Posts

ಓದಿನ ಸುಖ "ಗೂಡಿನಿಂದ ಬಾನಿಗೆ"

Image
ಪುಸ್ತಕದ ಹೆಸರು: ಗೂಡಿನಿಂದ ಬಾನಿಗೆ  ಲೇಖಕರು: ಹೇಮಾ ಹಟ್ಟಂಗಡಿ                  ಆಶಿಶ್ ಸೇನ್  ಅನುವಾದಕರು: ಸಂಯುಕ್ತಾ ಪುಲಿಗಲ್              ಸಾಮಾನ್ಯವಾಗಿ ಉದ್ಯಮವೆಂದರೆ ಪುರುಷ ಪ್ರಾಬಲ್ಯವಿರುವ ಕ್ಷೇತ್ರ ಎಂಬುದು ನಮ್ಮೆಲ್ಲರ ಅನಿಸಿಕೆ. ವಿದ್ಯಾಭ್ಯಾಸ ಗಳಿಸಿದ ಮಹಿಳೆ ಇಂದು ಎಲ್ಲಾ ರಂಗದಲ್ಲೂ ತನ್ನ ಸಾಮರ್ಥ್ಯವನ್ನು ತೋರಿಸಿದ್ದರೂ ಉದ್ಯಮಪತಿಗಳಾಗುವುದು, ಒಂದು ಕಂಪೆನಿಯ CEO ಆಗುವುದು ಅಷ್ಟು ಸುಲಭದ ವಿಷಯವಲ್ಲ. ಅದರಲ್ಲೂ 90ರ ದಶಕದಲ್ಲಿ, ಪುರುಷ ಪ್ರಾಬಲ್ಯವಿರುವ ವಿದ್ಯುತ್ ಉದ್ದಿಮೆಯಲ್ಲಿ ಯಶ ಗಳಿಸುವುದಂತೂ ಸಾಹಸವೇ ಸರಿ. ಅಂತಹ ಒಬ್ಬ ಉದ್ಯಮಿ, ಸಾಧಕಿ ಮಹಿಳೆಯು ಬೆಳೆದು ಬಂದ ಪಥದ ಕಥನವೇ 'ಗೂಡಿನಿಂದ ಬಾನಿಗೆ' ಪುಸ್ತಕ. ಇದು Lift off ಎಂಬ ತಾಂತ್ರಿಕ ಉದ್ಯಮಶೀಲತೆಯ ಕುರಿತಾದ ಪುಸ್ತಕದ ಅನುವಾದ.             1988ರಲ್ಲಿ ಹೇಮಾ ಹಟ್ಟಂಗಡಿಯವರ ಮಾವನವರಾದ(ಗಂಡನ ತಂದೆ) ವಸಂತ್ ರಾವ್ ಅವರು 'ಎನರ್ಕಾನ್ ಸಿಸ್ಟಮ್ಸ್ ' ಅನ್ನು ಸ್ಥಾಪಿಸಿದರು. ವಿದ್ಯುಚ್ಛಕ್ತಿ ನಿರ್ವಹಣಾ ಮಾಪನ ಮತ್ತು ತಂತ್ರಾಂಶವು ಈ ಸಂಸ್ಥೆಯ ಉತ್ಪನ್ನವಾಗಿತ್ತು. ಅವರು ಒಬ್ಬ ಪ್ರತಿಭಾವಂತ ತಂತ್ರಜ್ಞಾನಿ, ಸಂಶೋಧಕರಾಗಿದ್ದರು. ಒಬ್ಬ ದೂರದೃಷ್ಟಿಯುಳ್ಳ ತಾಂತ್ರಿಕ ಆಡಳಿತಗಾರರಾಗಿದ್ದರು. ವಸಂತ್ ...

ಬಾಲಿ ಪ್ರವಾಸ ಕಥನ

Image
            ಪ್ರವಾಸಿ ಪ್ರಪಂಚ ಪತ್ರಿಕೆಯಲ್ಲಿ ಪ್ರಕಟವಾದ ನನ್ನ ಲೇಖನ         ಬಾಲಿಯಲ್ಲಿ ನಡೆದಾಡುತ್ತಿದ್ದರೆ ಹಿಂದೂ ರಾಷ್ಟ್ರದ ಊರೊಂದರಲ್ಲಿ ಓಡಾಡುತ್ತಿರುವ ಅನುಭವವಾಗುತ್ತದೆ. ಇದು ಮನೆಯೋ ದೇವಸ್ಥಾನವೋ ಎಂಬ ಭೇದವೇ ಇಲ್ಲದಂತೆ ಕಟ್ಟಡಗಳು ಕಾಣುತ್ತವೆ. ಅಲ್ಲಲ್ಲಿ ಇರುವ ಪುರಾತನ ದ್ವಾರಗಳು ನಾವು ಯಾವುದೋ ನಾಟಕದ ಸೆಟ್ ನಲ್ಲಿರುವಂತೆ ಭಾಸವಾಗುತ್ತದೆ. ನಮ್ಮ ಡ್ರೈವರ್ ಹೇಳಿದಂತೆ, ಅಲ್ಲಿಯವರು ಮುಖ್ಯವಾಗಿ ಪೂಜಿಸುವುದು ಗಣೇಶ, ಸರಸ್ವತಿ ಹಾಗೂ ಪಾರ್ವತಿಯರನ್ನು. ಗಲ್ಲಿಗಲ್ಲಿಗಳಲ್ಲೂ ಗಣೇಶನ ಮೂರ್ತಿಗಳನ್ನು ಕಾಣಬಹುದು. ಸಾಂಸ್ಕೃತಿಕವಾಗಿ ರಾಮಾಯಣವನ್ನು ನೃತ್ಯದಲ್ಲಿ, ವಿಗ್ರಹಗಳಲ್ಲಿ ಅಳವಡಿಸಿಕೊಂಡಿದ್ದಾರೆ ಆದರೆ ರಾಮ ಕೃಷ್ಣರಿಗೆ ಪೂಜೆ ಇಲ್ಲವಂತೆ. ರಸ್ತೆ ಮಧ್ಯದ ಸರ್ಕಲ್ ಗಳಲ್ಲಿ ಮಹಾಭಾರತದ, ರಾಮಾಯಣದ ಪಾತ್ರಗಳ ವಿಗ್ರಹಗಳು, ದೇವರದ್ದೇ ವಿಗ್ರಹಗಳು ಅಂತ ಏನಿಲ್ಲ, ರಾಕ್ಷಸರ ಹಾಗೂ ಋಷಿಗಳ ಪ್ರತಿಮೆಗಳೂ ಸಹ ಇದ್ದವು.             ಅಲ್ಲಿಯ ಸಂಸ್ಕೃತಿಗೂ ನಮ್ಮ ಸಂಸ್ಕೃತಿಗೂ ತುಂಬಾ ಸಾಮ್ಯತೆಗಳಿವೆ. ಸನಾತನ ಧರ್ಮವು ಮೂಲತಃ ಪ್ರಕೃತಿಯನ್ನು ಆರಾಧಿಸುವ ಧರ್ಮ. ಹಾಗಾಗಿ ನಮ್ಮ ಹೆಚ್ಚಿನ ದೇವಾಲಯಗಳು ಪ್ರಕೃತಿಯ ಮಧ್ಯದಲ್ಲಿ ಅಂದರೆ ಒಂದೋ ಬೆಟ್ಟದ ಮೇಲೆ ಇಲ್ಲವೇ ನದಿ ತೀರದಲ್ಲಿವ...

