ ಗುಚ್ಛ ಎಂದೇ ಹೇಳಬಹುದು. ಸಣ್ಣ ಸಣ್ಣ ಬರಹಗಳಲ್ಲಿ ಹೇಳಬೇಕಾದ್ದನ್ನು ಸ್ಪಷ್ಟವಾಗಿ ಹೇಳುತ್ತಾ, ಅನಾವಶ್ಯಕವಾಗಿ ಯಾವುದನ್ನೂ ಎಳೆಯದೆ ಸುಲಭವಾಗಿ, ಸರಳವಾಗಿ ಬರೆಯುವ ಶೈಲಿ ತುಂಬಾ ಇಷ್ಟವಾಯಿತು. ದಿನನಿತ್ಯದ ಆಗುಹೋಗುಗಳನ್ನೇ ಹಾಸ್ಯದ ಲೇಪನದಲ್ಲಿ ಬರೆದಿದ್ದಾರೆ ಲೇಖಕಿ. ಒಂದು ವಾಕ್ಯ ಹಾಸ್ಯದಿಂದ ಕೂಡಿದ್ದರೆ ಅದರ ಮುಂದಿನ ವಾಕ್ಯ ಜೀವನದ ಸತ್ಯವನ್ನು ಹೇಳಿ ನಕ್ಕವರ ಮನದಲ್ಲೊಮ್ಮೆ ಆಲೋಚನಾ ತರಂಗ ಏಳುವಂತೆ ಮಾಡುತ್ತಾರೆ. ಉದಾಹರಣೆಗೆ ನಿದ್ರೆಯ ಬಗ್ಗೆ ಹಾಸ್ಯವಾಗಿ ಬರೆಯುತ್ತಾ ತಟ್ಟನೆ "ಚಿಂತೆಗಳೆಲ್ಲಾ ಮುಕ್ತವಾಗುವುದು ನಿದ್ದೆಯಲ್ಲೇ ಕೊನೆಗೊಮ್ಮೆ ಚಿರ ನಿದ್ರೆಯಲ್ಲೇ" ಎಂದು ಜೀವನದ ಸತ್ಯ ದರ್ಶನ ಮಾಡಿ ಬಿಡುತ್ತಾರೆ.   ...

ಓದಿನ ಸುಖ "ನಿರ್ಮಾಲ್ಯ"

Image
  ಪುಸ್ತಕದ ಹೆಸರು : ನಿರ್ಮಾಲ್ಯ       ಲೇಖಕರು : ಚಂದ್ರಶೇಖರ ಭಂಡಾರಿ               ಈ ಪುಸ್ತಕ ನನಗೆ ಲಭಿಸಿದ್ದು ಅತ್ಯಂತ ಆಕಸ್ಮಿಕವಾಗಿ. ಐದು ವರ್ಷಗಳ ಹಿಂದೆ ನನ್ನ ಮದುವೆ ನಿಶ್ಚಯವಾದಾಗ, ಆಮಂತ್ರಣ ಪತ್ರಿಕೆಯನ್ನು ಕೊಡಲು ನಾನು ಕಲಿತ ಗುರುಕುಲಕ್ಕೆ ಹೋದಾಗ, ಅದೇ ದಿನ 'ನಿರ್ಮಾಲ್ಯ' ದ ಬಿಡುಗಡೆ ಸಮಾರಂಭ ಮಂಗಳೂರಿನ ಸಂಘನಿಕೇತನದಲ್ಲಿತ್ತು. ಹೇಗೂ ನಾನು ಕೂಡ ಮಂಗಳೂರಿಗೆ ಹಿಂತಿರುಗುವವಳಿದ್ದ ಕಾರಣ ಪುಸ್ತಕ ಬಿಡುಗಡೆ ಸಮಾರಂಭಕ್ಕೆ ಹೋಗಿದ್ದೆ. ಆಗ ನನಗೆ ಈ ಪುಸ್ತಕವನ್ನು ಪ್ರೀತಿಯಿಂದ ಶ್ರೀಮತಿ ಮಾತೃಶ್ರೀ ಉಡುಗೊರೆ ರೂಪದಲ್ಲಿ ನೀಡಿದ್ದರು. ಮೊದಲ ಬಾರಿಗೆ ಉಡುಗೊರೆ ರೂಪದಲ್ಲಿ ಸಿಕ್ಕಿದ ಪುಸ್ತಕ ಇದಾಗಿತ್ತು.                           ಗುರುಕುಲಕ್ಕೆ ಕೃಷ್ಣಪ್ಪ ತಾತ ಬರುತ್ತಾರೆ ಎಂದು ಗೊತ್ತಾದಾಗ ನಮ್ಮ ಮನದಲ್ಲಿ ಖುಷಿಯ ಸಂಚಾರ. ಮನೆಯಲ್ಲಿರುವ ಹಿರಿಯಜ್ಜನಂತೆ ನಮಗೆಲ್ಲಾ ಕಥೆಯನ್ನು ಹೇಳಿ ಮನೆಯ ನೆನಪೂ ಬಾರದಂತೆ ನಡೆದುಕೊಳ್ಳುತ್ತಿದ್ದರು. ಪ್ರತೀ ಬಾರಿ ಗುರುಕುಲಕ್ಕೆ ಬರುವ ಮೊದಲು ನಮಗೆ ಒಂದೊಂದು ಚಟುವಟಿಕೆಗಳನ್ನು ನೀಡುತ್ತಿದ್ದರು. ಒಮ್ಮೆ ಮೂಲಾರಾಮಾಯಣದ 100 ಶ್ಲೋಕಗಳ ಕಂಠಪಾಠ, ಇನ್ನೊಮ್ಮೆ ಎಲ್ಲಾ ಭಾಷೆಗಳ ಒಂದೊಂದು ಪದ್ಯ - ...