ಓದಿನ ಸುಖ "ಉಚಲ್ಯಾ"

Image
ಪುಸ್ತಕದ ಹೆಸರು: ಉಚಲ್ಯಾ  ಲೇಖಕರು: ಲಕ್ಷ್ಮಣ ಗಾಯಕವಾಡ  ಅನುವಾದಕರು: ಚಂದ್ರಕಾಂತ ಪೋಕಳೆ              ಇಡೀ ಪುಸ್ತಕವನ್ನು ಓದಿ ಒಮ್ಮೆ ಸ್ತಬ್ಧಳಾದೆ. ಹೀಗಿರುವ ಒಂದು ಜನಾಂಗವಿದೆ ಎಂಬ ಅರಿವೇ ನನಗಿರಲಿಲ್ಲ. ಬ್ರಿಟಿಷರಿಂದ 'criminal tribes' ಎಂದು ಕರೆಸಿಕೊಂಡ ಅಲೆಮಾರಿ ಜನಾಂಗ 'ಉಚಲ್ಯಾ'. ಅವರ ಬಡತನ, ಕಳ್ಳತನವನ್ನ ಮಾಡಿಯೇ ಜೀವನ ಸಾಗಿಸಬೇಕಾದ ಅನಿವಾರ್ಯತೆ, ಜೀವನ ಪೂರ್ತಿ 'ಅಪರಾಧಿಗಳು' ಎಂಬ ಹಣೆ ಪಟ್ಟಿಯಲ್ಲಿ ಓಡಾಡಬೇಕಾದ ಸಂಕಷ್ಟ ಹೀಗೆ ಹೊರ ಜಗತ್ತಿಗೆ ತೀರಾ ಅಪರಿಚಿತವಾಗಿರುವ ಹಲವಾರು ವಿಷಯಗಳನ್ನು ಲೇಖಕರು ತಮ್ಮ ಈ ಆತ್ಮಕಥೆಯಲ್ಲಿ ಮನಮುಟ್ಟುವಂತೆ ಬರೆದಿದ್ದಾರೆ.               ಉಚಲ್ಯಾವು ಅತ್ಯಂತ ಹಿಂದುಳಿದ ವರ್ಗವಾಗಿದ್ದು ಹುಟ್ಟಿದಾರಭ್ಯ ತಮ್ಮ ಕುಲಕಸುಬಾದ ಕಳ್ಳತನವೇ ಅವರ ವೃತ್ತಿ. ಹೆಂಗಸರು,ಗಂಡಸರು, ಮಕ್ಕಳು ಎಂಬ ಬೇಧವಿಲ್ಲದೆ ಎಲ್ಲರೂ ಕಳ್ಳತನದಲ್ಲಿ ನಿಸ್ಸೀಮರು. ಹಾಗಾಗಿ ಶಿಕ್ಷಣವೆನ್ನುವುದು ಇವರಿಗೆ ಮರೀಚಿಕೆ. ಯಾರಾದರೂ ಕಳ್ಳತನವನ್ನು ಬಿಟ್ಟು ಲೇಖಕರಂತೆ ಶಾಲೆಗೆ ಹೋದರೋ ಅವರನ್ನು ಸಮಾಜವೂ ಹೀಯಾಳಿಸುತ್ತಿತ್ತು. ಹಾಗಾಗಿ ಕಳ್ಳತನವು ಇವರಿಗೆ ಅನಿವಾರ್ಯವಾಗಿತ್ತು. ಹೀಗೆ ಕಳ್ಳತನ ಮಾಡಿ ಪೊಲೀಸರ ಕೈಯಲ್ಲಿ ಸಿಕ್ಕಿ ಬಿದ್ದು ವಿವಿಧ ರೀತಿಯ ಶಿಕ್ಷೆಗಳನ್ನು ಅನುಭವಿಸಿ ತಾವು ಕದ್ದ ಮಾಲನ್ನು ವಾಪಾಸು ಪೊಲೀಸರಿ...

ಓದಿನ ಸುಖ "ಧೀರೆ"

Image
ಪುಸ್ತಕದ ಹೆಸರು: ಧೀರೆ (ಕೇತ್ಕರ್ ವಹಿನಿ) ಲೇಖಕರು : ಉಮಾ ಕುಲಕರ್ಣಿ(ಮರಾಠಿ ಮೂಲ) ಅನುವಾದಕರು : ವಿರೂಪಾಕ್ಷ ಕುಲಕರ್ಣಿ          ಕಳೆದ ವರ್ಷದ ಮಂಗಳೂರು ಲಿಟ್ ಫೆಸ್ಟ್ ನಲ್ಲಿದ್ದ ಸಾಹಿತ್ಯ ಭಂಡಾರದ ಸ್ಟಾಲ್ ನಲ್ಲಿ ಪುಸ್ತಕವನ್ನು ನೋಡುತ್ತಿದ್ದಾಗ "ಧೀರೆ" ಪುಸ್ತಕ ಕಣ್ಣಿಗೆ ಬಿತ್ತು. ಹೆಸರೇ ಆಕರ್ಷಕವಾಗಿತ್ತು. ಪುಸ್ತಕದ ಎರಡು ಪುಟ ಓದುತ್ತಿದ್ದಂತೆ ನನಗೆ ಇಷ್ಟವಾಗಿ ಕೊಳ್ಳಲು ಇತರ ಪುಸ್ತಕಗಳ ಜೊತೆ ಸೇರಿಸಿದೆ. ನಾನು ಪುಸ್ತಕವನ್ನು ಓದುತ್ತಿದ್ದನ್ನು ಕಂಡು ಅಲ್ಲಿದ್ದ ವ್ಯಕ್ತಿಯೊಬ್ಬರು "ಪುಸ್ತಕ ತುಂಬಾ ಚೆನ್ನಾಗಿದೆ. ಮಹಾರಾಷ್ಟ್ರದಲ್ಲಿ ಸ್ತ್ರೀ ಶಿಕ್ಷಣಕ್ಕಾಗಿ ದುಡಿದವರೊಬ್ಬರ ಕಥೆ" ಎಂದು ಹೇಳಿದಾಗ ಇನ್ನಷ್ಟು ಆಸಕ್ತಿ ಮೂಡಿಸಿತು.            ಸ್ವಾತಂತ್ರ್ಯಾ ಪೂರ್ವದಲ್ಲಿ ಸ್ತ್ರೀ ಶಿಕ್ಷಣಕ್ಕಾಗಿ ಶ್ರಮಿಸಿದ ಹಾಗು ತಮ್ಮೆಲ್ಲ ಹೆಣ್ಣುಮಕ್ಕಳನ್ನು ಓದಿಸಿದ ಮಹಾರಾಷ್ಟ್ರದ ಕುಟುಂಬಕ್ಕೆ ಸೊಸೆಯಾಗಿ ಹೋದ ಮಾಲತಿಬಾಯಿ ಕೇತ್ಕರ್ ಅವರ ಜೀವನ ಚರಿತ್ರೆಯೇ "ಧೀರೆ".              ಮುಂಬಯಿಯ ಮಲಾಡದಲ್ಲಿ ಹುಟ್ಟಿದ ಮಾಲತಿಬಾಯಿ ಬಹಳ ಚಿಕ್ಕ ವಯಸ್ಸಿನಲ್ಲಿಯೇ ತಂದೆಯನ್ನು ಕಳೆದುಕೊಂಡರು. ಏಳನೇ ಕ್ಲಾಸ್ ನವರೆಗೆ ಓದಿದ ಇವರು ಮುಂದೆ ಓದುವ ಇಚ್ಛೆಯಿದ್ದರೂ ಸಹ ಹೆಚ್ಚಿನ ಖರ್ಚು ಅಮ್ಮನ ಮೇಲೆ ಬೀಳು...

ಓದಿನ ಸುಖ "ಬಲಾಢ್ಯ ಹನುಮ"

ಪುಸ್ತಕದ ಹೆಸರು : ಬಲಾಢ್ಯ ಹನುಮ ಪ್ರಕಾಶನದ ಹೆಸರು : ಅಯೋಧ್ಯಾ ಪ್ರಕಾಶನ          ಅಯೋಧ್ಯಾ ಪ್ರಕಾಶನದಿಂದ ರಾಮಾಯಣದ ಪುಸ್ತಕವನ್ನು ಓದಿ ಇಷ್ಟಪಟ್ಟ ನಾವು ಆನಂತರ ಬಲಾಢ್ಯ ಹನುಮ ಪುಸ್ತಕವನ್ನು ತರಿಸಿಕೊಂಡೆವು. ಮಗಳು ರಾಮಾಯಣ ಪುಸ್ತಕವನ್ನು ಓದಿ ಅದರಲ್ಲಿರುವ ಕಥೆಯನ್ನು ಹೇಳುವಂತೆ ಅವಳ ಅಜ್ಜ ಅಜ್ಜಿಯಲ್ಲಿ ಪೀಡಿಸುತ್ತಿದ್ದಳು. ಆ ಪುಸ್ತಕ ಆಂಗ್ಲ ಭಾಷೆಯಲ್ಲಿ ಇದ್ದುದರಿಂದ ಅವರಿಗೆ ಅದನ್ನು ಓದಲು ಕಷ್ಟವಾಗುತ್ತಿದ್ದರಿಂದ ಈ ಪುಸ್ತಕದ ಕನ್ನಡ ಅವತರಣಿಕೆಯನ್ನು ತರಿಸಿದೆ. ಈ ಪುಸ್ತಕವು ಸಹ ರಾಮಾಯಣ ಪುಸ್ತಕದಂತೆ ಅತ್ಯಂತ ಆಕರ್ಷಕವಾಗಿದೆ. ಹನುಮಂತನ ಬಾಲ್ಯದ ತುಂಟಾಟಗಳು ಹೊಟ್ಟೆ ಹುಣ್ಣಾಗುವಂತೆ ನಗಿಸುತ್ತವೆ. ಹನುಮಂತನ ಸಾಹಸ ಮಕ್ಕಳಲ್ಲಿ ಸ್ಫೂರ್ತಿಯನ್ನು ತುಂಬುತ್ತದೆ. ಚಿತ್ರಗಳೂ ಸಹ ಅತ್ಯಂತ ಆಕರ್ಷಕವಾಗಿವೆ. ಆದರೆ ಒಂದೇ ಒಂದು ಸಣ್ಣ ಕೊರತೆಯೆಂದರೆ ಹನುಮಂತನ ಕಥೆಯನ್ನು ವಿವಿಧ ಮೂಲಗಳಿಂದ ಪಡೆದುಕೊಂಡ ಕಾರಣವೋ ಏನೋ ಕಥೆಯ ಸರಣಿಯಲ್ಲಿ ನಿರಂತರತೆ ಇಲ್ಲ. ಇದೊಂದು ಸಣ್ಣ ಕೊರತೆ ಬಿಟ್ಟರೆ ಈ ಪುಸ್ತಕವೂ ಸಹ ಬಹಳ ಇಷ್ಟವಾಯಿತು.

ಓದಿನ ಸುಖ "ಮ್ಯಾಜಿಕ್ ಪಾಟ್ (ಸಾಪ್ತಾಹಿಕ ಪತ್ರಿಕೆ)"

Image
ಪುಸ್ತಕದ ಹೆಸರು: ಮ್ಯಾಜಿಕ್ ಪಾಟ್ (ಸಾಪ್ತಾಹಿಕ ಪತ್ರಿಕೆ)       ಮಗಳಿಗೆ ಸುಮಾರು ಎರಡು - ಎರಡೂವರೆ ವರ್ಷವಾದಾಗ ಮನೆಯ ಹತ್ತಿರದ ಗ್ರಂಥಾಲಯಕ್ಕೆ ನಾನು ಹೋಗುವಾಗ ಅವಳನ್ನೂ ಕರೆದುಕೊಂಡು ಹೋಗುತ್ತಿದ್ದೆ. ಅಲ್ಲಿ ಮುಂಭಾಗದಲ್ಲಿ ವಿವಿಧ ಪತ್ರಿಕೆಗಳನ್ನು ಜೋಡಿಸಿರುತ್ತಿದ್ದರು. ಅವುಗಳ ಮಧ್ಯೆ ಮ್ಯಾಜಿಕ್ ಪಾಟ್ ಪುಸ್ತಕವೂ ಇತ್ತು. ಅದನ್ನು ನೋಡಿದ್ದೇ ತಡ ಮಗಳು ಕೈಗೆತ್ತಿಕೊಂಡಿದ್ದಳು. ಅಷ್ಟು ಆಕರ್ಷಣೀಯವಾಗಿತ್ತು ಆ ಪತ್ರಿಕೆ. ಆದರೆ ಪತ್ರಿಕೆಗಳನ್ನು ಮನೆಗೆ ತೆಗೆದುಕೊಂಡು ಹೋಗಲು ಅವಕಾಶವಿಲ್ಲದುದರಿಂದ ಮನೆಗೆ ಬಂದು ಈ ಪತ್ರಿಕೆಯ ಬಗ್ಗೆ ಅಂತರ್ಜಾಲದಲ್ಲಿ ಜಾಲಾಡಿ ಚಂದಾದಾರರರಾದೆವು. ಅಮೇಲಿನಿಂದ ಪ್ರತಿ ಬುಧವಾರ ಮ್ಯಾಜಿಕ್ ಪಾಟ್ ಗೋಸ್ಕರ ಕಾಯುವುದೇ ನಮ್ಮ ಕೆಲಸವಾಯಿತು. ಒಮ್ಮೆ ಕೈಗೆ ಬಂದೊಡನೆಯೇ ಅದರಲ್ಲಿರುವ ಚಟುವಟಿಕೆ ಗಳನ್ನೆಲ್ಲ ಮಾಡಿ ಮುಗಿಸಿದರೆ ಸಮಾಧಾನ. ಚಿತ್ರಕಥೆಗಳು, ದಾರಿ ತೋರಿಸುವುದು, ಚುಕ್ಕಿ ಜೋಡಿಸುವುದು, ಸಾಹಸಕಥೆ, ನೀತಿಕಥೆ, ಬಣ್ಣ ತುಂಬುವುದು, ಅಕ್ಷರಗಳನ್ನು ಬರೆಯುವುದು, ಸಂಖ್ಯೆಗಳ ಗಣನೆ, ಚಿಕ್ಕ ಪುಟ್ಟ ಕವನಗಳು ಹೀಗೆ ಪುಟ ಪುಟವೂ ಮಕ್ಕಳನ್ನು ಆಕರ್ಷಿಸುವಂತೆ ರೂಪಿಸಿದ್ದಾರೆ. ಅಷ್ಟೇ ಅಲ್ಲದೆ ಮಕ್ಕಳು ಸ್ವತಃ ಮಾಡಲು ಸುಲಭವಾಗಿರುವಂತಹ ಪೇಪರ್ ಕ್ರಾಫ್ಟ್ ಕೂಡ ಇದೆ. ಇದನ್ನು ನೋಡಿ ಮಗಳು ಬಹಳ ಪೇಪರ್ ಕ್ರಾಫ್ಟ್ ಅನ್ನು ತಯಾರಿಸಿದ್ದಾಳೆ. ಅದಲ್ಲದೇ ಸ್ವಲ್ಪ ದೊಡ್ಡ ವಯಸ್ಸಿನ ಮಕ್ಕಳೇ ತಯಾರ...

ಓದಿನ ಸುಖ "Illustrated Ramayana"

ಪುಸ್ತಕದ ಹೆಸರು : Illustrated Ramayana  ಪ್ರಕಾಶನ : ಅಯೋಧ್ಯಾ ಪ್ರಕಾಶನ           ಮಗಳು ಟಿವಿಯಲ್ಲಿ 'ಲಿಟಲ್ ಕೃಷ್ಣ ' ಕಾರ್ಟೂನ್ ನೋಡಿ ಇಷ್ಟಪಟ್ಟಿದ್ದರಿಂದ ಇನ್ನು ರಾಮಾಯಣ ಕಥೆಯನ್ನು ಹೇಳಲು ಆರಂಭಿಸೋಣ ಎಂದು ಆಲೋಚಿಸುತ್ತಿದ್ದಾಗ ಈ ಮೊದಲೇ ಅವಳಿಗೋಸ್ಕರ ಒಂದು ರಾಮಾಯಣ ಪುಸ್ತಕವನ್ನು ತಂದಿದ್ದೆ. ಅದರ ಕಥೆಗಳನ್ನು ಓದಿ ಹೇಳುತ್ತಿದ್ದಾಗ ಅದು ಅವಳಿಗೆ ಅಷ್ಟೊಂದು ಆಕರ್ಷಣೀಯ ಎಂದು ಅನಿಸುತ್ತಿರಲಿಲ್ಲ. ಹಾಗಾಗಿ ಅರ್ಧದಲ್ಲೇ ಕಥೆ ಹೇಳುವುದನ್ನು ಕೈ ಬಿಟ್ಟಿದ್ದೆ. ಆಗ ನನಗೆ ಅಯೋಧ್ಯಾ ಪ್ರಕಾಶನದವರು ಹೊರತಂದ Illustrated Ramayana ಪುಸ್ತಕದ ಬಗ್ಗೆ ತಿಳಿದು ಪುಸ್ತಕವನ್ನು ತರಿಸಿಕೊಂಡು, ಅವರು ಈ ಪುಸ್ತಕದ ಬಗ್ಗೆ ನಡೆಸಿದ ರಸಪ್ರಶ್ನೆ ಸ್ಪರ್ಧೆಗೂ ಸಹ ನೊಂದಾಯಿಸಿದೆ.             ಒಮ್ಮೆ ಪುಸ್ತಕ ಕೈಗೆ ಬಂದಿದ್ದೇ ತಡ ಕೆಳಗಿಡಲು ಮನಸ್ಸೇ ಬರುತ್ತಿರಲಿಲ್ಲ ಅವಳಿಗೆ. ಕಥೆಯದ್ದೇ ಒಂದು ತೂಕವಾದರೆ ಪುಟ ತುಂಬಾ ಆವರಿಸಿದ ಚಿತ್ರಗಳದ್ದು ಇನ್ನೊಂದು ತೂಕ. ಕಥೆ ಮೂಲ ವಾಲ್ಮೀಕಿ ರಾಮಾಯಣಕ್ಕೆ ಹೆಚ್ಚು ನಿಷ್ಠವಾಗಿದೆ. ಚಿಕ್ಕ ಸುಂದರ ವಾಕ್ಯಗಳು ಮಕ್ಕಳಿಗೆ ಕಥೆಯನ್ನು ಅರ್ಥ ಮಾಡಿಸಲು ಸಹಾಯಕಾರಿಯಾಗಿದೆ. "ಕಾಡಲ್ಲಿ ರಾಕ್ಷಸರು ಇದ್ದಾರೆ ಎಂದು ತಿಳಿದಿದ್ದೂ ಸಹ ರಾಮ ಯಾಕೆ ಕಾಡಿಗೆ ಹೋಗಲು ಒಪ್ಪಿಕೊಂಡ?" "ಕೈಕೇಯಿ ಯಾಕೆ ರಾಮನನ್ನು ಕಾಡಿಗೆ ಕಳುಹಿಸಿದಳು?" ಮುಂತಾದ ಪ್ರಶ್ನೆ...

2024 ರಲ್ಲಿ ನಾನು ಓದಿದ ಪುಸ್ತಕಗಳು

        ಪುಸ್ತಕವನ್ನು ಓದುವುದು ನೆಚ್ಚಿನ ಹವ್ಯಾಸ. ಆದರೆ ಓದಿದ ಪುಸ್ತಕದ ಬಗ್ಗೆ ನನ್ನ ಅಭಿಪ್ರಾಯವನ್ನು ಬರೆಯಲು ಸ್ವಲ್ಪ ಸೋಮಾರಿತನ. ಒಂದು ಪುಸ್ತಕವನ್ನು ಓದಿ ಅದರ ಬಗ್ಗೆ ಅನಿಸಿಕೆಯನ್ನು ಬರೆದ ಆನಂತರವೇ ಇನ್ನೊಂದು ಪುಸ್ತಕವನ್ನು ಓದಬೇಕೆಂಬ ನಿಯಮವನ್ನು ನಾನೇ ಮಾಡಿ, ಅದನ್ನು ನಾನೇ ಮುರಿದು ಇನ್ನೊಂದು ಪುಸ್ತಕವನ್ನು ಓದುತ್ತೇನೆ. ಹೀಗಾಗಿ ಪುಸ್ತಕದ ಓದಿನ ಓಟ ಮುಂದುವರಿಯುತ್ತದೆ. ಅನಿಸಿಕೆ ಬರೆಯುವುದು ಹಿಂದೆಯೇ ಉಳಿಯುತ್ತದೆ. ಕುಟುಂಬ ಸದಸ್ಯರ ಅನಾರೋಗ್ಯ, ಆಸ್ಪತ್ರೆ ವಾಸ, ಪ್ರವಾಸ, ತಿರುಗಾಟ ಇವುಗಳ ಜೊತೆಗೆ ಈ ವರ್ಷ ನಾನು ಓದಿದ ಪುಸ್ತಕಗಳು ಇಂತಿವೆ. 1) ಜೊತೆ ಜೊತೆಯಲಿ - ಗೀತಾ ಬಿ. ಯು  2) ರೂಪದರ್ಶಿ - ಕೆ.ವಿ.ಅಯ್ಯರ್  3) ಬಳ್ಳಿ ಕಾಳ ಬೆಳ್ಳಿ - ಕೆ ಎನ್ ಗಣೇಶಯ್ಯ  4) ಮನ್ವಂತರ - ವಸುಮತಿ ಉಡುಪ  5) ಸಮಕಾಲೀನ ಕನ್ನಡದ ಸಣ್ಣ ಕಥೆಗಳು - ಸಂಪಾದಕರು: ರಾಮಚಂದ್ರ ಶರ್ಮ  6) ಅವಧೇಶ್ವರಿ - ಶಂಕರ ಮೊಕಾಶಿ ಪುಣೇಕರ್  7) ಇಲ್ಲಿಯವರೆಗಿನ ನೇಮಿಚಂದ್ರರ ಕಥೆಗಳು - ನೇಮಿಚಂದ್ರ 8) ಅಂಚು - ಎಸ್ ಎಲ್ ಭೈರಪ್ಪ  9) ಸಾವೇ ಬರುವುದಿದ್ದರೆ ನಾಳೆ ಬಾ! - ನೇಮಿಚಂದ್ರ 10) ಅಮೇರಿಕಾದಲ್ಲಿ ನಾನು - ಬಿ.ಜಿ.ಎಲ್ ಸ್ವಾಮಿ 11) ಅಮೇರಿಕನ್ನಡದ ಕಥೆಗಳು - ಸಂಪಾದಕರು: ನಾಗಲಕ್ಷ್ಮಿ ಹರಿಹರೇಶ್ವರ 12) ತುಮುಲ - ಸುಧಾಮೂರ್ತಿ  13) ಅಗೆದಷ್ಟೂ ನಕ್ಷತ್ರ - ಸುಮಂಗಲಾ...

ಓದಿನ ಸುಖ - "ಅಮೇರಿಕದಲ್ಲಿ ನಾನು"

Image
ಪುಸ್ತಕದ ಹೆಸರು : ಅಮೇರಿಕಾದಲ್ಲಿ ನಾನು  ಲೇಖಕರು : ಬಿ ಜಿ ಎಲ್ ಸ್ವಾಮಿ               ಕಾಲೇಜಿನಲ್ಲಿದ್ದಾಗ ಬಿ ಜಿ ಎಲ್ ಸ್ವಾಮಿಯವರ ತಮಿಳು ತಲೆಗಳ ನಡುವೆ, ಹಸಿರು ಹೊನ್ನು ಮುಂತಾದ ಕೃತಿಗಳನ್ನು ಓದಿದ್ದರಿಂದ ಅವರ ಹಾಸ್ಯ ಭರಿತ ಶೈಲಿ ಪರಿಚಿತವೇ ಆಗಿತ್ತು. ಆದರೆ ಈ ಪುಸ್ತಕದ ಬಗ್ಗೆ ಎಲ್ಲಿಯೂ ವಿಮರ್ಶೆ, ಅನಿಸಿಕೆಯನ್ನು ಓದಿಲ್ಲದಿದ್ದರಿಂದ ಕುತೂಹಲದಿಂದ ಕೈಗೆತ್ತಿಕೊಂಡೆ. ಈ ಪುಸ್ತಕವನ್ನು ಪ್ರವಾಸ ಕಥನ ಎನ್ನುವುದಕ್ಕಿಂತ ಅಮೇರಿಕಾದಲ್ಲಿ ಅನುಭವಿಸಿದ ಲೇಖಕರ ಅನುಭವ ಕಥನ ಎಂದರೆ ಹೆಚ್ಚು ಸೂಕ್ತವಾಗುತ್ತದೆ. ಲೇಖಕರ ಹಾಗೂ ಸಹ ಪ್ರಯಾಣಿಕರ ಪರದಾಟದ ಹಾಸ್ಯ ಪ್ರಸಂಗಗಳು ನಮ್ಮನ್ನು ನಗಿಸುತ್ತವೆ.              ಮೊದಲ ಬರಹ 'ಹಡಗಿನಲ್ಲಿ'. 2ನೇ ಮಹಾಯುದ್ಧ ದಿಂದ ಹಿಂತಿರುಗುತ್ತಿದ್ದ ಸೈನಿಕರೊಂದಿಗೆ ಹಡಗಿನಲ್ಲಿ ಪಯಣಿಸುತ್ತಿದ್ದಾಗ ಒಂದೇ ಆವರಣದಲ್ಲಿ ಸುಮಾರು 300 ಜನರ ಉಪಯೋಗಕ್ಕಿರುವ, ಎದುರು ಸಾಲಿನಲ್ಲಿ ಕೂತವರನ್ನು, ಬಂದು ಹೋಗುವವರನ್ನು ಕಾಣುವಂತೆ ನಿರ್ಮಿಸಿದ ಶೌಚಾಲಯಗಳಲ್ಲಿ ಭಾರತೀಯರ ಪರದಾಟ, ಅದನ್ನು ಕಂಡು ಹಡಗಿನ ಕ್ಯಾಪ್ಟನ್ ಸೂಚಿಸಿದ ಪರಿಹಾರ ಎಲ್ಲವೂ ಓದುಗರನ್ನು ನಗೆಗಡಲಲ್ಲಿ ತೇಲಿಸುತ್ತದೆ.             'ನನ್ನ ಟೋಪಿ' ಎಂಬ ಶೀರ್ಷಿಕೆಯ ಬರಹ...

ಓದಿನ ಸುಖ 'ಸೆಕೆಂಡ್ ಇನ್ನಿಂಗ್ಸ್'

Image
ಪುಸ್ತಕದ ಹೆಸರು: ಸೆಕೆಂಡ್ ಇನ್ನಿಂಗ್ಸ್  ಲೇಖಕರು : ಗೀತಾ ಬಿ.ಯು.             'ಸೆಕೆಂಡ್ ಇನ್ನಿಂಗ್ಸ್' ಸುಮಾರು ಹದಿನೇಳು ಸಣ್ಣ ಕಥೆಗಳ ಸಂಗ್ರಹ. ಲೇಖಕಿಯೇ ಹೇಳಿದಂತೆ ವೃದ್ಧಾಪ್ಯ, ಸಂಬಂಧಗಳು, ಸ್ವಾರ್ಥ, ಆಸ್ತಿ, ಹಕ್ಕು ಬಾಧ್ಯತೆಗಳು ಇಲ್ಲಿರುವ ಕಥೆಗಳ ಕೇಂದ್ರ. ಕಥೆಯೊಂದನ್ನು ಬರೆಯಲು ಪ್ರೇರಣೆಯಾದ ಘಟನೆ, ಕಾಡಿದ ಅಂಶ, ತನ್ನ ಸಂಬಂಧದೊಳಗೂ ಲೆಕ್ಕಾಚಾರ ಹಾಕುವ ಮನುಷ್ಯನ  ಸ್ವಭಾವ, ತಲೆಮಾರುಗಳ ನಡುವಿನ ಅಂತರ, ಕಥೆ ಪ್ರಕಟವಾದ ಪತ್ರಿಕೆ, ಕಥೆಗೆ ಓದುಗರ ಪ್ರತಿಸ್ಪಂದನೆ ಹೀಗೆ ಲೇಖಕಿಗೆ ಕಾಡಿದ ಅಂಶ ಇವೆಲ್ಲವನ್ನೂ ಪ್ರತಿ ಕಥೆಯ ಮೊದಲು ಬರೆದಿದ್ದಾರೆ. ಹಾಗಾಗಿ ಕಥೆಯೊಂದನ್ನು ಓದುವ ಮೊದಲು ಕಥೆಯ ಹೂರಣ, ಕಥೆಯ ಆಶಯ ಓದುಗರಿಗೆ ಮನದಟ್ಟಾಗುವುದು ಈ ಪುಸ್ತಕದ ಧನಾತ್ಮಕ ಅಂಶ. ಸರಳ, ಸುಂದರ ಭಾಷೆ, ಓದಿಸಿಕೊಂಡು ಹೋಗುವ ಭಾಷಾ ಶೈಲಿಯಿಂದಾಗಿ ಪುಸ್ತಕ ಬಹಳ ಇಷ್ಟವಾಗುತ್ತದೆ.             ಆತ್ಮೀಯರಿಗೆ ಕೊಡುವ ಉಡುಗೊರೆಯಲ್ಲೂ ಲೆಕ್ಕಾಚಾರ ಹಾಕುವ ಮನುಷ್ಯನನ್ನು ಪ್ರೀತಿ, ವಿಶ್ವಾಸ ಮುಂತಾದ ಗುಣಗಳು ಆಳದೆ ಸ್ವಾರ್ಥ, ತಿರಸ್ಕಾರಗಳು ಆಳುತ್ತವೆ ಎಂದು ಬೇಸರ ವ್ಯಕ್ತಪಡಿಸುತ್ತಾ ಲೇಖಕಿ 'ಆಸೆ' ಎಂಬ ಕಥೆಯಲ್ಲಿ ನಾಯಕಿಯ ಮೂಲಕ "ಆಸೆ ಅಂದ್ರೆ ನಾನೇ ಮಾಡಿಸ್ಕೋಬೇಕು, ತೊಟ್ಕೋಬೇಕು, ಉಟ್ಕೋಬೇಕು ಅನ್ನೋದಷ್ಟೇ ಅಲ್ಲ. ...

ನ್ಯಾನೋ ಕಥೆಗಳು

ನ್ಯಾನೋ ಕಥೆ ೧ ಸಂದು ಗೊಂದಲಿನಲ್ಲಿರುವ, ಗಾಳಿ ಬೆಳಕು ಸರಿಯಾಗಿ ಬೀಳದ ಸಣ್ಣ ಗೂಡಿನಂತಹ ಡೇ ಕೇರ್ ನಲ್ಲಿ ಅಳುತ್ತಿರುವ ತನ್ನ ಮಗುವನ್ನು ಬಿಟ್ಟು, ವಿಶಾಲವಾದ ಮನೆಯಲ್ಲಿ, ತನ್ನ ತಾಯಿಯನ್ನು ನೆನೆದು ಅಳುತ್ತಿದ್ದ ಮಗುವನ್ನು ಸಮಾಧಾನಗೊಳಿಸುತ್ತಿದ್ದಳು ಅವಳು. ನ್ಯಾನೋ ಕಥೆ ೨ ನಗರದ ಪ್ರಸಿದ್ಧ ಹಾಡುಗಾರ್ತಿ, ರಾತ್ರಿಯ ಸಂಗೀತ ಕಛೇರಿಯನ್ನು ಮುಗಿಸಿ ಬಂದಾಗ ಅವಳ ಮಗು ಕೆಲಸದವಳ ಕೀರಲು ಧ್ವನಿಯ ಜೋಗುಳವನ್ನು ಕೇಳುತ್ತಾ ನಿದ್ರೆಗೆ ಜಾರಿತ್ತು.

ಓದಿನ ಸುಖ "ಅಮೆರಿಕನ್ನಡದ ಕಥೆಗಳು"

ಪುಸ್ತಕದ ಹೆಸರು : ಅಮೆರಿಕನ್ನಡದ ಕಥೆಗಳು ಸಂಪಾದಕರು : ನಾಗಲಕ್ಷ್ಮಿ ಹರಿಹರೇಶ್ವರ           ಈ ಪುಸ್ತಕವು ಕನ್ನಡ ನೆಲದಿಂದ ಅಮೇರಿಕಾಕ್ಕೆ ವಲಸೆ ಹೋದ ಹಲವರು ತಮ್ಮ ತಾಯ್ನುಡಿಯಲ್ಲಿ ಬರೆದ ಕಥೆಗಳ ಸಂಗ್ರಹ. ತಮ್ಮ ಅನುಭವಕ್ಕೆ ದಕ್ಕಿದ ವಿಷಯಗಳ ಮೇಲೆ ಕಥೆ, ಪ್ರಬಂಧಗಳ ಮೂಲಕ ಅಕ್ಷರ ರೂಪಕ್ಕಿಳಿಸಿದ್ದಾರೆ. ವಲಸೆ ಎಂಬುದು ಮಾನವ ನಾಗರೀಕತೆಯಲ್ಲಿ ಬಹು ಮುಖ್ಯ ಪಾತ್ರವನ್ನು ವಹಿಸುತ್ತದೆ. ವಲಸೆ ಹೋಗುವಾಗ ತಮ್ಮ ಪ್ರೀತಿಯ ತಾಯ್ನೆಲವನ್ನು ಬಿಟ್ಟು ಬರುವಾಗಿನ ದುಃಖ, ಸಂಬಂಧಿಕರನ್ನು ಬಿಟ್ಟು ಬರುವ ಬೇಸರ, ಮಾನಸಿಕ ತಾಕಲಾಟ, ಒಳ್ಳೆಯ ಜೀವನವನ್ನು ಕಟ್ಟಿಕೊಳ್ಳುವ ಅನಿವಾರ್ಯತೆ, ಹೊಸ ನೆಲದ ಸಂಪ್ರದಾಯಗಳನ್ನು ಪರಿಪಾಲಿಸುವ ಜೊತೆ ಜೊತೆಗೆ ಅಲ್ಲಿನ ಜೀವನ ಶೈಲಿಯನ್ನು ಅಪ್ಪಿಕೊಳ್ಳುವ ಅನಿವಾರ್ಯತೆ, ಅಮೇರಿಕಾದ ವೀಸಾ ಪಡೆದುಕೊಳ್ಳುವ ಪಡಿಪಾಟಲು ಹೀಗೆ ಹಲವು ಭಾವಗಳು ವಿವಿಧ ಕಥೆಗಳಲ್ಲಿ ವ್ಯಕ್ತವಾಗಿವೆ. ಇದರಲ್ಲಿ ಕಥೆಗಳನ್ನು ಬರೆದವರು ಯಾರೂ ವೃತ್ತಿಯಿಂದ ಕಥೆಗಾರರಲ್ಲ. ಆದರೂ ಸಹ ಎಲ್ಲಾ ಕಥೆಗಳು ಉತ್ತಮವಾಗಿದ್ದು, ಓದಿಸಿಕೊಂಡು ಹೋಗುತ್ತವೆ. ಕೆಲವು ಕಥೆಗಳು ನಗಿಸಿದರೆ, ಮತ್ತೆ ಕೆಲವು ವಿಷಾದವನ್ನು ಮೂಡಿಸುತ್ತವೆ.

ಓದಿನ ಸುಖ " ಸಾವೇ ಬರುವುದಿದ್ದರೆ ನಾಳೆ ಬಾ!"

Image
ಪುಸ್ತಕದ ಹೆಸರು: ಸಾವೇ ಬರುವುದಿದ್ದರೆ ನಾಳೆ ಬಾ! ಲೇಖಕರು : ನೇಮಿಚಂದ್ರ            ಪುಸ್ತಕದ ಶೀರ್ಷಿಕೆಯಾದ 'ಸಾವೇ ಬರುವುದಿದ್ದರೆ ನಾಳೆ ಬಾ!' ಮೊದಲ ಲೇಖನ. ಸಾವು 'ಒಳಗೆ ಬರಲೇ?' ಎಂದಾಗ 'ಸ್ಪಲ್ಪ ಕೆಲಸವಿದೆ' ಎಂದ ಅನುಪಮ ನಿರಂಜನ 13 ವರ್ಷಗಳಷ್ಟು ಕಾಲ ಬತ್ತದ ಜೀವನೋತ್ಸಾಹದೊಂದಿಗೆ ಬದುಕಿದ ಬಗ್ಗೆ, 1970 ದಶಕದಲ್ಲಿ 'ಟಾಪ್ ಅಮೆರಿಕನ್ ಫ್ಯಾಷನ್ ಡಿಸೈನರ್' ಎಂದು ಗುರುತಿಸಲ್ಪಟ್ಟ ಮಾಯಾ ತಿವಾರಿ ಗರ್ಭಕೋಶದ ಕ್ಯಾನ್ಸರ್ ನಿಂದ ಬಳಲಿ ಕೊನೆಗೆ ಯೋಗ, ಪ್ರಾಣಾಯಾಮ, ಧ್ಯಾನ, ಪೌಷ್ಟಿಕ ಆಹಾರದ ಮೂಲಕ ತಮ್ಮ ಜೀವನ ವಿಧಾನವನ್ನು ಬದಲಿಸಿ ಮರಳಿ ಬದುಕಿಗೆ ಬಂದ ಬಗ್ಗೆ ಈ ಬರಹದಲ್ಲಿ ಬರೆದಿದ್ದಾರೆ.          ಇಡೀ ದೇಹ ಸ್ವಾಧೀನವಿಲ್ಲದ, ಮಾತನಾಡಲಾರದ, ತುತ್ತು ಕೂಡ ನುಂಗಲಾರದ ಫೀಡಿಂಗ್ ಟ್ಯೂಬ್ ನ ಮೂಲಕ ಬದುಕುಳಿದಿದ್ದ ವಿಜ್ಞಾನಿ ಸ್ಪೀಫನ್ ಹಾಕಿಂಗ್ ನ ಜೀವನ ಕಥನ, ತಾವು ಪೈಲೆಟ್ ಆಗಿದ್ದ ಅನಿಲ್ ಕುಮಾರ್ ತಮ್ಮ ಜೀವನದಲ್ಲಿ ನಡೆದ ಅಪಘಾತದಿಂದಾಗಿ, ಕುತ್ತಿಗೆ ಕಳಗಿನ ಯಾವೊಂದು ಭಾಗಗಳೂ ಸಹ ಸ್ವಾಧೀನವಿಲ್ಲವಾಗಿ, ಗಾಲಿ ಕುರ್ಚಿಗೆ ಬಂಧಿತರಾದಾಗಲೂ ಸಹಾ ತಮ್ಮ ಜಿವನವನ್ನು ಹೇಗೆ ನಡೆಸಿದರು ಎಂಬ ಸ್ಫೂರ್ತಿಯ ಬರಹವನ್ನು 'ಬದುಕು ನಿಲ್ಲಲಿಲ್ಲ ಅಲ್ಲಿಗೇ' ಯಲ್ಲಿ ಬರೆದಿದ್ದಾರೆ.               'ಮಿದುಳು ಮತ್ತೆ ಕಲಿಯಬಲ್ಲುದು'...

ಸೋತು ಗೆದ್ದವರು

ಪುಸ್ತಕದ ಹೆಸರು : ಸಾವೇ ಬರುವುದಿದ್ದರೆ ನಾಳೆ ಬಾ!(ಬದುಕು ಬದಲಿಸಬಹುದು -2) ಲೇಖಕರು : ನೇಮಿಚಂದ್ರ              ಪುಸ್ತಕದ ಶೀರ್ಷಿಕೆಯೇ ಅಂಕಣವಾಗಿರುವ ಬರಹದಲ್ಲಿ ತೀವ್ರತರವಾದ ಕ್ಯಾನ್ಸರ್ ನಿಂದ ಬಳಲಿ, ಸಾವಿನ ಕದ ತಟ್ಟಿ ಬಂದು ಮತ್ತೆ ಎದ್ದು ನಿಂತವರ ಕಥೆಯಿದೆ. ನಮ್ಮ ಕನ್ನಡದವರಾದ ಅನುಪಮಾ ನಿರಂಜನ ಅವರು ಸಾವನ್ನು ತಡೆದು ನಿಲ್ಲಿಸಿ, ಶಸ್ತ್ರಚಿಕಿತ್ಸೆ, ರೇಡಿಯೇಶನ್ ಹಾಗೂ ಕಿಮೋಥೆರಪಿಗಳ ನಡುವೆಯೂ ಜೀವನೋತ್ಸಾಹ ಕುಗ್ಗದೇ  ಹದಿಮೂರು ವರ್ಷಗಳ ಕಾಲ ಬದುಕಿದ್ದನ್ನು ಉಲ್ಲೇಖಿಸುತ್ತಾ ಮಾಯಾ ತಿವಾರಿಯ ಕಾನ್ಸರ್ ಹೋರಾಟದ ಸೋಲು ಗೆಲುವನ್ನು ದಾಖಲಿಸಿದ್ದಾರೆ.                   ಮೂಲತಃ ಭಾರತೀಯರಾದ ಮಾಯಾ ತಿವಾರಿಯವರ ಪೂರ್ವಜರನ್ನು ಬ್ರಿಟಿಷರು, ಭಾರತದಿಂದ ದಕ್ಷಿಣ ಅಮೆರಿಕದ ಪುಟ್ಟ ದೇಶವಾದ 'ಗುಯಾನಾ' ಕ್ಕೆ ಗಂಟು ಮೂಟೆಗಳಂತೆ ಸಮುದ್ರದ ಮೂಲಕ ಸಾಗಿಸಿದ್ದರು. ಆ ದಾರಿಯಲ್ಲಿ ಎಷ್ಟೋ ಮಹಿಳೆಯರ ಮಾನಭಂಗವನ್ನು ಮಾಡಿದ್ದರು. ಎಷ್ಟೋ ಗಂಡಸರನ್ನು ಹೊಡೆದು ಬಡಿದಿದ್ದರು. ಇನ್ನು ಕೆಲವರನ್ನು ಸಮುದ್ರಕ್ಕೆ ಎಸೆದಿದ್ದರು. ಈ ಭೀಕರ ಇತಿಹಾಸದ ನೋವಿನ ನೆನಪನ್ನು ಮುಂದಿನ ಪೀಳಿಗೆಯವರಾದ ಮಾಯಾ ತಿವಾರಿ ಪಿತ್ರಾರ್ಜಿತವಾಗಿ ಪಡೆದಿದ್ದರು. ಅದರಿಂದ ಪಾರಾಗಲು ಯೋಗ, ಪ್ರಾಣಾಯಾಮ, ಧ್ಯಾನವನ್ನು ಅಭ್ಯಾಸ ಮಾಡುತ್ತಿದ್ದರು. ಮುಂದೆ ಗುಯಾನಾ ಬ್ರಿಟಿಷ...

ಸೋತು ಗೆದ್ದವರು

ಪುಸ್ತಕದ ಹೆಸರು : ಸಾವೇ ಬರುವುದಿದ್ದರೆ ನಾಳೆ ಬಾ!(ಬದುಕು ಬದಲಿಸಬಹುದು -2) ಲೇಖಕರು : ನೇಮಿಚಂದ್ರ               "ವಿಧಿ ಬರೆದ ಬರಹವನು ಅಳಿಸಿ" ಎಂಬ ಬರಹದಲ್ಲಿ ಬದುಕು ತನ್ನತ್ತ ಎಸೆದ ಸವಾಲನ್ನು ಸಾಹಸದಿಂದ ಎದುರಿಸಿದ, ಹಿಮಾಲಯ ಹಾಗೂ ರಾಜಸ್ಥಾನದ ಮರುಭೂಮಿಯಲ್ಲಿ ಸಾವಿರಾರು ಮೈಲಿಗಳ ಕಾರ್ ರ್ಯಾಲಿಯಲ್ಲಿ ಭಾಗವಹಿಸಿದ ಮೊದಲ ಪ್ಯಾರಪ್ಲೇಜಿಕ್ ಸಾಹಸಿ ಮಹಿಳೆ ದೀಪಾ ಮಲ್ಲಿಕ್ ಬಗ್ಗೆ ಬರೆದಿದ್ದಾರೆ ಲೇಖಕಿ.              ಹರಿಯಾಣ ಮೂಲದ ದೀಪಾ ಅವರು ತಮ್ಮ ಮೂವತ್ತನೇ ವಯಸ್ಸಿನವರೆಗೂ ಸಾಧಾರಣ ಗೃಹಿಣಿಯಾಗಿದ್ದವರು. ಪತಿ ಕರ್ನಲ್ ವಿಕ್ರಮ್ ಸಿಂಗ್ ಮಲ್ಲಿಕ್ ಭೂಸೇನೆಯಲ್ಲಿ ಅಧಿಕಾರಿ. 1999 ನೇ ಇಸವಿಯಲ್ಲಿ ದೀಪ ಅವರ ಬೆನ್ನಿನ ಹುರಿಯಲ್ಲಿ ಗಡ್ಡೆಯೊಂದು ಬೆಳೆದು ಅವರ ಬದುಕಿನ ತಿರುವನ್ನೇ ಬದಲಿಸಿತು.ಇತ್ತ ಪತಿ ಕಾರ್ಗಿಲ್ ಯುದ್ಧದಲ್ಲಿ ಹೋರಾಡುತ್ತಿದ್ದರೆ, ದೀಪ ಅವರು ತಮ್ಮ ಅನಾರೋಗ್ಯದೊಂದಿಗೆ ಹೋರಾಡುತ್ತಿದ್ದರು. ಈ ಗಡ್ಡೆಯನ್ನು ತೆಗೆಯುವುದರಿಂದ ಮಿದುಳು ಮತ್ತು ಸೊಂಟದ ಕೆಳಗಿನ ದೇಹದ ನಡುವೆ ಕೊಂಡಿ ಕಡಿದು ಹೋಗುವುದರಿಂದ ಮಲ ಮೂತ್ರಗಳ ಸಹಜ ವಿಸರ್ಜನೆ ಸಾಧ್ಯವಿಲ್ಲದೆ, ಗಾಲಿ ಕುರ್ಚಿಗೆ ಅಂಟಬೇಕಾದ ಅನಿವಾರ್ಯತೆ ದೀಪಾ ಅವರಿಗೆ ಎದುರಾಗುತ್ತದೆ. ಆದರೆ ಈ ಅನಿರೀಕ್ಷಿತ ಪರಿಸ್ಥಿತಿಯಿಂದ ಆಘಾತಗೊಂಡರೂ ಚೇತರಿಸಿಕೊಳ್ಳುವ ದೀಪ ಈ ಪ್ರತಿಕೂಲ ಪರಿಸ್ಥಿತಿಯನ್ನು ತಮ...

ದೇವತೆಗಳ ದ್ವೀಪದಲ್ಲಿ ಭಾಗ -5

Image
  ದೇವತೆಗಳ ದ್ವೀಪದಲ್ಲಿ ಭಾಗ - 4                       ಹಿಂದಿನ ರಾತ್ರಿ ಹೋಟೇಲ್ ಅನ್ನು ತಲುಪಿ ಇನ್ನೇನು ಮಲಗುವುದು ಎಂದು ಹೊರಟಾಗಲೇ ನೆನಪಾಗಿದ್ದು ನಾಳೆಯ ತಿರುಗಾಟದ ಸಿದ್ಧತೆ ಮಾಡಿಲ್ಲವೆಂದು. 'ನುಸ ಪೆನಿದ' ಎಂಬ ದ್ವೀಪಕ್ಕೆ ಫೆರ್ರಿಯಲ್ಲಿ  ಹೋಗುವುದೆಂದು ನಿರ್ಧಾರವಾಗಿದ್ದರೂ ಫೆರ್ರಿಯನ್ನು ಮೊದಲೇ ಬುಕ್ ಮಾಡಿರಲಿಲ್ಲ. ಹಾಗಾಗಿ ನವೀನ್ ಅಂತರ್ಜಾಲದಲ್ಲಿ ಹುಡುಕಾಡಿ "ಫೆರ್ರಿಯನ್ನು ಮೊದಲೇ ಬುಕ್ ಮಾಡಬೇಕಿತ್ತು. ಬೇರೆ ಯಾವುದಾದರೂ ಆಯ್ಕೆ ಇದೆಯೇ ಎಂದು  ಹೋಟೆಲ್ ನವರ ಬಳಿ ಕೇಳೋಣ" ಎಂದು ಸ್ವಾಗತಕಾರರಲ್ಲಿ ವಿಚಾರಿಸಿದಾಗ "ಬೆಳಿಗ್ಗೆ ಬೇಗನೆ ಹೊರಡಿ. ಟಿಕೆಟ್ ಸಿಗಬಹುದು" ಎಂದು ಹೇಳಿದರು. ಹಾಗಾಗಿ ಬೆಳಿಗ್ಗೆ ಬೇಗನೆ ಎದ್ದು ಸಿದ್ಧವಾದೆವು.            ನಾವು ಉಳಿದುಕೊಂಡಿದ್ದ 'ಲ ಗ್ರಾಂದೇ' ಹೋಟೆಲ್ ನಿಂದ ಹೋಟೆಲ್ ಉತ್ಸವ್ ಗೆ ಹೋಗಲು 'Grab' ಆ್ಯಪ್ (ನಮ್ಮ ಓಲ, ಉಬರ್ ನಂತಹ ಆ್ಯಪ್) ನಲ್ಲಿ ಕಾರನ್ನು ಬುಕ್ ಮಾಡಿದೆವು. ಕಾರ್ ನಲ್ಲಿ  ಡ್ರೈವರ್ ಬಳಿ ಮಾತನಾಡುತ್ತಾ ನಾವು ನುಸ ಪೆನಿದಕ್ಕೆ ಹೋಗುತ್ತಿರುವ ವಿಷಯವನ್ನು ತಿಳಿಸಿದೆವು. ಆಗ ಡ್ರೈವರ್ "ನುಸ ಪೆನಿದಕ್ಕೆ ಹೋಗುವುದಾಗಿದ್ದರೆ ನೀವು ಇನ್ನೂ ಬೇಗ ಹೊರಡಬೇಕಾಗಿತ್ತು. ಈಗಾಗಲೇ ತಡವಾಗಿದೆ. ನನಗೆ ಪರಿಚಯವಿರುವವರೊಬ್ಬರು ಫೆರ್ರಿ ನಿಲ್ದಾಣದಲ್ಲಿ ...

ದೇವತೆಗಳ ದ್ವೀಪದಲ್ಲಿ ಭಾಗ -4

Image
  ದೇವತೆಗಳ ದ್ವೀಪದಲ್ಲಿ ಭಾಗ - 3                   ಉಬುಡುವನ್ನು ನಮ್ಮ ಮಲೆನಾಡು ಅಥವಾ ಅರೆ ಮಲೆನಾಡಿಗೆ ಹೋಲಿಸಿದರೆ, ಉಲುವಾಟುವನ್ನು ಕರಾವಳಿಗೆ ಹೋಲಿಸಬಹುದು. ಉಬುಡು ಹಸಿರು ಕಾಡುಗಳಿಂದ ಹಾಗೂ ಹೆಚ್ಚು ಹಳ್ಳಿಗಳಿಂದ ಕೂಡಿದ್ದು ಸಾಂಸ್ಕೃತಿಕವಾಗಿ ಶ್ರೀಮಂತವಾಗಿದ್ದರೆ, ಉಲುವಾಟು ಕಡಲತೀರವನ್ನು ಹೊಂದಿದ್ದು ನಗರ ಪ್ರದೇಶವಾಗಿದೆ. ಹಾಗಾಗಿ ಉಬುಡುವಿಗೆ ಹೋಲಿಸಿದರೆ ಉಲುವಾಟು ಸ್ವಲ್ಪ ದುಬಾರಿ.               ನಮ್ಮ ಪ್ರವಾಸದ ಮೂರನೆಯ ದಿನ ಪೂರ್ತಿ ಉಲುವಾಟುವಿನಲ್ಲಿ ಎಂದು ಮೊದಲೇ ನಿರ್ಧಾರವಾಗಿತ್ತು. ಬೆಳಿಗ್ಗೆ ಎದ್ದು ನಾವು ಉಳಿದುಕೊಂಡಿದ್ದ ಹೋಟೆಲ್ ನಲ್ಲಿ ನಮ್ಮ ಬೆಳಗಿನ ಉಪಹಾರವು ನಾವು ಪಾವತಿಸುವ ಬಿಲ್ ನಲ್ಲೇ ಸೇರಿದ್ದರಿಂದ ಹೆಚ್ಚು ಯೋಚಿಸದೆ ಅಲ್ಲಿಯೇ ತಿಂಡಿ ತಿನ್ನೋಣ ಎಂದು ನಿರ್ಧರಿಸಿ ಊಟದ ಹಾಲ್ ನತ್ತ ಹೆಜ್ಜೆ ಹಾಕಿದೆವು. ಅಲ್ಲಿ ಇದ್ದುದು ಬಫೆ ವ್ಯವಸ್ಥೆ. ಬಫೆ ಇಡೀ ಸುತ್ತಾಡಿ ನಮಗೆ ತಿನ್ನಲು ಯೋಗ್ಯವಾದಂತಹದ್ದನ್ನು ಹುಡುಕಿ ತಟ್ಟೆಗೆ ಬಡಿಸಿಕೊಂಡಾಗ ಕಂಡದ್ದು ಎರಡು ತುಂಡು ಬ್ರೆಡ್, ಬಟರ್ ಬನ್, ನಾಲ್ಕೈದು ಹಣ್ಣಿನ ಹೋಳು ಮತ್ತು ಜ್ಯೂಸ್ !! ದೋಸೆ, ಇಡ್ಲಿಯಂತಹ ತಿಂಡಿಯಿಲ್ಲದೆ ಐದು ದಿನಗಳು ಕಳೆದದ್ದರಿಂದ ನಮ್ಮ ನಾಲಿಗೆಯೂ ಸಹ ಜಡ್ಡುಗಟ್ಟಿದ್ದವು. ಪಾಲಿಗೆ ಬಂದದ್ದು ಪಂಚಾಮೃತ ಎಂದುಕೊಂಡು ನಾವು ತಿನ್ನುತ...